Viral Video: ಕಂಡಕ್ಟರನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಡ್ರೈವರಣ್ಣ, ಮುಂದೇನಾಯ್ತು ನೋಡಿ? 

ಕೆಲದಿನಗಳ ಹಿಂದೆ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ  ತಮಾಷೆಯ ಘಟನೆಯೊಂದು ನಡೆದಿದ್ದು, ಗಡಿಬಿಡಿಯಲ್ಲಿ ಬಸ್ ಚಾಲಕ  ಕಂಡಕ್ಟರನ್ನು ಹಿಂದಿನ ನಿಲ್ದಾಣದಲ್ಲೇ ಬಿಟ್ಟು ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮದು ಮಗನನ್ನು ಬಿಟ್ಟು ಮದುವೆಗೆ  ಹೋದಂತೆ, ಡ್ರೈವರಣ್ಣ ಕಂಡಕ್ಟರನ್ನೇ ಬಿಟ್ಟು ಹೋಗಿದ್ದಾನಲ್ವಾ ಅಂತ ನೆಟ್ಟಿಗರು ತಮಾಷೆ ಮಾಡಿದ್ದಾರೆ. 

Viral Video: ಕಂಡಕ್ಟರನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಡ್ರೈವರಣ್ಣ, ಮುಂದೇನಾಯ್ತು ನೋಡಿ? 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 20, 2024 | 3:36 PM

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯಮಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇಂತಹ ಫನ್ನಿ ವಿಡಿಯೋಗಳನ್ನು ನೋಡುವುದೆಂದರೇನೇ ಒಂದು ಖುಷಿ. ಇಂತಹ ವಿಡಿಯೋಗಳನ್ನು ನೋಡಿದಾಗ ಮಾನಸಿಕ ಒತ್ತಡದಿಂದ ಕೊಂಚ ರಿಲೀಫ್ ಸಿಗುತ್ತೆ. ಇದೇ ಕಾರಣಕ್ಕೆ ಅದೆಷ್ಟೋ ಜನರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯ ವಿಡಿಯೋಗಳನ್ನು ನೋಡುತ್ತಾ ಸಮಯ ಕಳೆಯುತ್ತಾರೆ. ಅದೇ ರೀತಿ ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಬಸ್ ಚಾಲಕನೊಬ್ಬ ಕಂಡೆಕ್ಟರನ್ನು ಹಿಂದಿನ ನಿಲ್ದಾಣದಲ್ಲಿಯೇ ಮರೆತು ಬಿಟ್ಟು ಗಡಿಬಿಡಿಯಲ್ಲಿ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ಹೌದು ಕೆಲ ದಿನಗಳ ಹಿಂದೆ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಈ ತಮಾಷೆಯ ಘಟನೆ ನಡೆದಿದ್ದು, ಗಡಿಬಿಡಿಯಲ್ಲಿ ಡ್ರೈವರ್ ಅಣ್ಣ ಬಸ್ ನಿರ್ವಾಹಕರನ್ನು ಹಿಂದಿನ  ನಿಲ್ದಾಣದಲ್ಲಿಯೇ ಬಿಟ್ಟು ಬಸ್ ಚಲಾಯಿಸಿಕೊಂಡು ಹೋಗಿದ್ದಾರೆ. ನಂತರ ಕಂಡೆಕ್ಟರ್ ಯಾರೋ ಒಬ್ಬರ ಬೈಕಿನಲ್ಲಿ ಚೇಸ್ ಮಾಡುತ್ತಾ ಬಂದು, ಬಸ್ ಹಿಡಿದಿದ್ದಾರೆ.

ಈ ವಿಡಿಯೋವನ್ನು ವೆರೋನಿಕ ಡಿಸೋಜಾ (@VeronicaD_souza)  ಎಂಬವರು X ಖಾತೆಯಲ್ಲಿ ಹಂಚಿಕೊಂಡಿದ್ದು, ಡ್ರೈವರಣ್ಣ ಹಿಂದಿನ ನಿಲ್ದಾಣದಲ್ಲಿ ಕಂಡೆಕ್ಟರನ್ನು ಮರೆತೇ ಬಿಟ್ಟು ಬಸ್ ಚಲಾಯಿಸಿಕೊಂಡು ಬರುತ್ತಿರುವ ದೃಶ್ಯವನ್ನು ಕಾಣಬಹುದು.

ವೈರಲ್ ವಿಡಿಯೋದಲ್ಲಿ ಕಂಡಕ್ಟರ್ ಬಸ್ಸಿನಲ್ಲಿಯೇ ಇದ್ದಾನೆ ಎಂದು ಭಾವಿಸಿ, ಬಸ್ ಚಾಲಕ  ಆರಾಮವಾಗಿ ಬಸ್ ಚಲಾಯಿಸಿಕೊಂಡು ಹೋಗುತ್ತಿರುತ್ತಾನೆ.  ಆದ್ರೆ  ಗಡಿಬಿಡಿಯಲ್ಲಿ ಕಂಡೆಕ್ಟರನ್ನು ಹಿಂದಿನ ನಿಲ್ದಾಣದಲ್ಲಿಯೇ ಬಿಟ್ಟು ಬಂದಿರುವ ವಿಷಯ ಡ್ರೈವರಣ್ಣನಿಗೆ ಗೊತ್ತಿರೊಲ್ಲ. ನಂತರ ಯುವಕನೊಬ್ಬ ಕಂಡಕ್ಟರ್ ಹಿಂದಿನ ನಿಲ್ದಾಣದಲ್ಲಿಯೇ  ಬಾಕಿಯಾಗಿದ್ದಾರೆ ಎಂಬ ವಿಷಯವನ್ನು ತಿಳಿಸುತ್ತಾನೆ. ಬಳಿಕ  ಬಸ್ ಸೈಡಿಗೆ ಹಾಕಿ ಕಂಡಕ್ಟರ್ ಬರುವವರೆಗೂ ಕಾಯ್ತಾರೆ.  ಪಾಪ ಕಂಡಕ್ಟರ್ ಯಾರೋ ಒಬ್ಬರ  ಬೈಕಿನಲ್ಲಿ ಬಸ್ಸನ್ನು ಚೇಸ್ ಮಾಡುತ್ತಾ ಬಂದು, ಬಸ್ ಹಿಡಿಯುವ  ತಮಾಷೆಯ ದೃಶ್ಯವನ್ನು  ಕಾಣಬಹುದು.

ಇದನ್ನೂ ಓದಿ: ಕಲ್ಲು ಬಂಡೆಯಲ್ಲಿ ಮೂಡಿದ ಗಜರಾಜ, ಕಲಾವಿದನ ಕಲೆ ಅದ್ಭುತ 

ಜನವರಿ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 55 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಇವನ್ಯಾರು ಅನಾಹುತ ಡ್ರೈವರಪ್ಪಾʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼ ಮದು ಮಗನನ್ನು ಬಿಟ್ಟು ಮದುವೆಗೆ  ಹೋದರಂತೆ, ಹಾಗಾಯಿತು ಈ ಕಥೆʼ ಅಂತ ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ಅನೇಕ ಬಾರಿ ನಡೆದಿದ್ವು, ಅದನ್ನು ನೋಡೋಕೆ ಒಳ್ಳೆ ಮಜಾ ಇರೋದುʼ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?