ಆಹಾರದ ಸವಾಲುಗಳ ಬಗ್ಗೆ ನಾವು ಕೇಳುತ್ತಲೇ ಇರುತ್ತೇವೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಯೂಟ್ಯೂಬ್ನಲ್ಲಿ ಬೇಕಾದಷ್ಟು ಸಿಗುತ್ತವೆ. ಸಂಘಟಕರು ನೀಡಿದ ಆಹಾರವನ್ನು ನಿಗದಿತ ಸಮಯದೊಳಗೆ ತಿನ್ನಲು ಸಾಧ್ಯವಾದರೆ ನಗದು ಬಹುಮಾನ ಅಥವಾ ವಿವಿಧ ರೀತಿಯ ಆಕರ್ಷಕ ಉಡುಗೊರೆಗಳನ್ನು ನೀಡಲಾಗುತ್ತದೆ. ವಿಶೇಷವಾಗಿ ರೆಸ್ಟೋರೆಂಟ್‌ಗಳು ತಮ್ಮ ಪ್ರಚಾರದ ಭಾಗವಾಗಿ ಇಂತಹ ಸವಾಲುಗಳನ್ನು ಹಾಕುತ್ತಾರೆ. ಇಂತಹ ಸವಾಲುಗಳು ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಮೆಟ್ರೋಪಾಲಿಟನ್ ನಗರಗಳಲ್ಲಿ ಹೆಚ್ಚಾಗಿ ನಡೆಯುತ್ತವೆ. ಒಂದೊಮ್ಮೆ ಸವಾಲನ್ನು ಗೆದ್ದುಕೊಂಡರೆ ವಿಜೇತರಿಗೆ ಭಾರಿ ಬಹುಮಾನಗಳನ್ನು ನೀಡಲಾಗುತ್ತದೆ. ದೆಹಲಿಯಲ್ಲಿರುವ ಚೋಲೆ ಕುಲ್ಚಾ ರೆಸ್ಟೋರೆಂಟ್ ಆಹಾರದ ಸವಾಲುಗಳನ್ನು ಆಯೋಜಿಸುವ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದೆ. ಈ ರೆಸ್ಟೋರೆಂಟ್‌ನ ಸವಾಲನ್ನು ಸ್ವೀಕರಿಸಿದ ವ್ಯಕ್ತಿಯೊಬ್ಬ ಆಹಾರವನ್ನು ಸಖತ್ತಾಗಿ ಬ್ಯಾಟಿಂಗ್ ಮಾಡಿ ಗೆದ್ದು ಆಕರ್ಷಕ ಬಹುಮಾನವನ್ನು ಗೆದ್ದಿದ್ದಾನೆ.
ರೆಸ್ಟೋರೆಂಟ್ ಹಾಕಿದ ಸವಾಲು ಏನೆಂದರೆ, ಅರ್ಧಗಂಟೆಯಲ್ಲಿ 21 ಪ್ಲೇಟ್ ಮಟರ್ ಚೋಲೆ ಕುಲ್ಚೆ ತಿನ್ನಬೇಕು. 21 ಪ್ಲೇಟ್ ಅಂದರೆ ತಮಾಷೆನಾ? ಅಯ್ಯಯ್ಯೋ ಕಷ್ಟಸಾಧ್ಯ. ಆದರೆ ಯೂಟ್ಯೂಬರ್ ಮತ್ತು ಆಹಾರ ಬ್ಲಾಗರ್ ರಜನೀಶ್ ಜ್ಞಾನಿ ಈ ಸವಾಲನ್ನು ಸ್ವೀಕರಿಸಿದರು.
ಆಹಾರವನ್ನು ಸವಾಲನ್ನು ಗೆದ್ದುಕೊಳ್ಳಲು ಸಿದ್ಧರಾದ ರಜನೀಶ್, ಸಮಯ ಆರಂಭವಾಗುತ್ತಿದ್ದಂತೆ ಬ್ಯಾಟಿಂಗ್ ಶುರ ಹಚ್ಚಿಕೊಂಡಿದ್ದಾರೆ. ಆರಂಭದಲ್ಲಿ ಸಲೀಸಾಗಿ ಬಾಯೊಳಗೆ ಮಟರ್ ಚೋಲೆ ಕುಲ್ವೆ ತಿನ್ನುತ್ತಿದ್ದ ರಜನೀಶ್, ನಂತರ ಬಾಯಿಗೆ ತುರುಕಿಕೊಂಡು ತಿನ್ನಲು ಆರಂಭಿಸಿದ್ದಾರೆ. ತಿಂದಿದ್ದನ್ನು ನುಂಗಲು ಮಧ್ಯೆ ಮಧ್ಯೆ 6ರಿಂದ 7 ಗ್ಲಾಸ್ ಲಸ್ಸಿಯನ್ನೂ ಕುಡಿದರು. ಅಷ್ಟೇ ಅಲ್ಲದೆ ನುಂಗುವಾಗ ಜಿಗಿಯುವುದು, ವ್ಯಾಯಾಮ ಮಾಡುವುದು, ಹಿಂದೆ ಮುಂದೆ ತಿರುಗುವುದು ಮುಂತಾದ ಚಟುವಟಿಕೆಗಳನ್ನು ಕೂಡ ಮಾಡಿದ್ದಾರೆ. ಹಂಗೋ ಹಿಂಗೋ ಕಷ್ಟಪಟ್ಟು ರೆಸ್ಟೋರೆಂಟ್ ನಿಯಮಗಳ ಪ್ರಕಾರ 30 ನಿಮಿಷಗಳಲ್ಲಿ 21 ಪ್ಲೇಟ್ ಚೋಲೆಕುಲ್ಚೆಯನ್ನು ತಿಂದು ಮುಗಿಸಿದರು.
ಇದಕ್ಕಾಗಿ, ಬುಲೆಂಟ್ ರೆಸ್ಟೋರೆಂಟ್‌ನ ಮಾಲೀಕರು ರಜನೀಶ್ ಅವರಿಗೆ ಬುಲೆಟ್ ಬೈಕ್ ಕೀ ಹಸ್ತಾಂತರಿಸಿದರು. ಆದರೆ ಇದೆಲ್ಲ ಪ್ರಚಾರದ ಭಾಗವಾಗಿ ನಡೆದಿದೆ ಎಂದು ಬುಲೆಟ್ ಬೈಕ್ ಅನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಈ ಬೈಕ್ ಗೆಲ್ಲಲು ಬಯಸುವವರು ದೆಹಲಿಯ ಮಯೂರ್ ವಿಹಾರ್ ಹಂತ-1 ಪ್ರದೇಶದ ಬನ್ಸಾಲ್ ಸ್ವೀಟ್ಸ್ ಎದುರು ಆಚಾರ್ಯ ನಿಕೇತನ ಮಾರುಕಟ್ಟೆಯಲ್ಲಿ ಹರಿ ಓಂ ಕೆ ವಿಶೇಷ ಚೋಲೆ ಕುಲ್ಚೆಗೆ ಭೇಟಿ ನೀಡುವಂತೆ ಅವರು ಆಹ್ವಾನಿಸಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ