
ವೈರಲ್ ವಿಡಿಯೋ: ಮೆಕ್ಸಿಕೊದ ಸಣ್ಣ ಪಟ್ಟಣದ ಮೇಯರ್ (Mayor) ಗುರುವಾರ ಏಳು ವರ್ಷದ ಅಲಿಗೇಟರ್ (Alligator) ಅನ್ನು ವಿವಾಹ (Marriage)ವಾಗುವ ಮೂಲಕ ಅಚ್ಚರಿಯ ಘಟನೆಗೆ ಸಾಕ್ಷಿಯಾಗಿದ್ದಾರೆ. ಯಾವ ರೀತಿ ವಧುವಿಗೆ ಶೃಂಗರಿಸುತ್ತಾರೋ ಅದೇ ರೀತಿ ಅಲಿಗೇಟರ್ ಮೊಸಳೆಯನ್ನೂ ಶೃಂಗರಿಸಲಾಗಿದೆ. ಬಿಳಿ ಬಣ್ಣದ ಬಟ್ಟೆ ಹಾಗೂ ಮುಸುಕನ್ನು ಹಾಕಿಕೊಂಡಿದ್ದ ಅಲಿಗೇಟರ್ ಅನ್ನು ವಿವಾಹವಾದ ಮೇಯರ್, ಅದರೊಂದಿಗೆ ಸಂತೋಷದಿಂದ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: Viral Video: ಸೂಪರ್ಫಾಸ್ಟ್ ವೇಗದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವ ಉದ್ಯೋಗಿ, ಅಸಲಿ ಬುಲೆಟ್ ಟ್ರೇನ್ ಎಂದ ಇಂಟರ್ನೆಟ್
ಸ್ಯಾನ್ ಪೆಡ್ರೊ ಹುವಾಮೆಲುಲಾ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಸಣ್ಣ ಅಲಿಗೇಟರ್ ಅನ್ನು ಮದುವೆಯಾದವರು. ವರ್ಣರಂಜಿತ ಸಮಾರಂಭದಲ್ಲಿ ಸಾಂಪ್ರದಾಯಿಕ ಸಂಗೀತವು ಮೊಳಗುವುದರೊಂದಿಗೆ ಮದುವೆ ನೆರವೇರಿದೆ. ರಾಯಿಟರ್ಸ್ ಟ್ವೀಟ್ ಮಾಡಿದ ಈ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರುವಂತೆ, ಬಿಳಿ ಬಟ್ಟೆ ಧರಿಸಿರುವ ಹಾಗೂ ಯಾರಿಗೂ ತೊಂದರೆ ನೀಡದಂತೆ ಎಚ್ಚರಿಕಾ ಕ್ರಮವಾಗಿ ಹಗ್ಗದಿಂದ ಬಾಯಿಯನ್ನು ಕಟ್ಟಿದ್ದ ಮೊಸಳೆಯನ್ನು ವರ ಎತ್ತಿಹಿಡಿದಿದ್ದು, ಸಂಭ್ರಮದಲ್ಲಿ ನೃತ್ಯ ಕೂಡ ಮಾಡಿದ್ದಾರೆ. ಇದೇ ವೇಳೆ ಮೊಸಳೆಗೆ ಚುಂಬನ್ ನೀಡುವಂತೆ ಜನರು ಒತ್ತಾಯಿಸಿದ ಹಿನ್ನೆಲೆ ಮೇಯರ್ ಮೊಸಳೆಗೆ ಕಿಸ್ ಮಾಡಿದ್ದಾರೆ.
ಧಾರ್ಮಿಕ ವಿವಾಹವು ಓಕ್ಸಾಕಾ ರಾಜ್ಯದ ಚೊಂಟಾಲ್ ಮತ್ತು ಹುವಾವ್ ಸ್ಥಳೀಯ ಸಮುದಾಯಗಳಲ್ಲಿ ಪೂರ್ವ ಹಿಸ್ಪಾನಿಕ್ ಕಾಲದ ಶತಮಾನಗಳ ಹಿಂದಿನದು, ಇದು ಪ್ರಕೃತಿಯ ವರದಾನಕ್ಕಾಗಿ ಪ್ರಾರ್ಥಿಸುವ ಪ್ರಾರ್ಥನೆಯಂತೆ. “ನಾವು ಸಾಕಷ್ಟು ಮಳೆಗಾಗಿ ಪ್ರಕೃತಿಯನ್ನು ಕೇಳುತ್ತೇವೆ, ಸಾಕಷ್ಟು ಆಹಾರಕ್ಕಾಗಿ ನಾವು ನದಿಯಲ್ಲಿ ಮೀನುಗಳನ್ನು ಹೊಂದಿದ್ದೇವೆ” ಎಂದು ಓಕ್ಸಾಕಾದ ಉಗಿ ಪೆಸಿಫಿಕ್ ಕರಾವಳಿಯಲ್ಲಿರುವ ಸಣ್ಣ ಮೀನುಗಾರಿಕಾ ಹಳ್ಳಿಯ ಮೇಯರ್ ಸೋಸಾ ಹೇಳಿದ್ದಾರೆ.
Published On - 11:50 am, Sun, 3 July 22