ಪಶ್ಚಿಮ ದೆಹಲಿಯ ನಂಗ್ಲೋಯ್ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಅಸಾಧ್ಯವಾದೂದನ್ನು ಮಾಡಿ ಜನರಿಗೆ ಶಾಕ್ ನೀಡಿದ್ದಾನೆ. ವೇಗವಾಗಿ ಓಡಾಡುವ ಮೆಟ್ರೋ ರೈಲುಗಳ ಹಳಿಗಳ ಮೇಲೆ ವ್ಯಕ್ತಿಯೊಬ್ಬ ಯಾವುದೇ ಭಯವಿಲ್ಲದೆ ನಡೆದುಕೊಂಡು ಹೋಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಸ್ಯವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಮೆಟ್ರೋ ಹಳಿಯ ಬ್ರಿಡ್ಜ್ ಮೇಲೆ ವ್ಯಕ್ತಿಯೊಬ್ಬ ಯಾವುದೇ ಭಯವಿಲ್ಲದೆ ಆರಾಮವಾಗಿ ನಡೆದುಕೊಂಡು ಹೋಗುತ್ತಿದ್ದಾನೆ. ಇದನ್ನು ನೋಡಿದ ಬ್ರಿಡ್ಜ್ ಕೆಳಗಡೆ ಇದ್ದ ನೂರಾರು ಮಂದಿ, ಆತನನ್ನು ಎಚ್ಚರಿಸಲು ಕೂಗಾಡಿದ್ದಾರೆ. ಆದರೆ ಆ ಭೋಪ ಮಾತ್ರ ತಲೆನೇ ಕೆಡಿಸಿಕೊಳ್ಳಲದೆ ಹಳಿಯ ಮೇಲೆ ನಡೆದುಕೊಂಡು ಹೋಗಿದ್ದಾನೆ. ಈ ವಿಡಿಯೋವನ್ನು ನೋಡುವಾಗ ಏನೋ ಸಂಭವಿಸುತ್ತದೆ, ಆ ವ್ಯಕ್ತಿಗೆ ಮುಂದೆ ಶಾಕ್ ತಗುಲಿ ಸಾಯಬಹುದು ಎಂಬ ಆತಂಕ ಮನಸ್ಸಿನಲ್ಲಿ ಉಂಟುಮಾಡುತ್ತದೆ.
ಕೆಲವು ದಿನಗಳ ಹಿಂದೆ ಅಮೀರ್ ಖಾನ್ 7249 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಮೆಟ್ರೋ ರೈಲು ಎಲ್ಲಿದೆ ಎಂದು ನೋಡಲು ಹೋಗಿದ್ದ” ಎಂದು ಶೀರ್ಷಿಕೆ ಬರೆಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಪಡೆದು 1.40, ಲಕ್ಷಕ್ಕೂ ಹೆಚ್ಚು ಲೈಕ್ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಸ್ವೀಕರಿಸಿದೆ.
ವಿಡಿಯೋ ನೋಡಿದ ನೆಟ್ಟಿಗರು ಹಾಸ್ಯಾಸ್ಪದವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಪೈಕಿ ಒಬ್ಬರು, “ಲೆಜೆಂಡ್ಸ್ ಅವರು, ಇನ್ನೂ ನಡೆಯುತ್ತಿದ್ದಾರೆ” ಎಂದು ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಯಾವಾಗಲೂ ನಿಮ್ಮದೇ ದಾರಿ ಮಾಡಿಕೊಳ್ಳಿ” ಎಂದಿದ್ದಾರೆ. ಮಗದೊಬ್ಬರು ಕಾಮೆಂಟ್ ಮಾಡಿ,”ಆತ್ಮವಿಶ್ವಾಸ ನೋಡಿ ಬಾಸ್” ಎಂದಿದ್ದಾರೆ.
ಶುಕ್ರವಾರ, ಶಹದಾರ ಮೆಟ್ರೋ ನಿಲ್ದಾಣದ ಹಳಿಗಳ ಮೇಲೆ 58 ವರ್ಷದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಿದ್ದಿದ್ದಾರೆ. ಇವರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವ್ಯಕ್ತಿಯನ್ನು ರಕ್ಷಿಸಿದೆ. ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾಗ ವಿಚಲಿತನಾಗಿದ್ದ ಮತ್ತು ಇದರ ಜೊತೆಗೆ ತನ್ನ ಮೊಬೈಲ್ ಫೋನ್ ಹುಡುಕಾಡುತ್ತಿದ್ದ ಎಂದು ಸಿಐಎಸ್ಎಫ್ ಹೇಳಿದೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Sun, 21 August 22