ಹಲ್ವಾ ಎಂದ ಕೂಡಲೇ ಬಾಯಲ್ಲಿ ನೀರು ಬರುತ್ತೆ, ಆದರೆ ಇದು ಬಾಳೆ ಹಣ್ಣಿನ ಹಲ್ವಾ ಅಲ್ಲ, ಬಾಳೆ ಎಲೆಯ ಹಲ್ವಾ. ಬಾಳೆ ಎಲೆಯನ್ನು ಕತ್ತರಿಸುವುದರಿಂದ ಹಿಡಿದು ಹಲ್ವಾ ಮಾಡುವ ರೀತಿಯ ತುಂಬಾ ಖುಷಿಕೊಡುತ್ತದೆ. ಎಲ್ಲಾ ಕಾಲದಲ್ಲೂ ಸೋರೆಕಾಯಿ, ಬಾಳೆಹಣ್ಣು, ಕ್ಯಾರೆಟ್ ಹಲ್ವಾವನ್ನು ತಿಂದಿರಬಹುದು, ಆದರೆ ಈ ಬಾಳೆ ಎಲೆಯ ಹಲ್ವಾ ತುಂಬಾ ಹೊಸದು.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾಳೆ ತೋಟದಲ್ಲಿ ವ್ಯಕ್ತಿಯೊಬ್ಬರು ಫ್ರೆಶ್ ಆಗಿ ಬಾಳೆ ಎಲೆಯನ್ನು ಕತ್ತರಿಸಿ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ, ಬಳಿಕ ಸೋಸಿ, ಬೇಯಿಸಲು ಪ್ರಾರಂಭಿಸುತ್ತಾರೆ, ಬಳಿಕ ಅದು ದಪ್ಪವಾಗಲು ಸ್ವಲ್ಪ ಜೋಳದ ಹಿಟ್ಟನ್ನು ಸೇರಿಸುತ್ತಾರೆ.
ಬಳಿಕ ಅದರಲ್ಲಿರುವ ನೀರು ಆವಿಯಾಗಿ ಗಟ್ಟಿಯಾಗುತ್ತದೆ. ಆಗ ಸ್ವಲ್ಪ ತುಪ್ಪ ಮತ್ತು ಸಕ್ಕರೆಯನ್ನು ಬರೆಸುತ್ತಾರೆ. ಕೊನೆಯಲ್ಲಿ ಅದಕ್ಕೆ ಬಾದಾಮಿಯನ್ನು ಸೇರಿಸಿ ಸರ್ವ್ ಮಾಡುತ್ತಾರೆ. ಇದು 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ