ಮೆಟ್ರೋ ರೈಲಿನಲ್ಲಿ ಆಗ ‘ಮಂಜುಲಿಕಾ’, ಈಗ ‘ಮನಿ ಹೀಸ್ಟ್’ ಏನಿದೆಲ್ಲ?

| Updated By: ಶ್ರೀದೇವಿ ಕಳಸದ

Updated on: Jan 24, 2023 | 4:03 PM

Money Heist : ಪೌರಾಣಿಕ ಪಾತ್ರಗಳು ಆಗಾಗ ಮನೆಯ ಮುಂದೆ ಪ್ರತ್ಯಕ್ಷವಾಗುವುದು ಸಹಜ. ಆದರೆ ಸಿನೆಮಾ, ವೆಬ್​ ಸೀರೀಸ್​ನ ಪಾತ್ರಗಳು ಮೆಟ್ರೋ ರೈಲಿನಲ್ಲಿ ಹೀಗೆ ಕಾಣಿಸಿಕೊಳ್ಳುತ್ತಿವೆಯೆಂದರೆ...

ಮೆಟ್ರೋ ರೈಲಿನಲ್ಲಿ ಆಗ ‘ಮಂಜುಲಿಕಾ’, ಈಗ ‘ಮನಿ ಹೀಸ್ಟ್’ ಏನಿದೆಲ್ಲ?
ಮೆಟ್ರೋ ರೈಲಿನಲ್ಲಿ ಮನಿ ಹೀಸ್ಟ್​ ಪಾತ್ರಧಾರಿ
Follow us on

Viral Video : ನೀವು ತೆರೆಯ ಮೇಲೆ ನೋಡುವ ವ್ಯಕ್ತಿಗಳು ನಿಮ್ಮೆದುರು ಪ್ರತ್ಯಕ್ಷವಾದರೆ ಏನ್ನಿಸುತ್ತದೆ? ಕೆಲವರಿಗೆ ಅಚ್ಚರಿ, ಕೆಲವರಿಗೆ ಆತಂಕ ಕೆಲವರಿಗೆ ಖುಷಿ, ಇನ್ನೂ ಕೆಲವರಿಗೆ ಭಯ. ಇನ್ನೊಂದು ಪೋಸ್ಟ್​​ನಲ್ಲಿ ಮೆಟ್ರೋ ರೈಲಿನಲ್ಲಿ ಭೂಲ್​ ಭುಲೈಯ್ಯಾದ ಮಂಜುಲಿಕಾಳಂತೆ ವೇಷ ಧರಿಸಿ ಬಂದ ಮಹಿಳೆಯ ವಿಡಿಯೋ ವೈರಲ್ ಆಗಿದ್ದನ್ನು ನೋಡಿದಿರಿ. ಇದೀಗ ಜನಪ್ರಿಯ ವೆಬ್​ ಸೀರೀಸ್​ ಮನಿ ಹೀಸ್ಟ್​ ಪಾತ್ರದಂತೆ ಒಬ್ಬ ವ್ಯಕ್ತಿ ನೋಯ್ಡಾದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾನೆ. ಎರಡು ಬ್ಯಾಗ್​​ಗಳನ್ನು ಹಿಡಿದುಕೊಂಡು ಬಂದ ಈ ವ್ಯಕ್ತಿ ಮನಿ ಹೀಸ್ಟ್​ನ ಪಾತ್ರಧಾರಿಯಂತೆ ಆ ಚೀಲಗಳನ್ನು ನೆಲಕ್ಕೆ ಎಸೆಯುತ್ತಾನೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋ ಅನ್ನು ಈಗಾಗಲೇ ಸುಮಾರು 50,000 ಜನರು ನೋಡಿದ್ಧಾರೆ. 1,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಈ ವಿಡಿಯೋ ನೋಡಿ ತಮಾಷೆ ಮಾಡಿದ್ದಾರೆ. ಈ ಮನಿ ಹೀಸ್ಟ್ ಮತ್ತು ಮಂಜುಲಿಕಾ ಮೆಟ್ರೋ ರೈಲಿನಲ್ಲಿ ಬಂದು ಏನು ಮಾಡುತ್ತಿದ್ದಾರೆ ಎಂದು ಕೇಳಿದ್ದಾರೆ ಅನೇಕರು. ಸ್ಕ್ವಿಡ್​ ಗೇಮ್​ ಮತ್ತು ಮನಿ ಹೀಸ್ಟ್​ ಒಟ್ಟಿಗೆ!? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಒಬ್ಬರು.

ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್

ಮಂಜುಲಿಕಾ ಪಾತ್ರಧಾರಿ, ಮನಿ ಹೀಸ್ಟ್​ ಪಾತ್ರಧಾರಿ ಯಾಕೆ ಹೀಗೆ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ? ರೀಲ್​ಗಾಗಿ ಹೀಗೆ ಮಾಡುತ್ತಿದ್ದಾರೆಯೇ? ಹಾಗಿದ್ದರೆ ಮೆಟ್ರೋ ಸೆಕ್ಯೂರಿಟಿ ಇವರನ್ನು ಒಳಬಿಟ್ಟರು? ಒಟ್ಟಾರೆಯಾಗಿ ಮೆಟ್ರೋ ಅಧಿಕಾರಿಗಳು ಇವರಿಬ್ಬರ ನಡೆಯ ಕಾರಣವನ್ನು ಇನ್ನೂ ದೃಢಪಡಿಸಿಲ್ಲ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ