Viral News: ಮದುವೆಗೆ ಒಪ್ಪದ ಪ್ರೇಮಿಯ ಮನೆ ಮುಂದೆ ಯುವತಿಯಿಂದ 3 ದಿನ ಪ್ರತಿಭಟನೆ; ಆಮೇಲೇನಾಯ್ತು?

ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಯುವತಿ 3 ದಿನ ತನ್ನ ಪ್ರೇಮಿಯ ಮನೆ ಎದುರು ಪ್ರತಿಭಟನೆ ನಡೆಸಿದಳು. ಆಕೆಯ ಪ್ರತಿಭಟನೆ ವ್ಯರ್ಥವಾಗಲಿಲ್ಲ.

Viral News: ಮದುವೆಗೆ ಒಪ್ಪದ ಪ್ರೇಮಿಯ ಮನೆ ಮುಂದೆ ಯುವತಿಯಿಂದ 3 ದಿನ ಪ್ರತಿಭಟನೆ; ಆಮೇಲೇನಾಯ್ತು?
ಹಿಂದೂ ವಿವಾಹ (ಸಾಂಕೇತಿಕ ಚಿತ್ರ)
Follow us
|

Updated on: Jan 23, 2023 | 6:37 PM

ತನ್ನನ್ನು ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದರಿಂದ ಕೋಪಗೊಂಡ ಯುವತಿ ಆತನ ಮನೆ ಮುಂದೆ 3 ದಿನ ಪ್ರತಿಭಟನೆ ನಡೆಸಿದ್ದಾಳೆ. ಈ ವಿಷಯ ಇಡೀ ಊರಿನಲ್ಲಿ ಚರ್ಚೆಯಾಗುತ್ತಿದ್ದಂತೆ ಆತ ಆಕೆಯನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾನೆ. ಜಾರ್ಖಂಡ್‌ನ (Jharkhand) ಧನ್‌ಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ 4 ವರ್ಷಗಳಿಂದ ಅವರಿಬ್ಬರ ನಡುವೆ ಸಂಬಂಧವಿತ್ತು. ಆದರೆ, ಆತ ಮದುವೆಯಾಗಲು ನಿರಾಕರಿಸಿದ್ದ. ಇದೀಗ ಅವರ ಪ್ರೇಮ ಕಹಾನಿ (Love Story) ಸುಖಾಂತ್ಯ ಕಂಡಿದೆ.

ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಯುವತಿ 3 ದಿನ ತನ್ನ ಪ್ರೇಮಿಯ ಮನೆ ಎದುರು ಪ್ರತಿಭಟನೆ ನಡೆಸಿದಳು. ಆಕೆಯ ಪ್ರತಿಭಟನೆ ವ್ಯರ್ಥವಾಗಲಿಲ್ಲ. ಕೊನೆಗೆ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಭಾನುವಾರ ಅವರಿಬ್ಬರೂ ವಿವಾಹವಾಗಿದ್ದಾರೆ. ರಾಜ್‌ಗಂಜ್‌ನ ಗಂಗಾಪುರದಲ್ಲಿರುವ ಮಾ ಲಿಲೋರಿ ದೇವಸ್ಥಾನದಲ್ಲಿ ಉತ್ತಮ್ ಮಹತೋ ಮತ್ತು ನಿಶಾ ಕುಮಾರಿ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಟಾಮಿ ವೆಡ್ಸ್​ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್

ಮಹೇಶಪುರ ಗ್ರಾಮದ ನಿವಾಸಿ ಉತ್ತಮ್ ಮಹತೋಗೂ ತನಗೂ ಕಳೆದ 4 ವರ್ಷಗಳಿಂದ ಪ್ರೇಮ ಸಂಬಂಧವಿತ್ತು ಎಂದು ಆ ಯುವತಿ ಹೇಳಿದ್ದಾಳೆ. ಆಕೆ ಧನಬಾದ್‌ನ ಎಸ್‌ಎಸ್‌ಎಲ್‌ಎನ್‌ಟಿ ಕಾಲೇಜಿನಲ್ಲಿ ಓದುತ್ತಿದ್ದಾಗ ಉತ್ತಮ್‌ನ ಜೊತೆ ಸಂಬಂಧ ಇಟ್ಟುಕೊಂಡಿದ್ದಳು. ಅವರಿಬ್ಬರ ಕುಟುಂಬದ ಸದಸ್ಯರಿಗೂ ಅವರ ಸಂಬಂಧದ ಬಗ್ಗೆ ತಿಳಿದಿತ್ತು. ಆ ಯುವತಿಯನ್ನು ಮದುವೆಯಾಗುವುದಾಗಿ ಉತ್ತಮ್ ಭರವಸೆ ನೀಡಿದ್ದ. ಇಬ್ಬರೂ ಅನೇಕ ಬಾರಿ ಪರಸ್ಪರರ ಕುಟುಂಬಗಳ ಮನೆಗೆ ಭೇಟಿ ನೀಡಿದ್ದರು.

ಇದನ್ನೂ ಓದಿ: Mahua Moitra: ಸಂಸದೆಯ ಮತ್ತೊಂದು ವಿಡಿಯೊ ವೈರಲ್, ಚಹಾ ಮಾಡುವುದು ಆಯಿತು, ಈಗ ಕೇರಂ ಆಡುತ್ತಿದ್ದಾರೆ

ಇದಾದ ನಂತರ ಅವರ ಮದುವೆಯನ್ನು ಎರಡೂ ಮನೆಯವರು ನಿಶ್ಚಯಿಸಿದರು. ಮದುವೆ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ, ದಿನಾಂಕಕ್ಕೆ 20 ದಿನಗಳ ಮೊದಲು ಉತ್ತಮ್ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಯುವತಿ ಉತ್ತಮ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಳು.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು