Viral Video: ಕಲ್ಲು ಬಂಡೆಯಲ್ಲಿ ಮೂಡಿದ ಗಜರಾಜ, ಕಲಾವಿದನ ಕಲೆ ಅದ್ಭುತ
ಚಿತ್ರ ಕಲಾವಿದರ ಕೈಚಳಕ ನಿಜಕ್ಕೂ ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಇಂತಹ ಸಾಕಷ್ಟು ಅದ್ಭುತ ಕಲಾವಿದರ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಕಲಾವಿದರೊಬ್ಬರು ಕಲ್ಲು ಬಂಡೆಯ ಮೇಲೆ ಗಜರಾಜನ ಸುಂದರ ಚಿತ್ರ ಬಿಡಿಸಿದ್ದು, ಇವರ ಈ ಕಲಾ ಕೌಶಲ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.
ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ, ಕವಿ ಕಾಣದ್ದನ್ನು ಕಲಾವಿದ ಕಾಣುತ್ತಾನೆ. ಹೌದು ಚಿತ್ರ ಕಲಾವಿದನಿಗೆ ಈ ಜಗತ್ತಿನ ಪ್ರತಿಯೊಂದು ವಸ್ತುವು ಕಲಾತ್ಮಕವಾಗಿಯೇ ಕಾಣುತ್ತದೆ. ತನ್ನ ಅದ್ಭುತ ಕೈಚಳಕದ ಮೂಲಕ ಪ್ರತಿಯೊಂದು ನಿರ್ಜೀವ ವಸ್ತುವಿನಲ್ಲೂ ಜೀವ ತುಂಬುವ ಕೆಲಸವನ್ನು ಕಲಾವಿದ ಮಾಡುತ್ತಾನೆ. ಇದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಎಲ್ಲರೂ ಇದೇನಿದು ಸಾಮಾನ್ಯ ಕಲ್ಲುಬಂಡೆ ತಾನೆ, ಅದ್ರಲ್ಲಿ ಏನಿದೆ ವಿಶೇಷ ಅಂತ ಅಂದುಕೊಂಡಿರುವ ಕಲ್ಲು ಬಂಡೆಯೂ ಈ ಕಲಾವಿದರಿಗೆ ಕಲಾತ್ಮಕವಾಗಿ ಕಂಡಿದೆ. ಅವರು ಆ ನಿರ್ಜೀವ ಕಲ್ಲುಬಂಡೆಯಲ್ಲಿ ಆನೆಯ ಚಿತ್ರವನ್ನು ಬಿಡಿಸುವ ಮೂಲಕ ಆ ನಿರ್ಜೀವ ವಸ್ತುವಿಗೂ ಜೀವ ತುಂಬಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಇವರ ಈ ಕಲಾ ಕೌಶಲ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.
ದಿವ್ಯ (@divya_official949) ಎಂಬವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಕಲಾವಿದರೊಬ್ಬರು ಕಲ್ಲು ಬಂಡೆಯಲ್ಲಿ ಆನೆಯ ಚಿತ್ರವನ್ನು ಬಿಡಿಸಿ, ಆ ನಿರ್ಜೀವ ವಸ್ತುವಿಗೂ ಜೀವ ತುಂಬಿರುವ ದೃಶ್ಯವನ್ನು ಕಾಣಬಹುದು.
View this post on Instagram
ವೈರಲ್ ವಿಡಿಯೋದಲ್ಲಿ ಕಲಾವಿದರೊಬ್ಬರು ಖಾಲಿ ಬಂಡೆಯನ್ನು ಕಂಡು, ಈ ಕಲ್ಲುಬಂಡೆ ಕಾಣಲು ಆನೆಯ ತರಹನೇ ಇದೆಯಲ್ವಾ, ಯಾಕೆ ಇದ್ರಲ್ಲಿ ಆನೆಯ ಚಿತ್ರವನ್ನು ಬಿಡಿಸಬಾರದೆಂದು ಯೋಚಿಸಿ, ಆ ನಿರ್ಜೀವ ಬಂಡೆಗೆ ಬೂದು ಬಣ್ಣದ ಪೇಂಟಿಂಗ್ ಮಾಡಿ ನಂತರ ಅದರಲ್ಲಿ ಕಣ್ಣು, ಕಿವಿ ಮತ್ತು ದಂತವನ್ನು ಬಿಡಿಸಿ ಅದ್ಭುತವಾದ ಆನೆಯ ಚಿತ್ರವನ್ನು ರಚಿಸುವ ಮೂಲಕ ನಿರ್ಜೀವ ವಸ್ತುವಿಗೂ ಜೀವ ನೀಡಿದ್ದಾರೆ.
ಇದನ್ನೂ ಓದಿ:ತನ್ನ ಜಡೆಯ ಮೂಲಕ 566 ಕಿಮೀ ದೂರದಿಂದ ರಾಮ ರಥ ಎಳೆದ ಬದ್ರಿ ಬಾಬಾ
ಜನವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼನಿಮ್ಮ ಕಲೆಗೆ ನನ್ನದೊಂದು ಮೆಚ್ಚುಗೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹಳ ಚೆನ್ನಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಕಲಾವಿದನ ಈ ಕಲಾ ಕೌಶಲ್ಯಕ್ಕೆ ಮನಸೋತು, ಕಮೆಂಟ್ ಮಾಡುವ ಮೂಲಕ ಪ್ರಶಂಸೆ ಸೂಚಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ