Viral Video: ಮೊಸರು ಕುಡಿಕೆ ಉತ್ಸವದಲ್ಲಿ ಪಿರಮಿಡ್ ಹತ್ತಿ ಮಡಕೆ ಹೊಡೆದ ವೃದ್ಧೆ
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಮೊಸರು ಕುಡಿಕೆ ಉತ್ಸವದಲ್ಲಿ ವೃದ್ಧೆಯೊಬ್ಬರು ಪಿರಮಿಡ್ ಹತ್ತಿ ಮಡಕೆಯನ್ನು ಹೊಡೆದಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ.
ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿ ಇದೀಗ ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿಗಳನ್ನು ನಡೆಸಲಾಗುತ್ತಿದೆ. ಈ ನಡುವೆ ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಜನರು ಕಿಕ್ಕಿರುವುದು ಸೇರುವ ಮೊಸರು ಕುಡಿಕೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ವಿಶೇಷ ಏನೆಂದರೆ, ಮಹಿಳೆಯರೇ ರಚಿಸಿದ ಪಿರಮಿಟ್ ಮೇಲೆ ಹತ್ತಿದ ವೃದ್ಧೆಯೊಬ್ಬರು ಮಡಕೆಯನ್ನು ಹೊಡೆದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಪ್ರದೇಶವೊಂದರಲ್ಲಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಈ ದೃಶ್ಯಾವಳಿಯನ್ನು ಸೆರೆಹಿಡಿಯಲಾಗಿದೆ.
ಈ ವಿಡಿಯೋವನ್ನು ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ವಯಸ್ಸು ಎಂಬುದು ನಾವು ಎಣಿಸುವ ಸಂಖ್ಯೆ” ಎಂದು ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಪಡೆದು 13ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದ್ದು, ನೂರಾರು ಲೈಕ್ಗಳು ಗಿಟ್ಟಿಸಿಕೊಂಡಿದೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಮೊಸರು ಕುಡಿಕೆ ಕಾರ್ಯಕ್ರಮದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಗುಂಪು ಸೇರಿದ್ದಾರೆ. ಕುಡಿಕೆಯನ್ನು ಹೊಡೆಯಲು ಮಹಿಳೆಯರು ಸಜ್ಜಾಗಿ ನಿಂತಿರುತ್ತಾರೆ. ಅದರಂತೆ ಪಿರಮಿಡ್ ಮೇಲೆ ಹತ್ತಿದ ವೃದ್ಧೆಯೊಬ್ಬರು, ತಮ್ಮ ದೇಹವನ್ನು ಸಮತೋಲನ ಮಾಡಿಕೊಂಡು ಮಡಕೆಯನ್ನು ಹೊಡೆದು ಕ್ಷಣಾರ್ಥದಲ್ಲೇ ಕೆಳಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಮಡಕೆಯನ್ನು ಹೊಡೆದ ಖುಷಿಯಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಎಲ್ಲರೂ ಖುಷಿಯಿಂದ ನಲಿಯುವುದನ್ನು ಕಾಣಬಹುದು.
Age is only a number we count until we’re old enough to know it doesn’t count ~ Katrina Mayer
This video proves that! #DahiHandifestival is truly all encompassing pic.twitter.com/e4IlKRYiBc
— Priyanka Chaturvedi?? (@priyankac19) August 20, 2022
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Sun, 21 August 22