Viral video: ಮೊದಲ ಬಾರಿ ಭಾರತದ ಆಹಾರ ಸೇವಿಸಿದ ಆಸ್ಟ್ರೇಲಿಯಾದ ಮಹಿಳೆಯ ರಿಯಾಕ್ಷನ್
ಭಾರತದಲ್ಲಿ ತಯಾರಾದ ಆಹಾರವನ್ನು ಆಸ್ಟ್ರೇಲಿಯಾ ಮಹಿಳೆ ಮೊದಲ ಬಾರಿಗೆ ಸವಿಸಿದ್ದಾರೆ. ಈ ವೇಳೆ ಅವರು ನೀಡಿದ ರಿಯಾಕ್ಷನ್ನ ವಿಡಿಯೋ ವೈರಲ್ ಆಗುತ್ತಿದೆ.
ಭಾರತೀಯ ಆಹಾರವು ಪ್ರಪಂಚದಾದ್ಯಂತ ಅದರ ರುಚಿಕರತೆ ಮತ್ತು ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಜನಸಂಖ್ಯೆಯ ಪ್ರಮುಖ ಭಾಗವು ದೇಸಿ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತದೆ. ಭಾರತೀಯ ಆಹಾರವನ್ನು ವಿದೇಶಿಗರು ಕೂಡ ಇಷ್ಟಪಡುತ್ತಾರೆ. ಆದೇ ರೀತಿ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಮೊದಲ ಬಾರಿಗೆ ಭಾರತೀಯ ತಿಂಡಿಗಳನ್ನು ಸವಿಯುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಂದು ತಿನಿಸುಗಳನ್ನು ಸವಿಯುವಾಗಲೂ ಒಂದೊಂದು ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೀವು ಕೂಡ ನೋಡಿದರೆ ಖಂಡಿತವಾಗಿಯೂ ಆನಂದಿಸುತ್ತೀರಿ.
ತನ್ನರ್ ಎಂಬ ಕಂಟೆಂಟ್ ಕ್ರಿಯೇಟರ್ ಫೇಸ್‌ಬುಕ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೊದಲು ಮಹಾರಾಷ್ಟ್ರದ ಫೇಮಸ್ ತಿನಿಸು ಆಗಿರುವ ಭಕರವಾಡಿಯನ್ನು ಸವಿಯುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಇದನ್ನು ಆಕೆ ಸ್ವಲ್ಪ ದಾಲ್ಚಿನ್ನಿ ರೋಲ್ ಎಂದು ಹೇಳಿದ್ದಾಳೆ. ನಂತರ ಉಪ್ಪು, ಖಾರ ಹುಳಿ ಮಿಶ್ರಿತವಾಗಿರುವ ನಟ್ಕ್ರಾಕರ್ ಎಂಬ ಪ್ರಸಿದ್ಧ ತಿನಿಸನ್ನು ಸವಿದರು. ಬಳಿಕ ಕುರ್ಕುರೆ, ಅಂಕಲ್ ಚಿಪ್ಸ್ ಮತ್ತು ಇತರ ದೇಸಿ ತಿಂಡಿಗಳನ್ನು ಸಹ ಸವಿದರು. ಇದೇ ವೇಳೆ ಸೋನ್ ಪಾಪ್ಡಿಯನ್ನು ಕೂಡ ಸವಿದಿದ್ದು, ಇದನ್ನು ತುಂಬಾ ಇಷ್ಟಪಟ್ಟಿದ್ದಾರೆ. ಒಟ್ಟು 6 ನಿಮಿಷಗಳ ವಿಡಿಯೋದಲ್ಲಿ ಭಾರತೀಯ ಉಪ್ಪಿನಕಾಯಿಯ ರುಚಿಯನ್ನು ಕೂಡ ನೋಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 11:58 am, Sun, 28 August 22