ಸಾಂತಾಕ್ಲಾಸ್​ ಇದ್ದಾನೆಯೇ? ಕುಕೀಸ್ ಕ್ಯಾರೆಟ್ ಸಾಕ್ಷ್ಯ ಕೊಟ್ಟು​ ಡಿಎನ್​ಎ ಪರೀಕ್ಷಿಸಲು ಪೊಲೀಸರಿಗೆ ಬಾಲಕಿಯ ಮನವಿ

TV9kannada Web Team

TV9kannada Web Team | Edited By: ಶ್ರೀದೇವಿ ಕಳಸದ | Shridevi Kalasad

Updated on: Jan 23, 2023 | 4:26 PM

DNA : ನೀವು ಕೊಟ್ಟ ಸಾಕ್ಷ್ಯಗಳ ಮೇಲೆ ಸಾಂತಾನ ಹಿಮಸಾರಂಗವು ಕಚ್ಚಿತಿಂದ ಗುರುತುಗಳು ಕಂಡು ಬಂದಿಲ್ಲ. ಡಿಎನ್​ಎ ಪರೀಕ್ಷೆಗಾಗಿ ರೋಡ್​ ಐಲ್ಯಾಂಡ್​ನ ಆರೋಗ್ಯ ಇಲಾಖೆಗೆ ರವಾನಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ಸಾಂತಾಕ್ಲಾಸ್​ ಇದ್ದಾನೆಯೇ? ಕುಕೀಸ್ ಕ್ಯಾರೆಟ್ ಸಾಕ್ಷ್ಯ ಕೊಟ್ಟು​ ಡಿಎನ್​ಎ ಪರೀಕ್ಷಿಸಲು ಪೊಲೀಸರಿಗೆ ಬಾಲಕಿಯ ಮನವಿ
ಬಾಲಕಿಯ ಪತ್ರ ಮತ್ತು ಒದಗಿಸಿದ ಸಾಕ್ಷ್ಯಗಳು

Viral News : ಸಾಂತಾಕ್ಲಾಸ್​ ಎನ್ನುವ ಮಾಂತ್ರಿಕಮನುಷ್ಯನಿಗಾಗಿ ಬಾಲಪ್ರಪಂಚ ಇಡೀ ವರ್ಷ ಕುತೂಹಲಕ್ಕೆ ಕಣ್ಣಂಟಿಸಿಕೊಂಡು ಕಾಯುತ್ತದೆ. ಆ ಪುಟ್ಟ ಕಣ್ಣುಗಳಲ್ಲಿ ಅದೆಷ್ಟು ಬೆರಗು, ಖುಷಿ, ಪ್ರಶ್ನೆಗಳು. ಸೀಕ್ರೇಟ್ ಸಾಂತಾ ಗೇಮ್ ಆಡುತ್ತ ಉಡುಗೊರೆಗಳನ್ನು ಪಡೆಯುತ್ತ ಕನಸಿನ ಲೋಕದಲ್ಲಿ ಕಳೆದು ಹೋಗುವ ಪರಿ ಎಂಥ ಸುಂದರ. ಹೀಗೆ ಕನಸು ಕಾಣುತ್ತಿರುವಾಗಲೇ ಇಲ್ಲೊಬ್ಬ ಬಾಲಕಿಗೆ ದೊಡ್ಡ ಪ್ರಶ್ನೆಯೊಂದು ಕಾಡಿದೆ. ಅದಕ್ಕವಳು ಉತ್ತರ ಕಂಡುಕೊಳ್ಳಲು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.

ಮಕ್ಕಳಲ್ಲಿ ಹುಟ್ಟುವ ಕುತೂಹಲಗಳಿಗೆ ಎಣೆಯುಂಟೆ? ಈಗಂತೂ ಮಾಹಿತಿ ತಂತ್ರಜ್ಞಾನದ ಯುಗ. ಎಲ್ಲವೂ ತುದಿಬೆರಳಲ್ಲಿಯೇ ಉತ್ತರ ಕಂಡುಕೊಳ್ಳಬಹುದು ನಿಜ. ಆದರೆ ಅಲ್ಲಿ ಪೂರ್ಣಪ್ರಮಾಣದಲ್ಲಿ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದಲ್ಲಿ ಮುಂದಿನ ದಾರಿಯಂತೂ ಸಿಗುತ್ತದೆ ಎಂಬುದು ಈಗಿನ ಮಕ್ಕಳಿಗೆ ಬಹಳ ಚೆನ್ನಾಗಿದೆ ತಿಳಿದಿದೆ. ಹಾಗಾಗಿ ಯಾವುದನ್ನು ತಿಳಿದುಕೊಳ್ಳಲೂ ಅವರು ಹಿಂದೆಮುಂದೆ ನೋಡಲಾರರು.

ಇದನ್ನೂ ಓದಿ : ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ

ಸಾಂತಾಕ್ಲಾಸ್​ ಇದ್ದಾನೆಯೋ ಇಲ್ಲವೋ ಎನ್ನುವ ಅನುಮಾನ ಜಗತ್ತಿನ ಮಿಲಿಯನ್​ಗಟ್ಟಲೆ ಮಕ್ಕಳನ್ನು ಕಾಡುವ ಹಾಗೆ ಈ ಬಾಲಕಿಗೂ ಕಾಡಿದೆ. ಕಂಬರ್​ಲ್ಯಾಂಡ್​ನ ರೋಡ್​ ಐಲ್ಯಾಂಡ್​ನಲ್ಲಿ ವಾಸವಾಗಿರುವ ಹತ್ತು ವರ್ಷದ ಸ್ಕಾರ್ಲೆಟ್​ ಡೌಮಾಟೋ, ಸಾಂತಾ ಇದ್ದಾನೆಯೇ? ನನಗಿದು ಗೊತ್ತಾಗಬೇಕು. ಹಾಗಾಗಿ ಉಳಿದಿರುವ ಈ ಕ್ಯಾರೆಟ್​, ಕುಕೀಸ್​ಗಳನ್ನು ಪರೀಕ್ಷಿಸಬೇಕು. ಇವೇ ಸಾಕ್ಷಿ. ಇವುಗಳ ಡಿಎನ್​ಎ ಪರೀಕ್ಷೆ ಮಾಡಿ ಸಾಂತಾನ ಅಸ್ತಿತ್ವ ಇದೆಯೇ ಎಂಬುದನ್ನು ತಿಳಿಸಬೇಕು ಎಂದು ಸ್ಥಳೀಯ ಪೊಲೀಸ್​ ಇಲಾಖೆಗೆ ಆಕೆ ಪತ್ರ ಬರೆದಿದ್ದಾಳೆ. ನಂತರ ಸಾಕ್ಷ್ಯಗಳನ್ನು ರಾಜ್ಯ ಆರೋಗ್ಯ ಇಲಾಖೆಯ ಫೊರೆನ್ಸಿಕ್​ ಸೈನ್ಸಸ್ ವಿಭಾಗಕ್ಕೆ ರವಾನಿಸಲು ಕೋರಿದ್ದಾಳೆ.

ಇದನ್ನೂ ಓದಿ : ಗಣಿತ ಶಿಕ್ಷಕರು ಬೇಕಾಗಿದ್ದಾರೆ; ಸಂಚಲನ ಮೂಡಿಸಿದ ಗುಜರಾತ್​ ಶಾಲೆಯ ವಿಶಿಷ್ಟ ಜಾಹೀರಾತು

ಸ್ಕಾರ್ಲೆಟ್​ಳ ಈ ಮನವಿ ಪತ್ರ ಮತ್ತು ಸಂಬಂಧಿಸಿದ ಸಾಕ್ಷ್ಯಗಳನ್ನು ಪೊಲೀಸ್ ಇಲಾಖೆಯು ಫೇಸ್​ಬುಕ್​ ಮೂಲಕ ಮುದ್ದಿನಿಂದ ಪ್ರತಿಕ್ರಿಯಿಸಿದೆ. ನೀವು ಕೊಟ್ಟ ಸಾಕ್ಷ್ಯಗಳ ಮೇಲೆ ಸಾಂತಾನ ಹಿಮಸಾರಂಗವು ಕಚ್ಚಿತಿಂದ ಯಾವುದೇ ಗುರುತುಗಳು ಕಂಡು ಬಂದಿಲ್ಲ. ಡಿಎನ್​ಎ ಪರೀಕ್ಷೆಗಾಗಿ ರೋಡ್​ ಐಲ್ಯಾಂಡ್​ನ ಆರೋಗ್ಯ ಇಲಾಖೆಗೆ ರವಾನಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮ್ಯಾಥೂ ಬೆನ್ಸನ್​ ಹೇಳಿದ್ದಾರೆ.

ಇದನ್ನೂ ಓದಿ : ಎದುರುಬದುರಾದ ಕಾರ್​ಗಳು ಇಕ್ಕಟ್ಟಾದ ಸೇತುವೆ ಮೇಲೆ ಚಲಿಸಿದ ವಿಡಿಯೋ ವೈರಲ್

ಈ ದೂರನ್ನು 2022ರ ಡಿಸೆಂಬರ್ 25ರಂದು ಸ್ಕಾರ್ಲೆಟ್​ ಪೊಲೀಸರಿಗೆ ಸಲ್ಲಿಸಿದ್ದಳು. ತನಿಖಾ ಪ್ರಕ್ರಿಯೆಯ ಎಲ್ಲಾ ಹಂತಗಳಬಗ್ಗೆಯೂ ಈಕೆಗೆ ನಿಖರವಾದ ಮಾಹಿತಿ ಇದೆ. ಸಾಕ್ಷಿಗಳನ್ನು ಪ್ಯಾಕ್​ ಮಾಡಿ ಸಲ್ಲಿಸುವುದು, ಪತ್ರ ಬರೆಯುವುದು ಇತ್ಯಾದಿಯನ್ನು ಬಹಳ ಅಚ್ಚುಕಟ್ಟಾಗ ನಿರ್ವಹಿಸಿದ್ದಾಳೆ. ಸಾಧ್ಯವಾದ ಮಟ್ಟಿಗೆ ಅವಳ ಪ್ರಶ್ನೆಗಳಿಗೆ ನಾವು ಉತ್ತರಿಸಲು ಪ್ರಯತ್ನಿಸುತ್ತೇವೆ ಎಂದು ಫೇಸ್​ಬುಕ್​ ಪೋಸ್ಟ್​ನಲ್ಲಿ ಪೊಲೀಸರು ತಿಳಿಸಿದ್ದಾಳೆ.

ಸಾಂತಾ ಇದ್ದಾನೆಯೆ? ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada