AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಮೆನ್ಷಿಯಾದಿಂದ ಬಳಲುತ್ತಿರುವ ಮುತ್ತಜ್ಜಿ ಮರಿಮೊಮ್ಮಗನಿಗಾಗಿ ಲಾಲಿ ಹಾಡಿದಾಗ

Dementia : ಇದು ಒಳ್ಳೆಯ ಅವಕಾಶ, ಹೀಗೆ ಈ ಮಗುವಿನ ಒಡನಾಟದೊಂದಿಗೆ, ಹಾಡುತ್ತ ಹಾಡುತ್ತ ಅಜ್ಜಿಯ ಸ್ಮರಣಶಕ್ತಿ ವಾಪಾಸು ಬಂದರೂ ಬರಬಹುದೇನೋ ಎನ್ನುತ್ತಿದ್ದಾರೆ ನೆಟ್ಟಿಗರು.

ಡಿಮೆನ್ಷಿಯಾದಿಂದ ಬಳಲುತ್ತಿರುವ ಮುತ್ತಜ್ಜಿ ಮರಿಮೊಮ್ಮಗನಿಗಾಗಿ ಲಾಲಿ ಹಾಡಿದಾಗ
ಮೊಮ್ಮಗುವಿಗೆ ಲಾಲಿ ಹಾಡುತ್ತಿರುವ ಮುತ್ತಜ್ಜಿ
TV9 Web
| Edited By: |

Updated on:Jan 24, 2023 | 8:45 AM

Share

Viral Video : ಸ್ಮೃತಿಯ ತಂತುಗಳನ್ನು ಸ್ಪರ್ಶಿಸಿ ಅರಳಿಸುವ ಅಗಾಧ ಚೈತನ್ಯ ಸಂಗೀತಕ್ಕಿದೆ ಮತ್ತು ಎಳೆಯ ಮಗುವಿಗಿದೆ. ಅಂದರೆ ಕಳೆದುದನ್ನು ಮರಳಿಸುವ ಶಕ್ತಿ ಈ ಎರಡಕ್ಕೂ ಇದೆ. ಡಿಮೆನ್ಷಿಯಾ ರೋಗದಿಂದ ಬಳಲುತ್ತಿರುವ ಮುತ್ತಜ್ಜಿಯೊಬ್ಬಳಿಗೆ ಮರಿಮೊಮ್ಮಗನಿಗಾಗಿ ಲಾಲಿ ಹಾಡಿದ್ದಾಳೆ. ಅವಳ ತೋಳೊಳಗೆ ಬೆಚ್ಚಗೆ ಮಲಗಿರುವ ಮಗು ಅಜ್ಜಿ ಹಾಡು ಮತ್ತು ಸ್ಪರ್ಶದಿಂದ ನಿದ್ದೆ ಜಾರುತ್ತಿದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Connie Lynn Hanson (@fsvivace)

ಅಜ್ಜಿಯ ಮೆದುಳು ಜ್ಞಾಪಕ ಶಕ್ತಿಯನ್ನು ಕಳೆದುಕೊಂಡಿದ್ದರೂ ಈ ಹಾಡನ್ನು ಮಾತ್ರ ಹಾಗೇ ಹಿಡಿದಿಟ್ಟುಕೊಂಡಿದೆ. ಮೊಮ್ಮಗುವಿನ ಮುಖ ಆಕೆಯ ನೆನಪಿನ ಶಕ್ತಿಯನ್ನು ಹೀಗೆ ಕ್ಷಣಗಳ ಕಾಲದವರೆಗಾದರೂ ಮರಳಿಸಿದೆ. ಎಂಥ ಆಪ್ತವಾದ ವಿಡಿಯೋ ಅಲ್ವಾ ಇದು?  ಈತನಕ ಈ ವಿಡಿಯೋ ಅನ್ನು ಸುಮಾರು 7,000 ಜನರು ನೋಡಿದ್ದಾರೆ. 500ಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. ಗ್ರೇಟ್​ ಗ್ರ್ಯಾಂಡ್​ಮಾ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ಡಿಮೆನ್ಷಿಯಾದಿಂದ ನರಳುತ್ತಿರುವ ಈ ವೃದ್ಧೆ ನಾಯಿಯನ್ನು ಪ್ರೀತಿಸುವುದನ್ನು ಮಾತ್ರ ಮರೆತಿಲ್ಲ!

ನನಗೀಗ 40. ನನ್ನ ಅಜ್ಜಿ ನಾನು ಮಗುವಿದ್ಧಾಗ ಹಾಡುತ್ತಿದ್ದಳು. ಈ ವಿಡಿಯೋ ಅಜ್ಜಿಯನ್ನೂ ಮತ್ತು ಈ ಹಾಡನ್ನು ಮತ್ತೆ ನೆನಪಿಸಿತು. ಬಹಳ ಆಪ್ತವಾಗಿದೆ ಇದು ಎಂದಿದ್ದಾರೆ ಒಬ್ಬರು. ಇದು ಒಳ್ಳೆಯ ಅವಕಾಶ, ಹೀಗೆ ಮೊಮ್ಮಗುವಿನ ಒಡನಾಟದೊಂದಿಗೆ ಮತ್ತು ಸಂಗೀತದೊಂದಿಗೆ ನಿಮ್ಮ ಅಜ್ಜಿಯು ತನ್ನ ಸ್ಮರಣಶಕ್ತಿಯನ್ನು ವಾಪಾಸು ಪಡೆಯುವಂತೆ ಮಾಡಲು ಎಂದಿದ್ಧಾರೆ ಮತ್ತೊಬ್ಬರು. ಪರ್ವಾಗಿಲ್ಲ ಈ ಅಜ್ಜಿ ಹೀಗೆ ಹಾಡುತ್ತ ಅಳುತ್ತಿದ್ದರೆ… ಆಕೆಗೆ ಹೀಗಾದರೂ ಮತ್ತೆ ನೆನಪಿನ ಶಕ್ತಿ ವಾಪಾಸು ಬರಲಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ಅಪ್ಪ ಅಮ್ಮ ಇಲ್ಲದಿದ್ರೆ ಸತ್ತೇ ಹೋಗ್ತಿದ್ವಿ; ಚಿರತೆಯಿಂದ ಕಾಪಾಡಿದ ಮುಳ್ಳುಹಂದಿಗಳ ವಿಡಿಯೋ ವೈರಲ್

ನನ್ನ ಮಗಳು ಹುಟ್ಟಿದಾಗ ನಾನು ಈ ಹಾಡನ್ನು ಹಾಡುತ್ತಿದ್ದೆ. ಈಗ ಅವಳಿಗೆ 45 ವರ್ಷ. ಈ ಹಾಡನ್ನು ನಾನು ಮರೆತಿದ್ದೆ. ನೆನಪಿಸಿದ್ದಕ್ಕೆ ಧನ್ಯವಾದ ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಎಂಥಾ ಮಧುರವಾದ ಕ್ಷಣಗಳು ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ಇದು ಅತ್ಯಂತ ಹೃದಯಸ್ಪರ್ಶಿಯಾದ ವಿಡಿಯೋ ಎಂದಿದ್ಧಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 8:38 am, Tue, 24 January 23

ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!