
ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಕೋತಿಯೊಂದು ನುಗ್ಗಿತ್ತು. ಇಲ್ಲಿ ವಿಮಾನಕ್ಕಾಗಿ ಕಾಯುತ್ತಾ ಕುಳಿತಿದ್ದವರು ಅನಿರೀಕ್ಷಿತವಾಗಿ ಒಳಗೆ ನುಗ್ಗಿ ಏರ್ಪೋರ್ಟ್ ತುಂಬ ಹಾರಿ, ಓಡುತ್ತಿದ್ದ ಕೋತಿಯನ್ನು ಕಂಡು ಅಚ್ಚರಿ ಪಟ್ಟರು. ಈ ವೇಳೆ ಏರ್ಪೋರ್ಟ್ನ ವಿಐಪಿ ಲಾಂಜ್ಗೆ ಬಂದ ಕೋತಿ ಗ್ಲಾಸ್ನಲ್ಲಿ ಇದ್ದ ಜ್ಯೂಸ್ ಅನ್ನು ಕುಡಿಯಿತು. ಹಾಗೇ, ಸಾಕಷ್ಟು ಜನರು ಕುಳಿತಿದ್ದಂತೆಯೇ ಏರ್ಪೋರ್ಟ್ನೊಳಗೆ ಇದ್ದ ಬಾರ್ ಕೌಂಟರ್ನೊಳಗೆ ಹೋಗಿ ಅಲ್ಲಿದ್ದ ತಿಂಡಿಯನ್ನು ಎಳೆದುಕೊಂಡು ತಿಂದಿತು.
ಈ ವಿಡಿಯೋ ಈ ಭಾರೀ ವೈರಲ್ ಆಗಿದ್ದು, ಆ ಕೋತಿ ಅಷ್ಟು ಹೊತ್ತು ಏರ್ಪೋರ್ಟ್ ತುಂಬ ಅಡ್ಡಾಡಿದರೂ ಯಾರೂ ಯಾಕೆ ಅನ್ನು ಹಿಡಿಯಲಿಲ್ಲ? ಎಂಬ ಚರ್ಚೆಗಳು ಶುರುವಾಗಿವೆ. ಹಾಗೇ ಕಪಿಚೇಷ್ಟೆಯ ವಿಡಿಯೋ ನೋಡಿದ ನೆಟ್ಟಿಗರು ಎಂಜಾಯ್ ಕೂಡ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಬಂದ ಕೋತಿಯನ್ನು ನೋಡಿ ಏರ್ಪೋರ್ಟ್ನೊಳಗಿನ ರೆಸ್ಟೋರೆಂಟ್ ಸಿಬ್ಬಂದಿ ಕೂಡ ಕೆಲ ಕಾಲ ಕಂಗಾಲಾದರು.
ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹದ ಭೀತಿ ಎದುರಾಗಿತ್ತು. ಹಾಗೇ, ಏರ್ಪೋರ್ಟ್ ಒಳಗೂ ನೀರು ನುಗ್ಗಿ, ಕೆರೆಯಂತಾಗಿತ್ತು. ಇದರ ಬೆನ್ನಲ್ಲೇ ಕೋತಿ ಏರ್ಪೋರ್ಟ್ನೊಳಗೆ ಕಾಣಿಸಿಕೊಂಡಿದೆ. ಆದರೆ, ಈ ಕೋತಿಯಿಂದ ಯಾರಿಗೂ ಏನೂ ತೊಂದರೆ ಆಗಿಲ್ಲ. ಫುಡ್ ಕೋರ್ಟ್ನಲ್ಲಿದ್ದವರು ನೋಡುತ್ತಿದ್ದಂತೆಯೇ ಫ್ರೆಶ್ ಫ್ರೂಟ್ ಜ್ಯೂಸ್ ಕುಡಿದ ಕೋತಿ ಬಾರ್ ಕೌಂಟರ್ಗೆ ಹೋಗಿ ಕುಳಿತಿದೆ.
ಇದನ್ನೂ ಓದಿ: Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?