ಭೂಲ್ ಭುಲೈಯ್ಯಾದ ಮಂಜುಲಿಕಾ ಮೆಟ್ರೋ ರೈಲಿನಲ್ಲಿ; ಪ್ರಯಾಣಿಕರಿಗೆ ಕಿರಿಕಿರಿ
Metro : ಆಫೀಸಿನ ಕೆಲಸ ಮುಗಿಸಿ ಮೆಟ್ರೋದಲ್ಲಿ ನಿಮ್ಮದೇ ಗುಂಗಿನಲ್ಲಿ ಪ್ರಯಾಣಿಸುವಾಗ ತೆರೆಯ ಮೇಲಿದ್ದ ಭಯಾನಕ ಪಾತ್ರವು ನಿಮ್ಮೆದುರಿಗೆ ಬಂದರೆ ಏನು ಮಾಡುತ್ತೀರಿ? ಸೆಕ್ಯೂರಿಟಿ ಹೇಗೆ ಇವಳನ್ನು ಒಳಬಿಟ್ಟಿರು ಎನ್ನುತ್ತಿದ್ದಾರೆ ನೆಟ್ಟಿಗರು.
Viral Video : ತೆರೆಯ ಮೇಲಿನ ಭಯಾನಕ ಪಾತ್ರಗಳನ್ನು ನೋಡಿ ಸುಧಾರಿಸಿಕೊಳ್ಳಲು ಕೆಲವರಿಗೆ ವಾರಗಟ್ಟಲೆ ಬೇಕಾಗಿರುತ್ತದೆ. ಇನ್ನು ನೀವು ಯಾವುದೋ ಗುಂಗಿನಲ್ಲಿ ಮುಳುಗಿ ನಿತ್ಯಪ್ರಯಾಣಕ್ಕಾಗಿ ರೈಲಿನಲ್ಲಿ ಕುಳಿತಿರುತ್ತೀರಿ. ಇದ್ದಕ್ಕಿದ್ದಂತೆ ತೆರೆಯ ಮೇಲೆ ನೋಡಿದ ಭಯಾನಕ ಆಕೃತಿಯೊಂದು ನಿಮ್ಮ ಬಳಿ ಬರುತ್ತದೆ ಎಂದುಕೊಳ್ಳಿ. ಆಗ ನಿಮ್ಮ ಅವಸ್ಥೆ! ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಭೂಲ್ ಭುಲೈಯ್ಯಾ ಸಿನೆಮಾದಲ್ಲಿ ವಿದ್ಯಾ ಬಾಲನ್ ಅಭಿನಯಿಸಿದ ಮಂಜುಲಿಕಾ ಪಾತ್ರವು ಮೆಟ್ರೋದೊಳಗೇ ಬಂದುಬಿಟ್ಟಿದೆ! ಪ್ರಯಾಣಿಕರಲ್ಲಿ ಕೆಲವರು ಹೆದರಿ ಕಕ್ಕಾಬಿಕ್ಕಿಯಾಗಿದ್ದಾರೆ. ಇನ್ನೂ ಕೆಲವರು ಸ್ಥಿತಪ್ರಜ್ಞರಾಗಿಯೇ ಕುಳಿತಿದ್ದಾರೆ.
ಇದನ್ನೂ ಓದಿView this post on Instagram
ಈ ವಿಡಿಯೋ ನೋಡಿದ ನೆಟ್ಟಿಗರು ಹರಸಿ ಹಾಡಿ ಹೊಗಳುತ್ತಿದ್ಧಾರೆ. ಪಾತ್ರಧಾರಿಯು ನಾಟಕ, ಸಿನೆಮಾದಲ್ಲಿ ಅಭಿನಯಿಸಬೇಕಿತ್ತು. ಹೀಗೆ ಸಾರ್ವಜನಿಕ ವಲಯಗಳಲ್ಲಿ ಅಲ್ಲ. ತೆರೆಯ ಮೇಲಿದ್ದರೆ ಮೆಚ್ಚುಗೆಯಾದರೂ ಸಿಗುತ್ತಿತ್ತು ಎಂದಿದ್ಧಾರೆ ನೆಟ್ಟಿಗರು. ಸೆಕ್ಯೂರಿಟಿ ಕಣ್ತಪ್ಪಿಸಿ ಆಕೆ ಒಳಬಂದಿದ್ದಾದರೂ ಹೇಗೆ ಎಂದು ಅಚ್ಚರಿ ಪಡುತ್ತಿದ್ದೇನೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : ನೋ ಟ್ರೌಸರ್ಸ್ ಟ್ಯೂಬ್ ರೈಡ್ 2023; ಲಂಡನ್ನಿಗರು ತಮ್ಮ ಪ್ಯಾಂಟ್ ತೆಗೆದು ಪ್ರಯಾಣಿಸಿದ್ದೇಕೆ?
ಲೇಡೀಸ್ ಸೀಟ್ ಬಿಟ್ಟುಕೊಡಿ ಎಂದು ಸಹಜವಾಗಿ ಕೇಳಿದ್ದರೆ ಸಾಕಿತ್ತು. ಅದಕ್ಕೆ ಈ ಪರಿ ವೇಷ ಹಾಕಿ ಬರುವ ಅಗತ್ಯವಿತ್ತೆ? ಎಂದು ಕೇಳಿದ್ಧಾರೆ ಇನ್ನೊಬ್ಬರು. ಮೆಟ್ರೋ ರೈಲಿನಲ್ಲಿ ಇಂಥ ನಾಟಕಗಳು ಯಾವಾಗಿನಿಂದ ಶುರುವಾದವು ಎಂದು ಕೇಳಿದ್ಧಾರೆ ಮತ್ತೊಬ್ಬರು. ಹೆಡ್ಫೋನ್ ಹಾಕಿಕೊಂಡ ಆ ಹುಡುಗ ನಾನೇ ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ಸೀರೆ ಉಟ್ಟುಕೊಂಡು ಪ್ಯಾರಾಗ್ಲೈಡಿಂಗ್ ಮಾಡಿದ 80ರ ಅಜ್ಜಿಯ ವಿಡಿಯೋ ವೈರಲ್
ಅಕ್ಕಾ, ಇದನ್ನು ಮುಂಬೈ ಮೆಂಟ್ರೋದಲ್ಲಿ ಮಾಡು, ನಿಲ್ಲಲೂ ಜಾಗವಿಲ್ಲದ ರೈಲಿನಲ್ಲಿ ಹೇಗೆ ಅಭಿನಯಿಸುತ್ತೀ ನೋಡೋಣ ಎಂದು ಸವಾಲು ಹಾಕಿದ್ದಾರೆ ಇನ್ನೂ ಒಬ್ಬರು. ಓವರ್ ಆ್ಯಕ್ಟಿಂಗ್ಗೆ ಐವತ್ತು ರೂಪಾಯಿ ಕೊಟ್ಟು ಕಳಿಸಿ ಎಂದು ಹೇಳಿದ್ದಾರೆ ಮಗದೊಬ್ಬರು. ರೀಲ್ಸ್ಗಾಗಿ ಹೀಗೆ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ? ನಿನ್ನೆಯಷ್ಟೇ ಹೆದ್ದಾರಿಯಲ್ಲಿ ಕಾರ್ ನಿಲ್ಲಿಸಿ ರೀಲ್ ಮಾಡಿದ ಸೋಶಿಯಲ್ ಮೀಡಿಯಾದ ಪ್ರಭಾವಿ ಯುವತಿಯೊಬ್ಬಳಿಗೆ ಪೊಲೀಸರು ರೂ. 17,000 ದಂಡ ಹಾಕಿದ್ದಾರೆ. ಇನ್ನು ಈ ಯುವತಿಯನ್ನು ಪೊಲೀಸರು ಗಮನಿಸಿಲ್ಲವೆ?
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:04 am, Tue, 24 January 23