AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೊಬೈಲ್ ಕದ್ದ ಚೋರ, ಬಳಿಕ ಆತ ತನ್ನ ಪ್ರಿಯಕರನೆಂದು ತಿಳಿದು ಯುವತಿಗೆ ಶಾಕ್

ಯುವತಿಯ ಮೊಬೈಲ್ ಕದ್ದ ಕಳ್ಳನನ್ನು ಹಿಡಿದು ತಂದು ಒಪ್ಪಿಸಿದಾಗ ಕಳ್ಳ ತನ್ನ ಪ್ರಿಯಕರನೆಂದು ತಿಳಿದು ಯುವತಿ ಶಾಕ್ ಆಗಿದ್ದಾಳೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಮೊಬೈಲ್ ಕದ್ದ ಚೋರ, ಬಳಿಕ ಆತ ತನ್ನ ಪ್ರಿಯಕರನೆಂದು ತಿಳಿದು ಯುವತಿಗೆ ಶಾಕ್
ಮೊಬೈಲ್ ಕದ್ದಿದ್ದು ತನ್ನ ಪ್ರಿಯಕರನೆಂದು ತಿಳಿದು ಶಾಕ್ ಆದ ಯುವತಿ
TV9 Web
| Edited By: Rakesh Nayak Manchi|

Updated on:Aug 28, 2022 | 3:07 PM

Share

ಮೊಬೈಲ್​ನಲ್ಲಿ ಯುವತಿ ಮಾತನಾಡಿಕೊಂಡು ಹೋಗುತ್ತಿರುತ್ತಾಳೆ. ಅಷ್ಟರಲ್ಲೀ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ತಲೆಗೊಂದು ಹೊಡೆದು ಎಸ್ಕೇಪ್ ಆಗುತ್ತಾನೆ. ಅಷ್ಟರಲ್ಲಿ ಎಚ್ಚೆತ್ತ ಸ್ಥಳೀಯರು ಕಳ್ಳನನ್ನು ಹಿಡಿದು ತಂದು ಯುವತಿಯ ಮುಂದೆ ನಿಲ್ಲಿಸಿದಾಗ ಆಕೆ ಶಾಕ್ ಆಗಿದ್ದಾಳೆ. ಕಾರಣ ಆ ಕಳ್ಳ ಬೇರೆಯಾರೂ ಅಲ್ಲ ಆಕೆಯ ಲವ್ವರ್. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಸಖತ್ ಮನರಂಜನೆ ನೀಡುತ್ತದೆ. ಬ್ರೇಕಪ್ ಮಾಡಿಕೊಳ್ಳದೆ ಹುಡುಗಿಯ ಮೊಬೈಲ್ ಚೆಕ್ ಮಾಡಲು ಸುಮ್ಮನೆ ಕದ್ದು ಪರಿಶೀಲಿಸಿ ಎಂದು ನೆಟ್ಟಿಗರು ಹಾಸ್ಯವಾಗಿ ಹೇಳಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಇರುವಂತೆ, ಯುವತಿ ಮೊಬೈಲ್​ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಯುವಕನೊಬ್ಬ ಆಕೆಯ ಕೈಯಿಂದ ಮೊಬೈಲ್ ಕಸಿದುಕೊಂಡು ತಲೆಗೊಂದು ಏಟು ಕೊಟ್ಟು ಸ್ಥಳದಿಂದ ಪರಾರಿಯಾಗುತ್ತಾನೆ. ಅಷ್ಟರಲ್ಲಿ ಎಚ್ಚೆತ್ತ ಸ್ಥಳೀಯರು ಆತನನ್ನು ಒಂದಷ್ಟು ದೂರದವರೆಗೆ ಹಿಂಬಾಸಿಕೊಂಡು ಹೋಗಿ ಹಿಡಿದು ಯುವತಿಯ ಮುಂದೆ ತಂದು ನಿಲ್ಲಿಸಿದ್ದಾರೆ. ಈ ವೇಳೆ ಅಳುತ್ತಿದ್ದ ಯುವತಿ, ಕಳ್ಳನನ್ನು ನೋಡಿ ಶಾಕ್ ಆಗಿ ನೀನಾ ಎಂದು ಪ್ರಶ್ನಿಸುತ್ತಾಳೆ. ಈ ವೇಳೆ ಸ್ಥಳೀಯರು ಈತ ನಿನಗೆ ಗೊತ್ತಿದೆಯಾ? ಎಂದು ಪ್ರಶ್ನಿಸುತ್ತಾರೆ. ಕೂಡಲೇ ಬಾಯಿಬಿಟ್ಟ ಯುವತಿ ಆತ ‘ನನ್ನ ಬಾಯ್​ಫ್ರೆಂಡ್’ ಎಂದು ಹೇಳುವುದನ್ನು ಕಾಣಬಹುದು.

ಸದ್ಯ ಈ ವಿಡಿಯೋ ವೈರಲ್ ಪಡೆದು 5.5 ಮಿಲಿಯನ್ ವೀಕ್ಷಣೆಗಳು ಮತ್ತು 4.7 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಸಖತ್ ಮನರಂಜನೆಯನ್ನು ಪಡೆಯುತ್ತಿದ್ದಾರೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ದೀದಿ ಕಾ ಬಾಯ್​ಫ್ರೆಂಡ್ ಚೋರ್ ಹೈ” (ಅಕ್ಕನ ಪ್ರಿಯಕರ ಕಳ್ಳ) ಎಂದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ಬ್ರೇಕಪ್ ಆಗದೆ ನಿಮ್ಮ ಹುಡುಗಿಯ ಫೋನ್ ಚೆಕ್ ಮಾಡುವುದು ಹೇಗೆ? ಸುಮ್ಮನೆ ಕದ್ದು ಪರೀಕ್ಷಿಸಿ” ಎಂದು ಹಾಸ್ಯವಾಗಿ ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Sun, 28 August 22

Follow Us
TV9 Web
TV9 Web

TV9 Kannada

Read More
ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು ದಸರಾ: ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ!
ಮೈಸೂರು ದಸರಾ 2026: ಗೊಂದಲಗಳ ನಡುವೆ ವಜ್ರಮುಷ್ಟಿ ಕಾಳಗ!
ಮೈಸೂರು ದಸರಾ: ಅರಮನೆ ಪ್ರವೇಶಿಸಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ
ಮೈಸೂರು ದಸರಾ: ಅರಮನೆ ಪ್ರವೇಶಿಸಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ
ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ
ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನ
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ
ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ
ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಅಮಿತ್ ಶಾ ಘೋಷಣೆ
ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಅಮಿತ್ ಶಾ ಘೋಷಣೆ
ವಿಜಯದಶಮಿಯ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ: ಡಾ. ಶೆಲ್ವಪಿಳ್ಳೈ ಅಯ್ಯಂಗಾರ್
ವಿಜಯದಶಮಿಯ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವ: ಡಾ. ಶೆಲ್ವಪಿಳ್ಳೈ ಅಯ್ಯಂಗಾರ್
ವಜ್ರ ಕದ್ದು ಕಾವಲುಗಾರರ ನೆಮ್ಮದಿ ಕೆಡಿಸಿದ ಆಸಿಯಾ: ವಿಡಿಯೋ
ವಜ್ರ ಕದ್ದು ಕಾವಲುಗಾರರ ನೆಮ್ಮದಿ ಕೆಡಿಸಿದ ಆಸಿಯಾ: ವಿಡಿಯೋ
ಮೈಸೂರು ದಸರಾ: ಆಟೋದಲ್ಲಿ ಸಂಚರಿಸಿ ಗಮನಸೆಳೆದ ಸಚಿವ ಕೃಷ್ಣಭೈರೇಗೌಡ
ಮೈಸೂರು ದಸರಾ: ಆಟೋದಲ್ಲಿ ಸಂಚರಿಸಿ ಗಮನಸೆಳೆದ ಸಚಿವ ಕೃಷ್ಣಭೈರೇಗೌಡ
ಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಹೊರಟ ಉತ್ಸವ ಮೂರ್ತಿ ಮೆರವಣಿಗೆ
ಮೈಸೂರು ದಸರಾ: ಚಾಮುಂಡಿ ಬೆಟ್ಟದಿಂದ ಅರಮನೆಗೆ ಹೊರಟ ಉತ್ಸವ ಮೂರ್ತಿ ಮೆರವಣಿಗೆ