AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ಜಡೆಯ ಮೂಲಕ 566 ಕಿಮೀ ದೂರದಿಂದ ರಾಮ ರಥ ಎಳೆದ ಬದ್ರಿ ಬಾಬಾ

ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬದ್ರಿ ಪ್ರಸಾದ್ ವಿಶ್ವಕರ್ಮ ಅಲಿಯಾಸ್ ಬದ್ರಿ ಬಾಬಾ  ಅವರು ತಮ್ಮ ಪ್ರತಿಜ್ಞೆಯಂತೆ  ಜಡೆಗೂದಲಿನಿಂದ ರಾಮ ರಥವನ್ನು ಎಳೆದುಕೊಂಡು ಹೋಗುವ ಮೂಲಕ ಮಧ್ಯಪ್ರದೇಶದ  ದಾಮೋಹ್ ಜಿಲ್ಲೆಯಿಂದ ಅಯೋಧ್ಯೆಗೆ ಪಾದಯಾತ್ರೆಯನ್ನು ಹೊರಟಿದ್ದಾರೆ.  

Viral Video: ತನ್ನ ಜಡೆಯ ಮೂಲಕ 566 ಕಿಮೀ ದೂರದಿಂದ ರಾಮ ರಥ ಎಳೆದ ಬದ್ರಿ ಬಾಬಾ
ಮಾಲಾಶ್ರೀ ಅಂಚನ್​
| Edited By: |

Updated on:Jan 19, 2024 | 6:28 PM

Share

ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದೆ.  ಈ ಒಂದು ಪುಣ್ಯಕಾರ್ಯದಲ್ಲಿ ಭಾಗಿಯಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದಿನದಂದು ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ವಿಶೇಷವಾಗಿ  ರಾಮಭಕ್ತರು ತಮ್ಮ ಊರುಗಳಿಂದ ಪಾದಯಾತ್ರೆ ಮೂಲಕವೇ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುವೆ ಎಂಬ ತಮ್ಮ ಸಂಕಲ್ಪದಂತೆ ಇದಾಗಲೇ ಅಯೋಧ್ಯೆಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಅದೇ ರೀತಿ ಭಕ್ತಿಯ ಅಸಾಧಾರಣ ಪ್ರದರ್ಶನದಲ್ಲಿ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಬದ್ರಿ ಪ್ರಸಾದ್ ವಿಶ್ವಕರ್ಮ ಅಲಿಯಾಸ್ ಬದ್ರಿ ಬಾಬಾ  ತಮ್ಮ ಪ್ರತಿಜ್ಞೆಯಂತೆ  ಜನವರಿ 11 ರಂದು ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಬಟಿಯಾಗಢದಿಂದ ತಮ್ಮ ಜಡೆಯ ಮೂಲಕ ರಾಮ  ರಥವನ್ನು ಎಳೆದುಕೊಂಡು ಹೋಗುವ ಮೂಲಕ  ಅಯೋಧ್ಯೆಗೆ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಗಾಜಿಪುರ, ರಾಧಾನಗರ, ಚೌಕ್  ಹುಸೇಂಗಜ್ ಮಾರ್ಗವಾಗಿ ಸುಮಾರು 566 ಕಿಮೀ ಗೂ ಹೆಚ್ಚು ದೂರವನ್ನು ಕ್ರಮಿಸಿ ಜನವರಿ 22 ರಂದು ಬದ್ರಿ ಬಾಬಾ ಅಯೋಧ್ಯೆಯನ್ನು ತಲುಪುವ ನಿರೀಕ್ಷೆಯಿದೆ.

1992ರಲ್ಲಿ ಬದ್ರಿ ಬಾಬಾ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ, ತನ್ನ ಜಡೆಯಲ್ಲಿಯೇ ರಥವನ್ನು ಎಳೆಯುತ್ತಾ, ಪಾದಯಾತ್ರೆಯ ಮೂಲಕವೇ ರಾಮ ಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವೇ ಎಂಬ ಪ್ರತಿಜ್ಞೆಯನ್ನು ಮಾಡಿದ್ದರು. ಇದೀಗ ತನ್ನ ಪ್ರತಿಜ್ಞೆಯಂತೆ ಬದ್ರಿ ಬಾಬಾ ಅವರು  ದಾಮೋಹ್ ಜಿಲ್ಲೆಯಿಂದ ಜಡೆಯ ಮೂಲಕ ರಾಮ  ರಥವನ್ನು ಎಳೆಯುತ್ತಾ, ಅಯೋಧ್ಯೆಗೆ ಪಾದಯಾತ್ರೆಯನ್ನು ಹೊರಟಿದ್ದಾರೆ.

ಸುದ್ದಿ ಸಂಸ್ಥೆ ANI ತನ್ನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಜನವರಿ 22 ರಂದು ನಡೆಯಲಿರುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಡೆಯಲ್ಲಿ ರಾಮ ರಥವನ್ನು ಎಳೆಯುತ್ತಾ, ದಾಮೋಹ್ ನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟಿರುವ ಬದ್ರಿ ಬಾಬಾ” ಎಂಬ ಶೀರ್ಷಿಕೆಯನ್ನು ಬರೆದಿಕೊಂಡಿದೆ.

ಇದನ್ನೂ ಓದಿ: ಮಾನವೀಯ ಮೌಲ್ಯವನ್ನು ಈ ದಂಪತಿಗಳನ್ನು ನೋಡಿ ನಾವು ಕಲಿಯಬೇಕು ನೋಡಿ

ವಿಡಿಯೋದಲ್ಲಿ ಕಾವಿ ಬಟ್ಟೆಯನ್ನು ತೊಟ್ಟಿರುವ ಬದ್ರಿ ಬಾಬಾ ಅವರು ತನ್ನ ಜಡೆಗೂದಲಿಗೆ ಹಗ್ಗವನ್ನು ಕಟ್ಟಿ ಅದರಲ್ಲಿ ರಾಮ ರಥವನ್ನು ಎಳೆಯುತ್ತಾ ಪುಣ್ಯ  ಭೂಮಿ ಅಯೋಧ್ಯೆಗೆ ಪಾದಯಾತ್ರೆ ಹೊರಟಿರುವುದನ್ನು ಕಾಣಬಹುದು.

Published On - 6:06 pm, Fri, 19 January 24

Follow Us
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು