ಪದಗಳಿಗೆ ನಿಲುಕದ ಅನುಭೂತಿ, ನೀವು ನೋಡಲೇಬೇಕಾದ ವಿಡಿಯೋ! ರಾಮನ ಪೂಜೆ ವೇಳೆ ಎಂಟ್ರಿಕೊಟ್ಟ ಮಂಗ ಮಹಿಳೆಯ ಮಡಿಲು ಸೇರಿತು!

|

Updated on: Jan 20, 2024 | 5:28 PM

ವೀಡಿಯೊದಲ್ಲಿ ರಾಮ ಭಕ್ತೆಯೊಬ್ಬರು ತಮ್ಮ ಮನೆಯಲ್ಲಿ ಕುಳಿತು ದೇವರ ವಿಗ್ರಹದ ಮುಂದೆ ರಾಮ ನಾಮವನ್ನು ಜಪಿಸುತ್ತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಅಲ್ಲಿಗೆ ಬಂದ ಮಂಗ ನೇರವಾಗಿ ಮಹಿಳೆಯ ಮಡಿಲು ಸೇರಿಕೊಂಡಿದೆ. ಆ ನಂತರ ಮಹಿಳೆಯನ್ನು ತಬ್ಬಿಕೊಂಡಿದೆ. ಆದರೆ ಆ ಮಹಿಳೆ ಸ್ವಲ್ಪವೂ ವಿಚಲಿತರಾಗದೆ/ ಭಯಪಡದೆ ಆ ಕೋತಿಯನ್ನು ನೇವರಿಸುತ್ತಾ ತಮ್ಮ ಎದೆಗೆ ಅಪ್ಪಿಕೊಂಡಿದ್ದಾರೆ.

ಇದು ಪದಗಳಿಗೆ ನಿಲುಕದ ಅನುಭೂತಿ. ವಿಡಿಯೋ ನೋಡಿ ನೀವೇ ಆ ದಿವ್ಯ ಅನುಭವವನ್ನು ಅರ್ಥೈಸಿಕೊಳ್ಳಬೇಕು. ಏನಂದರೆ ಪ್ರಸ್ತುತ ಇಡೀ ದೇಶವೇ ರಾಮನ ಸ್ಮರಣೆಯಲ್ಲಿ ಮಿಂದೇಳುತ್ತಿದೆ. ರಾಮಾಮಯಂ.. ಇಡೀ ಜಗತ್ತೇ ರಾಮಾಮಯಂ ಆಗಿದೆ. ರಾಮ ಸ್ಮರಣೆಯಲ್ಲಿ ಅಯೋಧ್ಯೆ ಮಾತ್ರವಲ್ಲದೆ ದೇಶಾದ್ಯಂತ ಹಲವಾರು ರೀತಿಯ ಚಿತ್ರಗಳು, ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಅದನ್ನು ನೋಡಿದಾಗ ಮನಸ್ಸಿಗೆ ಆನಂದವಾಗುತ್ತದೆ. ಕೆಲವೆಡೆ ರಾಮನ ನಾಮಸ್ಮರಣೆ ಮಾಡುತ್ತಾ, ಕೀರ್ತನೆಗಳನ್ನು ಹಾಡುತ್ತಾ ಪೂಜೆಗಳಲ್ಲಿ ತಲ್ಲೀನವಾಗಿರುವುದನ್ನು ಕಾಣಬಹುದು. ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ವಿದೇಶದಿಂದ ಆಗಮಿಸಿರುವವರೂ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಿಡಿಯೋಗಳನ್ನು ಪೋಸ್ಟ್ ಮಾಡಿ ರಾಮ ಮಂದಿರಕ್ಕೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ರಾಮ ಭಕ್ತೆಯೊಬ್ಬರಿಗೆ ಸಂಬಂಧಿಸಿದ್ದಾಗಿದೆ. ಇದನ್ನು ನೋಡಿದ ಜನರು ಭಾವಪರವಶವಾಗಿದ್ದಾರೆ. ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ರಾಮನ ನಾಮಸ್ಮರಣೆ ಮಾಡುತ್ತಾ ಪೂಜೆಗೆ ಕುಳಿತಿದ್ದಾರೆ. ಆಗ ಇದ್ದಕ್ಕಿದ್ದಂತೆ ಕೋತಿಯೊಂದು (ಆಂಜನೇಯ ರೂಪಿಯಾಗಿ) ಪೂಜಾ ಸಾಮಾಗ್ರಿಗಳ ಮಧ್ಯೆ ಕುಂಟಿಕೊಂಡು ಬರುತ್ತಾ, ಆ ಮಹಿಳೆಯ ಬಳಿಗೆ ಧಾವಿಸಿದೆ. ಅಷ್ಟೇ ಮುಂದಿನದೆಲ್ಲಾ ಊಹಿಸಲೂ ಆಗದಂತಹ ದೃಶ್ಯಾವಳಿಗಳೇ… ಅದನ್ನು ನೋಡಿದ ಮನೆ ಮಂದಿ ಮಂತ್ರಮುಗ್ಧರಾಗಿದ್ದಾರೆ.

ವೀಡಿಯೊದಲ್ಲಿ ರಾಮ ಭಕ್ತೆಯೊಬ್ಬರು ತಮ್ಮ ಮನೆಯಲ್ಲಿ ಕುಳಿತು ದೇವರ ವಿಗ್ರಹದ ಮುಂದೆ ರಾಮ ನಾಮವನ್ನು ಜಪಿಸುತ್ತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಅಲ್ಲಿಗೆ ಬಂದ ಮಂಗ ನೇರವಾಗಿ ಮಹಿಳೆಯ ಮಡಿಲು ಸೇರಿಕೊಂಡಿದೆ. ಆ ನಂತರ ಮಹಿಳೆಯನ್ನು ತಬ್ಬಿಕೊಂಡಿದೆ. ಆದರೆ ಆ ಮಹಿಳೆ ಸ್ವಲ್ಪವೂ ವಿಚಲಿತರಾಗದೆ/ ಭಯಪಡದೆ ಆ ಕೋತಿಯನ್ನು ನೇವರಿಸುತ್ತಾ ತಮ್ಮ ಎದೆಗೆ ಅಪ್ಪಿಕೊಂಡಿದ್ದಾರೆ.

ಅದರಿಂದ ಮತ್ತಷ್ಟು ಪ್ರೇರೇಪಿತವಾದಂತೆ ಆ ವಾನರ ಅಮ್ಮನ ಮಡಿಲು ಸಿಕ್ಕಿರುವಾಗ ತನಗೆ ಪ್ರಪಂಚದಲ್ಲಿ ಇನ್ನೇನೂ ಬೇಡ ಎಂದು ಆಟವಾಡುತ್ತಾ ಅಲ್ಲೇ ಇದ್ದಬಿಟ್ಟಿದೆ. ಇಷ್ಟಾಗಿಯೂ ಆ ಮಹಿಳೆ ರಾಮ ನಾಮ ಸ್ಮರಣೆಯನ್ನು ನಿಲ್ಲಿಸದೆ ಆ ಆಂಜನೇಯನನ್ನು ಸಂತೈಸುವ ದೃಶ್ಯ ಮನ ಮುಟ್ಟುವಂತಿದೆ. ಕಣ್ಣಲ್ಲಿ ಆನಂದಭಾಷ್ಪ ತರಿಸುವಷ್ಟು ಅದ್ಭುತವಾಗಿದೆ ಆ ದೃಶ್ಯಗಳು. ಅದು ನಿಜಕ್ಕೂ ಅಪರೂಪದ ದೃಶ್ಯವೇ ಸರಿ. ಸಾಕ್ಷಾತ್​ ಆಂಜನೇಯನೇ ಬಂದು ತಮ್ಮನ್ನು ಆಶೀರ್ವದಿಸಿದ್ದಾನೆ ಎಂದು ಮನೆ ಮಂದಿಯೆಲ್ಲಾ ಆನಂದತುಂದಿಲಿತರಾಗಿದ್ದಾರೆ.

ಇನ್ನು ಮನೆ ಮಂದಿ ಸಹ ಆತಂಕಗೊಳ್ಳದೆ, ಇಡೀ ಪ್ರಸಂಗವವನ್ನು ವಿಡಿಯೋ ಮಾಡಿ, ಟ್ವಿಟ್ಟರ್​​ ಜಾಲದಲ್ಲಿ ಪೋಸ್ಟ್​ ಮಾಡಿದ್ದಾರೆ. ರಾಮಭಕ್ತರು ಆ ವಿಡಿಯೋ ನೋಡಿ ಬಾಲ ರಾಮನ ಪ್ರತಿಷ್ಠಾಪನೆ ಕಾರ್ಯ ನಡೆದಿರುವಾಗ ಸಾಕ್ಷಾತ್​ ಆಂಜನೇಯ ಆಗಮಿಸಿದ್ದಾನೆ ಎಂದು ಸಂತಸಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Sat, 20 January 24