ಮೊಬೈಲ್ನಲ್ಲಿ ಯುವತಿ ಮಾತನಾಡಿಕೊಂಡು ಹೋಗುತ್ತಿರುತ್ತಾಳೆ. ಅಷ್ಟರಲ್ಲೀ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ತಲೆಗೊಂದು ಹೊಡೆದು ಎಸ್ಕೇಪ್ ಆಗುತ್ತಾನೆ. ಅಷ್ಟರಲ್ಲಿ ಎಚ್ಚೆತ್ತ ಸ್ಥಳೀಯರು ಕಳ್ಳನನ್ನು ಹಿಡಿದು ತಂದು ಯುವತಿಯ ಮುಂದೆ ನಿಲ್ಲಿಸಿದಾಗ ಆಕೆ ಶಾಕ್ ಆಗಿದ್ದಾಳೆ. ಕಾರಣ ಆ ಕಳ್ಳ ಬೇರೆಯಾರೂ ಅಲ್ಲ ಆಕೆಯ ಲವ್ವರ್. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಸಖತ್ ಮನರಂಜನೆ ನೀಡುತ್ತದೆ. ಬ್ರೇಕಪ್ ಮಾಡಿಕೊಳ್ಳದೆ ಹುಡುಗಿಯ ಮೊಬೈಲ್ ಚೆಕ್ ಮಾಡಲು ಸುಮ್ಮನೆ ಕದ್ದು ಪರಿಶೀಲಿಸಿ ಎಂದು ನೆಟ್ಟಿಗರು ಹಾಸ್ಯವಾಗಿ ಹೇಳಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಇರುವಂತೆ, ಯುವತಿ ಮೊಬೈಲ್ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಯುವಕನೊಬ್ಬ ಆಕೆಯ ಕೈಯಿಂದ ಮೊಬೈಲ್ ಕಸಿದುಕೊಂಡು ತಲೆಗೊಂದು ಏಟು ಕೊಟ್ಟು ಸ್ಥಳದಿಂದ ಪರಾರಿಯಾಗುತ್ತಾನೆ. ಅಷ್ಟರಲ್ಲಿ ಎಚ್ಚೆತ್ತ ಸ್ಥಳೀಯರು ಆತನನ್ನು ಒಂದಷ್ಟು ದೂರದವರೆಗೆ ಹಿಂಬಾಸಿಕೊಂಡು ಹೋಗಿ ಹಿಡಿದು ಯುವತಿಯ ಮುಂದೆ ತಂದು ನಿಲ್ಲಿಸಿದ್ದಾರೆ. ಈ ವೇಳೆ ಅಳುತ್ತಿದ್ದ ಯುವತಿ, ಕಳ್ಳನನ್ನು ನೋಡಿ ಶಾಕ್ ಆಗಿ ನೀನಾ ಎಂದು ಪ್ರಶ್ನಿಸುತ್ತಾಳೆ. ಈ ವೇಳೆ ಸ್ಥಳೀಯರು ಈತ ನಿನಗೆ ಗೊತ್ತಿದೆಯಾ? ಎಂದು ಪ್ರಶ್ನಿಸುತ್ತಾರೆ. ಕೂಡಲೇ ಬಾಯಿಬಿಟ್ಟ ಯುವತಿ ಆತ ‘ನನ್ನ ಬಾಯ್ಫ್ರೆಂಡ್’ ಎಂದು ಹೇಳುವುದನ್ನು ಕಾಣಬಹುದು.
ಸದ್ಯ ಈ ವಿಡಿಯೋ ವೈರಲ್ ಪಡೆದು 5.5 ಮಿಲಿಯನ್ ವೀಕ್ಷಣೆಗಳು ಮತ್ತು 4.7 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಸಖತ್ ಮನರಂಜನೆಯನ್ನು ಪಡೆಯುತ್ತಿದ್ದಾರೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ದೀದಿ ಕಾ ಬಾಯ್ಫ್ರೆಂಡ್ ಚೋರ್ ಹೈ” (ಅಕ್ಕನ ಪ್ರಿಯಕರ ಕಳ್ಳ) ಎಂದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಬ್ರೇಕಪ್ ಆಗದೆ ನಿಮ್ಮ ಹುಡುಗಿಯ ಫೋನ್ ಚೆಕ್ ಮಾಡುವುದು ಹೇಗೆ? ಸುಮ್ಮನೆ ಕದ್ದು ಪರೀಕ್ಷಿಸಿ” ಎಂದು ಹಾಸ್ಯವಾಗಿ ಹೇಳಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Sun, 28 August 22