ನೋ ಟ್ರೌಸರ್ಸ್ ಟ್ಯೂಬ್ ರೈಡ್​ 2023; ಲಂಡನ್ನಿಗರು ತಮ್ಮ ಪ್ಯಾಂಟ್​ ತೆಗೆದು ಪ್ರಯಾಣಿಸಿದ್ದೇಕೆ?

No Trousers Tube Ride 2023 : ಸುಮಾರು 20 ವರ್ಷಗಳಿಂದ ಜಗತ್ತಿನಾದ್ಯಂತ ಸುಮಾರು 60ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಜನವರಿ 8ರಂದು ನೋ ಟ್ರೌಸರ್ಸ್ ಟ್ಯೂಬ್​ ರೈಡ್​ ಆಚರಿಸಲಾಗುತ್ತದೆ. ಮಾಹಿತಿಯೊಂದಿಗೆ ವಿಡಿಯೋ ಕೂಡ ನೋಡಿ.

ನೋ ಟ್ರೌಸರ್ಸ್ ಟ್ಯೂಬ್ ರೈಡ್​ 2023; ಲಂಡನ್ನಿಗರು ತಮ್ಮ ಪ್ಯಾಂಟ್​ ತೆಗೆದು ಪ್ರಯಾಣಿಸಿದ್ದೇಕೆ?
ನೋ ಟ್ರೈಸರ್ಸ್​ ಟ್ಯೂಬರ್ ರೈಡ್​ನಲ್ಲಿ ಪಾಲ್ಗೊಂಡ ಲಂಡನ್​ ಪ್ರಯಾಣಿಕರು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 10, 2023 | 11:57 AM

Viral : ನಮ್ಮ ಭಾರತದಲ್ಲಿ ಇದು ನಡೆಯಲು ಸಾಧ್ಯವೇ ಇಲ್ಲ ಎಂದು ಮೊದಲಿಗೇ ಹೇಳುತ್ತಾ, ಹಾಗಿದ್ದರೆ ಇದು ಎಲ್ಲಿ ನಡೆದಿದೆ ಯಾಕಾಗಿ ನಡೆದಿದೆ ಎನ್ನುವುದನ್ನು ತಿಳಿದುಕೊಳ್ಳೋಣ. ಇವರೆಲ್ಲ ಈ ವೇಷದಲ್ಲಿ ಹೀಗೆ ಸುರಂಗಮಾರ್ಗದ ರೈಲುನಿಲ್ದಾಣದಲ್ಲಿ ಒಟ್ಟಿಗೆ ನಿಂತಿರುವುದರ ಉದ್ದೇಶವೇನು? ಎಲ್ಲ ಸೇರಿ ಹೀಗೆ ಪ್ಯಾಂಟ್ ಇಲ್ಲದೆ ಹೊರಟಿರುವುದಾದರೂ ಎಲ್ಲಿಗೆ? ಇವರ ಉದ್ದೇಶವೇನು? ಇದು ಯಾವುದಾದರೂ ಸಿನೆಮಾ ಶೂಟಿಂಗ್​? ಖಂಡಿತ ಅಲ್ಲ. ಇದು ಲಂಡನ್​ನಲ್ಲಿ ಜನವರಿ 8ರಂದು ನಡೆದ ನೋ ಟ್ರೌಸರ್ಸ್ ಟ್ಯೂಬ್​ ರೈಡ್​ 2023 (No Trousers Tube Ride 2023)ರ ದೃಶ್ಯ. ನೂರಾರು ಲಂಡನ್​ ವಾಸಿಗಳು ಪ್ಯಾಂಟ್​ ಧರಿಸದೆ ಸುರಂಗ ಮಾರ್ಗದಲ್ಲಿ ಚಲಿಸುವ ರೈಲಿನೊಳಗೆ ಪ್ರಯಾಣಿಸಿದ್ದಾರೆ. ಜಗತ್ತಿನ ಮಂದಿ ಈ ವರ್ತಮಾನವನ್ನು ಕುತೂಹಲದಿಂದ ಓದುತ್ತಿದೆ, ನೋಡುತ್ತಿದೆ.

ಲಂಡನ್ನಿನ ಎಲಿಜಬೆತ್​ ಲೈನ್​ನಲ್ಲಿ ಮೊದಲಿಗೆ 2022ರ ಜನವರಿ 8ರಂದು ನಮ್ಮ ಮೆಟ್ರೋ ರೈಲಿನಂತೆ ಟ್ಯೂಬ್​ ರೈಲಿನಲ್ಲಿ ಸಾವಿರಾರು ಪ್ರಯಾಣಿಕರು ಹೀಗೆ ಪ್ಯಾಂಟ್​ ಇಲ್ಲದೆಯೇ ಕಾಣಿಸಿಕೊಂಡು ನೋ ಟ್ರೌಸರ್ಸ್​ ಟ್ಯೂಬ್​  ರೈಡ್​ ಆಚರಿಸಿದರು. ಇದೀಗ ಒಂದು ವರ್ಷದ ನಂತರ ಇದೇ ದಿನದಂದು ಈ ದಿನವನ್ನು ಆಚರಿಸಿದ್ಧಾರೆ. ​ರೈಲು ನಿಲ್ಧಾಣಕ್ಕೆ ಬರುತ್ತಿದ್ದಂತೆ ತಮ್ಮ ಪ್ಯಾಂಟ್​, ಬೂಟು, ಸಾಕ್ಸ್​ಗಳನ್ನು ಬಿಚ್ಚಿ ಬ್ಯಾಗಿನಲ್ಲಿ ಇಟ್ಟುಕೊಂಡು ಶಾಂತವಾಗಿ ಪ್ರಯಾಣಿಸುವುದಷ್ಟೇ ಈ ದಿನದ ಆಚರಣೆಯಲ್ಲಿ ಪಾಲ್ಗೊಳ್ಳಲಿರುವವರಿಗೆ ಇರುವ ನಿಯಮ.

ಇದನ್ನೂ ಓದಿ : ರಾಮೆನ್​ ಥಣ್ಣಗಾಗಿದ್ದಾನೆ! ಚಮಚ ಸಮೇತ ಹಿಮಗಟ್ಟಿದ ನೂಡಲ್ಸ್​ ವಿಡಿಯೊ ವೈರಲ್

ಆದರೆ ಈ ಆಚರಣೆ ಶುರುವಾಗಿದ್ದು 20 ವರ್ಷಗಳ ಹಿಂದೆ. ನೋ ಟ್ರೌಸರ್ಸ್ ಟ್ಯೂಬ್ ರೈಡ್​ ಇವೆಂಟ್​ ಅನ್ನು ನ್ಯೂಯಾರ್ಕ್​ನ ಕಾಮಿಕ್​ ಕಲಾ ಪ್ರದರ್ಶನ ಗುಂಪೊಂದು ನ್ಯೂಯಾರ್ಕ್​ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತು.  ಇಂಪ್ರೋವ್​ ಎವರಿವೇರ್​ ವೆಬ್​ ಪ್ರಕಾರ, ಆರಂಭದಲ್ಲಿ ಏಳು ಜನರು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಹಾಸ್ಯಪ್ರಧಾನ ಪ್ರಯೋಗ ಇದಾಗಿತ್ತು. ಪ್ಯಾಂಟ್ ಧರಿಸದ ಈ ಏಳು ವ್ಯಕ್ತಿಗಳು ಪರಸ್ಪರ ನೋಡದೆ ಅತ್ಯಂತ ಸಹಜವಾಗಿ ಸುರಂಗಮಾರ್ಗದ ರೈಲನ್ನು ಹತ್ತಿದರು ಮತ್ತು ಪ್ರಯಾಣಿಸಿದರು. ಅಂದಿನಿಂದ ಇಂದಿನವರೆಗೂ ಜಗತ್ತಿನಾದ್ಯಂತ ಸುಮಾರು 60ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಜನವರಿ 8ರಂದು ನೋ ಟ್ರೌಸರ್ಸ್ ಟ್ಯೂಬ್​ ರೈಡ್​ ಆಚರಿಸಲಾಗುತ್ತದೆ.

ಇದನ್ನೂ ಓದಿ : ವಿಮಾನದಲ್ಲಿ ಸಹಪ್ರಯಾಣಿಕನೊಂದಿಗೆ ಶರ್ಟ್ ಬಿಚ್ಚಿ ಹೊಡೆದಾಟಕ್ಕಿಳಿದ ಯುವಕನ ವಿಡಿಯೋ ವೈರಲ್

ಲಂಡನ್​, ಜರ್ಮನ್, ಫ್ರಾನ್ಸ್, ಆಸ್ಟ್ರೇಲಿಯಾ, ರೊಮೇನಿಯಾ, ಲಿಸ್ಬನ್, ಟೋಕಿಯೊ, ಟೊರೊಂಟೊ ಮುಂತಾದೆಡೆ ಜನರು ಹೀಗೆ ಈ ರೈಡ್​ನಲ್ಲಿ ಪಾಲ್ಗೊಳ್ಳತೊಡಗಿದರು. ಕೊವಿಡ್​ ಸಮಯದಲ್ಲಿ ಎರಡು ವರ್ಷಗಳ ತನಕ ಕೆಲವೆಡೆ ಈ ದಿನವನ್ನು ಆಚರಿಸಿರಲಿಲ್ಲ. ಆದರೆ 2023ರಲ್ಲಿ ಆಸಕ್ತರು ಮತ್ತೆ ಅದೇ ಉತ್ಸಾಹದಿಂದ ಹಿಂದಿರುಗಿ ಪಾಲ್ಗೊಂಡಿದ್ಧಾರೆ.

ಭಾಗವಹಿಸಲು ಆಸಕ್ತಿ ಇರುವವರು ಟ್ಯೂಬ್ ಸ್ಟೇಷನ್​ನಲ್ಲಿ ಪ್ಯಾಂಟ್​ ತೆಗೆದು ಶಾಂತ ರೀತಿಯಿಂದ ಪ್ರಯಾಣಿಸುವ ತಾಳ್ಮೆ ಬೆಳೆಸಿಕೊಂಡರೆ ಸಾಕು. ಮತ್ತೆ ಇದರ ಉದ್ದೇಶವಿಷ್ಟೇ, ಚಳಿಗಾಲದಲ್ಲಿ ಪ್ಯಾಂಟ್​ ಇಲ್ಲದೆ ಒಂದು ದಿನವಾದರೂ ಕಾಲುಗಳು ಸಹಜವಾಗಿ ಉಸಿರಾಡಿಕೊಂಡಿರಲಿ ಎಂಬುದು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:50 am, Tue, 10 January 23

ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ