Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೀನಾ.. ನಾನಾ.. ನೋಡೇಬಿಡೋಣ, ಪ್ರಾಂಶುಪಾರೊಂದಿಗೆ ವಿದ್ಯಾರ್ಥಿಯ ದ್ವಂದ್ವಯುದ್ಧ

'ಸ್ಟಾರ್ ವಾರ್ಸ್' ಅಭಿಮಾನಿಯೊಬ್ಬ ತನ್ನ ಪದವಿ ಸಮಾರಂಭದಲ್ಲಿ ಸಾಹಸವನ್ನು ಹೊರತೆಗೆದು ಪ್ರಾಂಶುಪಾಲರೊಂದಿಗೆ ದ್ವಂದ್ವಯುದ್ಧ ನಡೆಸಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ನೀನಾ.. ನಾನಾ.. ನೋಡೇಬಿಡೋಣ, ಪ್ರಾಂಶುಪಾರೊಂದಿಗೆ ವಿದ್ಯಾರ್ಥಿಯ ದ್ವಂದ್ವಯುದ್ಧ
ಪ್ರಾಂಶುಪಾಲರೊಂದಿಗೆ ವಿದ್ಯಾರ್ಥಿಯ ದ್ವಂದ್ವಯುದ್ಧ
Follow us
TV9 Web
| Updated By: Rakesh Nayak Manchi

Updated on:Aug 28, 2022 | 12:35 PM

ಪದವಿ ಪ್ರದಾನ ಸಮಾರಂಭಗಳು ವಿದ್ಯಾರ್ಥಿ ಜೀವನದಲ್ಲಿ ಹೆಮ್ಮೆಯ ಕ್ಷಣಗಳಾಗಿವೆ. ವರ್ಷಗಳ ಶ್ರಮ ಮತ್ತು ವಿನೋದದ ನಂತರ ಪ್ರಮಾಣಪತ್ರವನ್ನು ಸ್ವೀಕರಿಸುವುದು ನಿಜಕ್ಕೂ ವಿಶೇಷವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ‘ಸ್ಟಾರ್ ವಾರ್ಸ್’ ಅಭಿಮಾನಿಯೊಬ್ಬ ಪದವಿ ಪಡೆದ ನಂತರ ಸಾಹಸವನ್ನು ಹೊರತೆಗೆದು ಪ್ರಾಂಶುಪಾಲರೊಂದಿಗೆ ‘ದ್ವಂದ್ವಯುದ್ಧ’ದಲ್ಲಿ ತೊಡಗಿಸಿಕೊಂಡನು. ಪೂರ್ವಸಿದ್ಧತೆಯಿಲ್ಲದ ಸವಾಲು ಎಲ್ಲರನ್ನೂ ಆಶ್ಚರ್ಯಗೊಳಿಸಿತಾದರೂ ನೆರೆದಿದ್ದ ಪ್ರೇಕ್ಷಕರೆಲ್ಲರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಪ್ರಾಂಶುಪಾಲರ ಜೊತೆ ಹದಿಹರೆಯದ ಯುವಕನ ದ್ವಂದ್ವಯುದ್ಧವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. Now This ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಕ್ಲಿಪ್ ವಿದ್ಯಾರ್ಥಿಯು ಪದವಿ ಗೌನ್ ಧರಿಸಿ ತನ್ನ ಪ್ರಾಂಶುಪಾಲರೊಂದಿಗೆ ಲೈಟ್‌ಸೇಬರ್‌ನೊಂದಿಗೆ ಹೋರಾಡುತ್ತಿರುವುದನ್ನು ತೋರಿಸುತ್ತದೆ. ವಿದ್ಯಾರ್ಥಿಯೊಂದಿಗೆ ಪ್ರಾಂಶುಪಾಲರು ಕೂಡ ಅದೇ ರೀತಿ ಪ್ರತಿಕ್ರಿಯಿಸಿ ಮನರಂಜನೆಯನ್ನು ಪಡೆದುಕೊಂಡಿದ್ದಾರೆ. ಕೊನೆಯಲ್ಲಿ ಪ್ರೇಕ್ಷಕರ ಹರ್ಷೋದ್ಗಾರ ವ್ಯಕ್ತವಾದಾಗ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿ ಪರಸ್ಪರ ಆಲಿಂಗನ ಮಾಡಿಕೊಂಡಿದ್ದಾರೆ.

ಟಾಕರ್ ವರದಿಯ ಪ್ರಕಾರ, ಈ ದೃಶ್ಯವನ್ನು ಕೆನಡಾದ ಪೋರ್ಟ್ ಮೂಡಿಯಲ್ಲಿರುವ ಹೆರಿಟೇಜ್ ವುಡ್ಸ್ ಸೆಕೆಂಡರಿ ಶಾಲೆಯಲ್ಲಿ ಸೆರೆಹಿಡಿಯಲಾಗಿದೆ. ಸಮಾರಂಭದಲ್ಲಿ ಪಂಟೋಜಾ ಲೈಟ್​ಸೇಬರ್ ಅನ್ನು ತೆಗೆದುಕೊಂಡು ಎಲ್ಲರನ್ನು ಅಚ್ಚರಿಗೊಳಿಸಲು ಬಯಸಿದರು. ಅದರಂತೆ ಲೈಟ್‌ಸೇಬರ್ ಅನ್ನು ತರಬಹುದೇ ಎಂದು ವಿದ್ಯಾರ್ಥಿ ಪಂಟೋಜಾ ಪ್ರಾಂಶುಪಾಲರನ್ನು ಕೇಳಿದ್ದನು. ಇದಕ್ಕೆ ಪ್ರಾಂಶುಪಾಲ ಕ್ಲರ್ಕ್ಸನ್ ಅವರು “ಬಹುಶಃ” ಎಂದು ಹೇಳಿದರು.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Sun, 28 August 22

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ