ಗಣಿತ ಶಿಕ್ಷಕರು ಬೇಕಾಗಿದ್ದಾರೆ; ಸಂಚಲನ ಮೂಡಿಸಿದ ಗುಜರಾತ್ ಶಾಲೆಯ ವಿಶಿಷ್ಟ ಜಾಹೀರಾತು
Gujarat : ಈ ಜಾಹೀರಾತು ಗಣಿತಪ್ರಿಯರೆಲ್ಲರನ್ನೂ ಬಡಿದೆಬ್ಬಿಸಿದೆ. ತುಂಡುಪೇಪರ್ಗಳ ಮೇಲೂ ಸಮೀಕರಣ ಬಿಡಿಸಿ ಮೊಬೈಲ್ ನಂಬರ್ ಕಂಡುಹಿಡಿದಿದ್ಧಾರೆ ಅನೇಕರು. ಶಕುಂತಲಾದೇವಿ, ರಾಮಾನುಜನ್ರನ್ನು ಹುಡುಕುತ್ತಿದೆಯೇ ಈ ಶಾಲೆ?
Viral News : ಉದ್ಯೋಗಾವಕಾಶಕ್ಕೆ ಸಂಬಂಧಿಸಿ ಯಾವುದೇ ಜಾಹೀರಾತು ನೀಡಿದರೂ ಸಂಪರ್ಕ ವಿಳಾಸ, ಮೇಲ್ ಐಡಿ ಅಥವಾ ದೂರವಾಣಿ ಸಂಪರ್ಕ, ಮೊಬೈಲ್ ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಿರುತ್ತಾರೆ. ಆದರೆ ಇದೀಗ ವೈರಲ್ ಆಗುತ್ತಿರುವ ಈ ಜಾಹೀರಾತು ಗಮನಿಸಿ, ಬಹಳ ವಿಶೇಷವಾಗಿದೆ. ಗುಜರಾತಿನ ಶಾಲಯೊಂದು ಗಣಿತ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆದರೆ ಸಂಪರ್ಕಿಸಬೇಕಾದ ನಂಬರ್ ಬದಲಾಗಿ ಸಮೀಕರಣವನ್ನು ನೀಡಲಾಗಿದೆ. ಅಂದರೆ, ಈ ಸಮೀಕರಣವನ್ನು ಬಿಡಿಸಿದರೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್ ದೊರೆಯುತ್ತದೆ. ಈ ಹುದ್ದೆಗೆ ಹೀಗೊಂದು ಸವಾಲಾತ್ಮಕ ಜಾಹೀರಾತನ್ನು ಶಾಲೆಯವರು ನೀಡಿದ್ದು ನೆಟ್ಟಿಗರ ಗಮನ ಸೆಳೆಯುತ್ತಿದೆ.
Saw this ad ? pic.twitter.com/iVAmXjHZ1i
ಇದನ್ನೂ ಓದಿ— Harsh Goenka (@hvgoenka) January 21, 2023
ಉದ್ಯಮಿ ಹರ್ಷ ಗೋಯೆಂಕಾ ಈ ಟ್ವೀಟ್ ಮಾಡಿದ್ದಾರೆ. ಈತನಕ ಈ ಪೋಸ್ಟ್ ಅನ್ನು 1.8 ಮಿಲಿಯನ್ ಜನರು ನೋಡಿದ್ಧಾರೆ. 21,000 ಕ್ಕಿಂತಲೂ ಹೆಚ್ಚು ಇಷ್ಟಪಟ್ಟಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಸಮೀಕರಣ ಬಿಡಿಸಿ ಫೋನ್ ನಂಬರ್ ಪತ್ತೆ ಹಚ್ಚಿದ್ದಾರೆ. ಲೆಕ್ಕದ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ. ಉತ್ತರ 9428163811.
ಇದನ್ನೂ ಓದಿ : ಇಲ್ಲಿ ಅಡಗಿರುವ ಬೆಕ್ಕನ್ನು ಹರ್ಷ ಗೋಯೆಂಕಾರಿಗೆ ಕೊಡಬೇಕಿದೆ, ನಿಮಗಿರುವ ಸಮಯ 10 ಸೆಕೆಂಡುಗಳು
ಕೆಲವರು ಕ್ಯಾಲ್ಕ್ಯುಲೇಟರ್ ಉಪಯೋಗಿಸದೇ ಸಿಕ್ಕ ತುಂಡು ಪೇಪರ್ ಮೇಲೆ ಉತ್ತರ ಕಂಡುಕೊಂಡಿದ್ದಾರೆ. ಹಾಗಾಗಿ ಬಹುಮಾನ ನನಗೆ ಕೊಡಬೇಕು ಎಂದಿದ್ದಾರೆ. ಬಹುಶಃ ಈ ಶಾಲೆಯು ರಾಮಾನುಜನ್ ಮತ್ತು ಶಕುಂತಲಾದೇವಿಯವರನ್ನು ಹುಡುಕುತ್ತಿದೆ ಎಂದು ಯಾರೋ ಒಬ್ಬರು ತಮಾಷೆ ಮಾಡಿದ್ದಾರೆ. ಈ ಉಪಾಯ ಬಹಳ ಆಕರ್ಷಕವಾಗಿದೆ. ಖಂಡಿತ ಬುದ್ಧಿವಂತ ಶಿಕ್ಷಕರೇ ಸಿಗುತ್ತಾರೆ ಈ ಶಾಲೆಗೆ ಎಂದಿದ್ಧಾರೆ ಕೆಲವರು.
ನೀವೇನಂತೀರಿ ಇದನ್ನು ಓದಿ?
ಮತ್ತಷ್ಟೂ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ