Ocean Cleanup: ಸಾಗರವನ್ನು ಸ್ವಚ್ಛಗೊಳಿಸುವ ಮೊದಲ ಹಂತ ಯಶಸ್ವಿಯಾಗಿ ಮುಗಿದಿದೆ ಎಂಬ ಶೀರ್ಷಿಕೆ ಈ ವಿಡಿಯೋಗಿದೆ. ರೆಡ್ಡಿಟ್ನಲ್ಲಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಈ ಪ್ರಕ್ರಿಯೆಯ ಬಗ್ಗೆ ಕುತೂಹಲವನ್ನೂ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸಂಗ್ರಹಿಸಿದ ಕಸವನ್ನು (Garbage) ಎಲ್ಲಿಗೆ ಸಾಗಿಸುತ್ತಾರೆ ಎಂದು ಕೆಲವರು ಕೇಳಿದ್ದಾರೆ. ಬಹುಶಃ ಅವರು ಸಮುದ್ರದ ಒಂದು ಬದಿಯಲ್ಲಿ ಹಾಕಬಹುದು ಎಂದಿದ್ದಾರೆ ಒಂದಿಷ್ಟು ಜನ. ರೀಸೈಕಲ್ ಮಾಡಬಹುದು ಎಂದಿದ್ದಾರೆ ಮತ್ತೊಂದಿಷ್ಟು ಜನ. ಇದು ಎಲ್ಲಿಯ ವಿಡಿಯೋ ಎನ್ನುವುದು ತಿಳಿದುಬಂದಿಲ್ಲ.
ಇದನ್ನೂ ಓದಿ : Viral Video: ಗೂಢಚಾರರಿದ್ದಾರೆ ಎಚ್ಚರಿಕೆ! ಮಹಿಳೆಯರಷ್ಟೇ ಇಂಥ ತಂತ್ರಗಳಲ್ಲಿ ಬುದ್ಧಿವಂತರೇ?
7 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಈತನಕ ಸುಮಾರು 4,600 ಜನರು ನೋಡಿದ್ದಾರೆ. 190 ಜನರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿದರೆ, 2050 ರ ಸುಮಾರಿಗೆ ಸಮುದ್ರದಲ್ಲಿ ಶೇ. 50 ಕಸವನ್ನು ತೆರವುಗೊಳಿಸಲಾಗುತ್ತದೆ ಎಂದುಕೊಂಡಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ.
Ocean Cleanup project completed it’s first successful trip
byu/RonHayes6 innextfuckinglevel
ಇಂಡೋನೇಷ್ಯಾ ಸುತ್ತಮುತ್ತಲಿನ ಸಾಗರವು ಭಾರೀ ಮಾಲಿನ್ಯಕಾರಕ ಸಾಗರಗಳಲ್ಲಿ ಒಂದಾಗಿದೆ. ನದಿಗಳು ಮತ್ತು ಕಾಲುವೆಗಳಿಂದ ಹೊರಬರುವ ಪ್ಲಾಸ್ಟಿಕ್ ಪ್ರಮಾಣವು ಭಾರೀ ಪ್ರಮಾಣದಲ್ಲಿದೆ ಎಂದಿದ್ದಾರೆ ಒಬ್ಬರು.
ಕೆರಿಬಿಯನ್ ಮತ್ತು ಪೂರ್ವ ಪೆಸಿಫಿಕ್‌ನಲ್ಲಿ ಕೂಡ ಹೆಚ್ಚು ಕಸವನ್ನು ಎಸೆಯಲಾಗುತ್ತದ ಎಂದಿದ್ದಾರೆ ಇನ್ನೊಬ್ಬರು. ಒಟ್ಟಿನಲ್ಲಿ ಈ ಸ್ವಚ್ಛಗೊಳಿಸುವ ಕಾರ್ಯಾಚರಣೆ ನಿಜಕ್ಕೂ ಉತ್ತಮ ಆರಂಭ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral: ಕೇಲ್ ಸಲಾಡ್ ತಿಂದು ಮುಗಿಸುವ ಹೊತ್ತಿಗೆ ಈ ಜಿರಳೆ ಕಂಡಿತ್ತು
ಇದರಲ್ಲ ಪ್ಲಾಸ್ಟಿಕ್ ತ್ಯಾಜ್ಯವೇ ತುಂಬಿಕೊಂಡಿರುತ್ತದೆ ಎಂದಿದ್ದಾರೆ ಒಬ್ಬರು. ಇದರೊಳಗೆ ಏನಾದರೂ ಅಪರೂಪದ ವಸ್ತುಗಳು ಸಿಗಬಹುದೆ? ಎಂದು ಈ ರಾಶಿಯಲ್ಲಿ ಹುಡುಕಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಪಳೆಯುಳಿಕೆಗಳು ಸಿಗುವ ಸಂಭವ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ದಯವಿಟ್ಟು ಇವರಿಗೆ ಈ ಸಮುದ್ರದ ಅಡ್ರೆಸ್ ಕೊಡಿ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ