ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮನಿಕೆ ಮಗೆ ಹಿತೆ ಹಾಡಿನ ಮತ್ತೊಂದು ಕವರ್ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಡನ್ನು ಘಟಂ (Ghatam) ಎಂಬ ತಾಳವಾದ್ಯದ ಜೊತೆ ಪ್ರದರ್ಶಿಸಲಾಗಿದೆ. ನೆಟ್ಟಿಗರು ಮೆಚ್ಚಿಕೊಂಡ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ. ಉಜ್ವಲ್ ಕುಮಾರ್ ಅವರು ಇನ್ಸ್ಟಾಗ್ರಾಮ್ನಲ್ಲಿ (Instagram) ವಿಡಿಯೊ ಹಂಚಿಕೊಂಡಿದ್ದಾರೆ. ಮನಿಕೆ ಮಗೆ ಹಿತೆ (Manike mage hithe) ಹಾಡಿಗೆ ಘಟಂ ತಾಳವಾದ್ಯದ ಜೊತೆ ನುಡಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ (Social media) ಹಂಚಿಕೊಂಡಾಗಿನಿಂದ ಸುಮಾರು 10,600 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 2,800 ಕ್ಕೂ ಹೆಚ್ಚಿನ ಲೈಕ್ಸ್ಗಳು ಲಭ್ಯವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮನಿಕೆ ಮಗೆ ಹಿತೆ ಹಾಡಿನ ಅದೆಷ್ಟೊ ವಿಡಿಯೊಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ವಿಡಿಯೊಗಳನ್ನು ಜನರು ಹೆಚ್ಚು ಇಷ್ಟಪಟ್ಟಿದ್ದಾರೆ. ಅದೇ ರೀತಿಯಲ್ಲಿ ಘಟಂ ತಾಳವಾದ್ಯದ ಜೊತೆ ಮನಿಕೆ ಮಗೆ ಹಿತೆ ಹಾಡನ್ನು ಸಹ ನೆಟ್ಟಿಗರು ಹೆಚ್ಚು ಇಷ್ಟಪಟ್ಟಿದ್ದಾರೆ. ವಿಡಿಯೊದಲ್ಲಿ ಗಮನಿಸುವಂತೆ ಉಜ್ವಲ್ ಅವರು ಘಟಂ ನುಡಿಸುತ್ತಿರುವುದನ್ನು ನೋಡಬಹುದು. ನೆಟ್ಟಿಗರು ಹಾಡಿನ ಆವೃತ್ತಿಯನ್ನು ಇಷ್ಟಪಟ್ಟಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಮುದ್ದಾದ ಪುಟ್ಟ ನಾಯಿ ಮರಿಯೊಂದಿಗೆ ನೃತ್ಯ ಮಾಡಿದ ಯುವಕ! ಕ್ಯೂಟ್ ವಿಡಿಯೊ ನೀವೂ ನೋಡಿ
Viral Video: ವಧು ವರರು ಡಿಫರೆಂಟಾಗಿ ವೇದಿಕೆಗೆ ಎಂಟ್ರಿಯಾಗೋಕೆ ಹೋಗಿ ಆಗಿದ್ದೇ ಬೇರೆ! ವಿಡಿಯೊ ವೈರಲ್
Published On - 9:28 am, Mon, 15 November 21