ಭಾರತದಲ್ಲಿ ಹಲವಾರು ಜೋಡಿಗಳು ತಮ್ಮ ಮದುವೆಯ ಸಮಯದಲ್ಲಿ ವಿಭಿನ್ನವಾಗಿ ಗುರುತಿಸಲು ಪ್ರಯತ್ನಿಸುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿರುತ್ತವೆ. ಇದೀಗ ಅಸ್ಸಾಂನಲ್ಲಿ ನಡೆದ ವಿವಾದ ಸಮಾರಂಭವೊಂದರಲ್ಲಿ ನವಜೋಡಿ ಜೀವನದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಒಪ್ಪಂದವನ್ನು ಮಾಡಿಕೊಂಡಿದ್ದು, ಇದಕ್ಕೆ ನವ ಜೋಡಿ ಶಾಂತಿ ಮತ್ತು ಮಿಂಟು ಸಹಿ ಹಾಕಿದ್ದಾರೆ. ಅಷ್ಟಕ್ಕೂ ಗುತ್ತಿಗೆ ಎಂದು ತಲೆ ಬರಹ ಕೊಟ್ಟಿರುವ ಆ ದೊಡ್ಡ ಚೀಟಿಯಲ್ಲಿ ಏನು ಬರೆಯಲಾಗಿದೆ ಎಂದು ತಿಳಿದರೆ ನಗುವುದರ ಜೊತೆ ಇದು ಸರಿ ಎಂದು ಹೇಳುವಿರಿ.
ಇದನ್ನು ಓದಿ: Viral: ಪ್ರಯಾಣಿಕರಿಗೆ ‘ಕ್ಯೂಟ್ ಶುಲ್ಕ’ ವಿಧಿಸುತ್ತಿರುವ ಇಂಡಿಗೋ, ಏನಿದು ಕ್ಯೂಟ್ ಚಾರ್ಜಸ್?
ಇತ್ತೀಚೆಗಷ್ಟೇ ವರನೊಬ್ಬ ತನ್ನ ವಧುವಿನ ಪಾದಗಳನ್ನು ಮುಟ್ಟಿ ನಂತರ ತಾಳಿ ಕಟ್ಟಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಈ ನವ ಜೋಡಿಯ ಒಪ್ಪಂದದ ವಿಡಿಯೋ ವೈರಲ್ ಆಗುತ್ತಿದೆ. ವೆಡ್ಲಾಕ್ ಫೋಟೋಗ್ರಫಿ ಅಸ್ಸಾಂ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಕ್ಲಿಪ್ನಲ್ಲಿ, ಕೆಂಪು ಲೆಹೆಂಗಾವನ್ನು ಧರಿಸಿದ ವಧು ಮತ್ತು ವರ ಒಪ್ಪಂದಕ್ಕೆ ಸಹಿ ಹಾಕುವುದನ್ನು ತೋರಿಸುತ್ತದೆ. ದೊಡ್ಡ ಕಾಗದದ ಮೇಲೆ ಮುದ್ರಿತವಾದ ಒಪ್ಪಂದಕ್ಕೆ ವಧು ಸಂತೋಷದಿಂದ ಸಹಿ ಹಾಕುತ್ತಾರೆ.
ಇದನ್ನು ಓದಿ: Viral Video: ಮಳೆಯೊಂದಿಗೆ ಭೂಮಿಗೆ ಬಿದ್ದ ಮೀನುಗಳು! ಅಪರೂಪದ ಹವಾಮಾನ ವಿದ್ಯಮಾನಕ್ಕೆ ಸಾಕ್ಷಿಯಾದ ತೆಲಂಗಾಣ
ಒಪ್ಪಂದದಲ್ಲಿ ಇರುವುದು ಷರತ್ತುಗಳು ಏನೇನು?
ಒಪ್ಪಂದದ ಪ್ರಕಾರ, ವಧು ಪ್ರತಿದಿನ ಸೀರೆಯನ್ನು ಉಡಬೇಕು, ಸಂಗಾತಿಯೊಂದಿಗೆ ಮಾತ್ರ ತಡರಾತ್ರಿಯ ಪಾರ್ಟಿಗೆ ಅನುಮತಿ, ವಾರದ ಇತರ ದಿನಗಳಲ್ಲಿ ಯಾರು ಅಡುಗೆ ಮಾಡುತ್ತಾರೆ ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೂ ಭಾನುವಾರ ಬೆಳಗಿನ ಉಪಾಹಾರ ನೀವು ಮಾಡಿರಿ ಎಂದು ಹೇಳಲಾಗಿದೆ, ಮನೆಯ ಆಹಾರಕ್ಕೆ ಯಾವಾಗಲು ಹೌದು ಎಂದು ಹೇಳಬೇಕು, ಪ್ರತಿ ತಿಂಗಳು ಒಂದು ಪಿಜ್ಜಾ ಮಾತ್ರ ತಿನ್ನುವುದು, ಪ್ರತಿದಿನ ಜಿಮ್‌ಗೆ ಹೋಗುವುದು, ಪ್ರತಿ 15 ದಿನಗಳ ನಂತರ ಶಾಪಿಂಗ್ ಮಾಡುವುದು ಮತ್ತು ಪ್ರತಿ ಪಾರ್ಟಿಯಲ್ಲಿ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡುವುದು ಸೇರಿದಂತೆ ಇನ್ನಿತರ ಷರತ್ತುಗಳನ್ನು ವಿಧಿಸಲಾಗಿದೆ.