Viral Video: ಸೂಪರ್​ಫಾಸ್ಟ್​ ವೇಗದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವ ಉದ್ಯೋಗಿ, ಅಸಲಿ ಬುಲೆಟ್ ಟ್ರೇನ್ ಎಂದ ಇಂಟರ್ನೆಟ್

ಈ ವಿಡಿಯೊವನ್ನು 8 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

Viral Video: ಸೂಪರ್​ಫಾಸ್ಟ್​ ವೇಗದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವ ಉದ್ಯೋಗಿ, ಅಸಲಿ ಬುಲೆಟ್ ಟ್ರೇನ್ ಎಂದ ಇಂಟರ್ನೆಟ್
ರೈಲ್ವೆ ನಿಲ್ದಾಣದಲ್ಲಿ ಅತ್ಯಂತ ವೇಗವಾಗಿ ಟಿಕೆಟ್ ಕೊಡುವ ವ್ಯಕ್ತಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 03, 2022 | 11:15 AM

ಪ್ರಯಾಣಿಕರಿಗೆ ಟಿಕೆಟ್ ತೆಗೆದುಕೊಳ್ಳಲು ನೆರವಾಗುವ ರೈಲ್ವೆ ಉದ್ಯೋಗಿಯೊಬ್ಬರ ವೇಗದ ಕಾರ್ಯನಿರ್ವಹಣೆಯು ಇಂಟರ್ನೆಟ್​ನಲ್ಲಿ ಸಂಚಲನ ಮೂಡಿಸಿದೆ. ಅವಡುಗಚ್ಚುವಂತಿರುವ ಈ ವಿಡಿಯೊದಲ್ಲಿ ರೈಲ್ವೆ ಉದ್ಯೋಗಿಯೊಬ್ಬರು ಅತ್ಯಂತ ವೇಗವಾಗಿ ಟಿಕೆಟ್​ಗಳನ್ನು ಬುಕ್ ಮಾಡಿದ್ದಾರೆ. ಈ ಮನುಷ್ಯನ ಪ್ರಾವಿಣ್ಯತೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೊ ನೋಡಿದರೆ ಖಂಡಿತ ನೀವೂ ಮೆಚ್ಚಿಕೊಳ್ಳುತ್ತೀರಿ.

ಟ್ವಿಟರ್​ನಲ್ಲಿ ಶೇರ್ ಮಾಡಿರುವ ವಿಡಿಯೊ ತುಣುಕಿನಲ್ಲಿ ವ್ಯಕ್ತಿಯೊಬ್ಬರು ಟಿಕೆಟ್ ವೆಂಡಿಂಗ್ ಯಂತ್ರದ ಎದುರು ನಿಂತು ಟಿಕೆಟ್​ಗಳನ್ನು ವೇಗವಾಗಿ ನೀಡುತ್ತಿದ್ದಾರೆ. ತಮ್ಮ ಹಿಂದೆ ನಿಂತಿರುವ ಜನರಿಗಾಗಿ ಮಿಂಚಿನ ವೇಗದಲ್ಲಿ ಕಂಪ್ಯೂಟರ್ ಸ್ಕ್ರೀನ್ ಮೇಲೆ ಕೈಯಾಡಿಸುತ್ತಾ ಟಿಕೆಟ್​ಗಳನ್ನು ಕೊಡುತ್ತಿದ್ದಾರೆ.

‘ಭಾರತೀಯ ರೈಲ್ವೆಯ ಯಾವುದೋ ನಿಲ್ದಾಣದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 15 ಸೆಕೆಂಡ್​ಗಳಲ್ಲಿ ಮೂವರು ಪ್ರಯಾಣಿಕರಿಗೆ ಟಿಕೆಟ್ ಕೊಟ್ಟಿದ್ದಾರೆ’ ಎಂದು ವಿಡಿಯೊದೊಂದಿಗೆ ಶೇರ್ ಮಾಡಿರುವ ಒಕ್ಕಣೆಯು ವಿವರಿಸುತ್ತದೆ.

ಈ ವಿಡಿಯೊವನ್ನು 8 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಈ ವ್ಯಕ್ತಿಯ ಚುರುಕುತನ ಮತ್ತು ಕೌಶಲವನ್ನು ಸಾಕಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಈತನ ಸಾಮರ್ಥ್ಯ ಗುರುತಿಸಿ, ಸೂಕ್ತ ಮನ್ನಣೆ ಒದಗಿಸಿಕೊಡಬೇಕು. ಭಾರತೀಯ ರೈಲ್ವೆಯ ಅಧಿಕಾರಿಗಳು ಈ ಕೆಲಸ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಕೆಲವರು ಈ ವ್ಯಕ್ತಿಯನ್ನು ನವಿ ಮುಂಬೈ ನಿಲ್ದಾಣದಲ್ಲಿ ನೋಡಿರುವುದಾಗಿ ನೆನಪು ಹಂಚಿಕೊಂಡಿದ್ದಾರೆ.

ಈ ವೈರಲ್ ಟ್ವೀಟ್​ಗೆ ಬಂದಿರುವ ಕೆಲ ಪ್ರತಿಕ್ರಿಯೆಗಳ ಸ್ಯಾಂಪಲ್ ಹೀಗಿದೆ ನೋಡಿ…

Published On - 11:15 am, Sun, 3 July 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ