
ಫಿಲಿಪೈನ್ಸ್‌ನ ಕಡಲತೀರದಲ್ಲಿ ವ್ಯಕ್ತಿಯೊಬ್ಬರು ಮರಿ ಆಕ್ಟೋಪಸ್ (Octopus) ಜತೆಗೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾರಕ ಆಕ್ಟೋಪಸ್ ಜತೆಗೆ ಆಟವಾಡುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ, ಆದರೆ ಈ ಬ್ರಿಟಿಷ್ ವ್ಯಕ್ತಿ ಆಕ್ಟೋಪಸ್ ಜತೆಗೆ ಖುಷಿಯಿಂದ ಆಟವಾಡಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋಗೆ ಮನೆಯಿಂದ 11,000 ಕಿಮೀ ದೂರದಲ್ಲಿರುವ ಕಡಲ ತೀರಕ್ಕೆ ಒಬ್ಬಂಟಿಯಾಗಿ ಹೋಗಿ, ಜಗತ್ತನ್ನು ಅನ್ವೇಷಿಸುತ್ತೇನೆ ಎಂದು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವುದು ಎಂದರೆ ಇದೆ ಇರಬೇಕು ಎಂದು ಶೀರ್ಷಿಕೆಯೊಂದನ್ನು ಬರೆದುಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಆ ವ್ಯಕ್ತಿ ನನಗೆ ಅದು ಆಕ್ಟೋಪಸ್ ಎಂಬುದು ಸಂಪೂರ್ಣವಾಗಿ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಡೆಕಾಂಟರ್‌ಮ್ಯಾನ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೀಗೆ ಹೇಳಲಾಗಿದೆ. ನೀರಿನಲ್ಲಿ ಕೈಯಿಟ್ಟು ಸಣ್ಣ ಆಕ್ಟೋಪಸ್ ಅನ್ನು ಹಿಡಿದಿರುವುದನ್ನು ವೀಡಿಯೊ ತೋರಿಸುತ್ತದೆ. ಇದು ನೀಲಿ ಬಣ್ಣದ ಆಕ್ಟೋಪಸ್ ಎಂದು ಹೇಳಲಾಗಿದೆ. ಇದು ಆಸ್ಟ್ರೇಲಿಯಾ ಮತ್ತು ಇತರರಿಗೆ ವಿಶ್ವದ ಮೊದಲ , ಎರಡನೇ, ಮೂರನೇ ಅತ್ಯಂತ ವಿಷಕಾರಿ ಪ್ರಾಣಿ ಎಂದು ಹೇಳಲಾಗಿದೆ.
ಇದನ್ನೂ ಓದಿ: ಹೆಲ್ಮೆಟ್ ಧರಿಸದ ಬೈಕ್ ಸವಾರನನ್ನು ತಡೆದು ನಿಲ್ಲಿಸಿದ ಪೊಲೀಸರು, ಈ ವ್ಯಕ್ತಿ ನೀಡಿದ ಉತ್ತರಕ್ಕೆ ಪೊಲೀಸರೇ ಶಾಕ್
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ, ಆ ಜೀವಿ ಕೋಪಗೊಂಡಿದ್ದರೆ ಆ ವ್ಯಕ್ತಿ ಜೀವಂತ ಇರುತ್ತಿರಲಿಲ್ಲ ಎಂದು ಒಬ್ಬರು ಹೇಳಿದ್ದಾರೆ. ನೀವು ತುಂಬಾ ಅದೃಷ್ಟವಂತರು. ಒಂದು ವೇಳೆ ಅದರಿಂದ ಸತ್ತಿದ್ದರೆ ಖಂಡಿತ ಯಾರಿಗೂ ಗೊತ್ತಾಗುತ್ತಿರಲಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಇನ್ನು ಕೇಲವು ನೆಟ್ಟಿಗರು ಯಮ ರಜೆ ಹಾಕಿರಬೇಕು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿದ್ದಾರೆ.