ಜನರು ಶಾಲೆ ಅಥವಾ ಕಾಲೇಜಿಗೆ ಹೋಗುವುದರ ಮೂಲಕ ಅನೇಕ ವಿಷಯಗಳನ್ನು ಕಲಿಯುತ್ತಾರೆ. ಪಾಲಕರು, ತಜ್ಞರು ಹೇಳಿದರೆ ಕೆಲವು ವಿಷಯಗಳು ಗೊತ್ತಾಗುತ್ತವೆ. ಆದರೆ ಕಾಡು ಪ್ರಾಣಿಗಳಿಗೆ ಜೀವನ ಪಾಠವನ್ನು ಯಾರು ಕಲಿಸುತ್ತಾರೆ? ಪ್ರಕೃತಿಯೇ ಅವುಗಳ ಶಾಲೆ. ನಿಸರ್ಗದಲ್ಲಿನ ನಿರಂತರ ಪ್ರಕ್ರಿಯೆಯನ್ನು ಗಮನಿಸುವುದರ ಮೂಲಕ ಅವುಗಳು ಅನೇಕ ಪಾಠಗಳನ್ನು ಕಲಿಯುತ್ತವೆ. ಅದಕ್ಕೊಂದು ಉದಾಹರಣೆ ಈ ವಿಡಿಯೋ. ಹಿಮಕರಡಿ ಸಾಮಾನ್ಯವಾಗಿ ಹಿಮಭರಿತ ಪ್ರದೇಶಗಳಲ್ಲಿ ಕಂಡುಬರುತ್ತವೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬಿಳಿ ಹಿಮಕರಡಿಯೊಂದು ಮಂಜುಗಡ್ಡೆಯಿಂದ ಹೆಪ್ಪುಗಟ್ಟಿದ ಸಣ್ಣ ಹೊಳೆಯನ್ನು ತುಂಬಾ ಚುರುಕಾಗಿ ದಾಟುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
ಹೆಪ್ಪುಗಟ್ಟಿದ ನೀರಿನ ಮೇಲೆ ನೇರವಾಗಿ ನಡೆದರೆ ಅದರಲ್ಲಿ ಮುರಿದು ಬೀಳುವ ಅಪಾಯವಿದೆ, ಆದ್ದರಿಂದ ಅದು ಬುದ್ಧಿವಂತಿಕೆಯಿಂದ ಅದರ ಮೇಲೆ ಮಲಗಿ ಜಾರಿಕೊಂಡು ಹೊಳೆಯನ್ನು ದಾಟಿತು. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಅವರು “ಹಿಮಕರಡಿ ಕಲಿಸಿದ ಜೀವನ ಪಾಠ” ಎಂದು ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೋ ನೋಡಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಕೆಲವರು ಪ್ರಾಣಿಯ ಬುದ್ದಿವಂತಿಕೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಇದು ವಿಜ್ಞಾನಿ ಕರಡಿ ಎಂದು ತಮಾಷೆಯಾಗಿ ಹೇಳಿದ್ದಾರೆ.
How to navigate through ice sheet without breaking it – ditto for life ? Life lesson from a Polar bear #FridayFeeling pic.twitter.com/kBmaD9GLr3
— Supriya Sahu IAS (@supriyasahuias) October 14, 2022
ಸಾಮಾನ್ಯವಾಗಿ ಮಂಜುಗಡ್ಡೆಯ ತೆಳುವಾದ ಪದರದ ಮೇಲೆ ನಿಂತರೆ ಒತ್ತಡವು ಹೆಚ್ಚಾಗಿ ಬಿರುಕು ಬಿಡುತ್ತದೆ. ಪರಿಣಾಮವಾಗಿ ಅದರ ಮೇಲೆ ನಿಲ್ಲುವ ಯಾರೇ ಆಗಲಿ ನೀರಿನಲ್ಲಿ ಮುಳುಗಬೇಕಾಗುತ್ತದೆ. ಇದಲ್ಲದೆ ಈ ನೀರು ತುಂಬಾ ತಂಪಾಗಿರುತ್ತದೆ. ಅದಕ್ಕಾಗಿಯೇ ಅಂತಹ ಹೆಪ್ಪುಗಟ್ಟುವಿಕೆ ಮೇಲೆ ಮಲಗಲು ವಿಜ್ಞಾನ ಸೂಚಿಸುತ್ತದೆ. ಹಾಗೆ ಮಾಡಿದರೆ ನಮ್ಮ ದೇಹದ ಭಾರ ಒಂದೇ ಜಾಗಕ್ಕೆ ಬೀಳುವುದಿಲ್ಲ.
ಮತ್ತಷ್ಟು ವೈರಲ್ ವಿಡಿಯೋ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 6:04 pm, Sun, 16 October 22