ಇಲ್ಲಿ ಅಡಗಿರುವ ಬೆಕ್ಕನ್ನು ಹರ್ಷ ಗೋಯೆಂಕಾರಿಗೆ ಕೊಡಬೇಕಿದೆ, ನಿಮಗಿರುವ ಸಮಯ 10 ಸೆಕೆಂಡುಗಳು
Optical Illusion : ಯಾರದೋ ಮಾಳಿಗೆಯ ಸಂದಿಯಿಂದ ಇಲಿಯೊಂದು ಈ ಬೆಕ್ಕಿಗೆ ಕಂಡಿದೆ. ಇಲಿಯೋ ಹೆಂಚಿನ ಮನೆಗಳ ಮೇಲೆ ಓಡಾಡಿ ಬೆಕ್ಕನ್ನೇ ಆಟವಾಡಿಸತೊಡಗಿದೆ. ಇಲಿ ಎಲ್ಲಿದೆಯೋ ಗೊತ್ತಿಲ್ಲ. ಬೆಕ್ಕಂತೂ ಇಲ್ಲಿದೆ. ಹುಡುಕುವಿರಾ?
Viral Optical Illusion : ವಾರಕ್ಕೊಂದೆರಡಾದರೂ ಭ್ರಮಾತ್ಮಕ ಚಿತ್ರಗಳನ್ನು (Optical Illusion) ನೋಡುತ್ತಿರುತ್ತೀರಿ. ಆದರೂ ಕೊಟ್ಟ ಸವಾಲನ್ನು ಪರಿಹರಿಸುವುದು ಅಷ್ಟು ಸುಲಭ ಎಂದು ಅನ್ನಿಸಿದ್ದೇ ಇಲ್ಲವಲ್ಲ? ಇದೀಗ ವೈರಲ್ ಆಗುತ್ತಿರುವ ಈ ಚಿತ್ರವನ್ನು ಗಮನಿಸಿ. ಹರ್ಷ ಗೋಯೆಂಕಾ ಈ ಪೋಸ್ಟ್ ಟ್ವೀಟ್ ಮಾಡಿದ್ದಾರೆ. ಇಷ್ಟೊಂದು ಹೆಂಚಿನ ಮನೆಗಳ ಮಧ್ಯೆ ಇಲಿಯ ಬೆನ್ನು ಹತ್ತಿದ ಬೆಕ್ಕು ಕಳೆದುಹೋಗಿದೆ. ನಿಮಗೆ ಕೊಡುವ ಸಮಯ 10 ಸೆಕೆಂಡುಗಳು. ಹುಡುಕಿ ಕೊಡಬಲ್ಲಿರಾ ಬೆಕ್ಕನ್ನು?
If you are observant, you will find the cat in 10 seconds… pic.twitter.com/fisVmjJWFl
ಇದನ್ನೂ ಓದಿ— Harsh Goenka (@hvgoenka) January 22, 2023
ಈಗಾಗಲೇ 7,000ಕ್ಕೂ ಹೆಚ್ಚು ಜನ ಈ ಪೋಸ್ಟ್ ನೋಡಿದ್ದಾರೆ. 5,000ಕ್ಕಿಂತಲೂ ಹೆಚ್ಚು ಇಷ್ಟಪಟ್ಟಿದ್ಧಾರೆ. 250ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಅನೇಕರು ಉತ್ತರ ಕೊಡಲು ಪ್ರಯತ್ನಿಸಿದ್ದಾರೆ. ಕೆಲವರು ಹುಡುಕಲು ಜಾಸ್ತಿ ಸಮಯ ತೆಗೆದುಕೊಂಡಿದ್ದಾರೆ. ಅಂತೂ ಅವರಿಗೆ ಬೆಕ್ಕು ಸಿಕ್ಕಿದೆ. ಎಲ್ಲಿದೆ ಬೆಕ್ಕು ಎಂಬುದನ್ನು ಅವರು ಪ್ರತಿಕ್ರಿಯೆ ಮೂಲಕ ತಿಳಿಸಿದ್ದಾರೆ. ನಿಮಗೆ ಸಿಕ್ಕಿತಾ?
ಇದನ್ನೂ ಓದಿ : ನನ್ನ ಅಜ್ಜನಿಗಾದ ಗತಿ ಯಾರಿಗೂ ಆಗಬಾರದು; ರಸ್ತೆಗುಂಡಿಯನ್ನು ಮುಚ್ಚಿದ 13ರ ಬಾಲಕ
ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನಾವಾಲಾ ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.‘ಇಲ್ಲಿರುವ ಬೆಕ್ಕನ್ನು ಕಂಡುಹಿಡಿಯಲು ಎರಡು ಸೆಕೆಂಡುಗಳಿಗಿಂತ ಕಡಿಮೆ ಸಮಯ ಸಾಕು’ ಎಂದಿದ್ದಾರೆ. ಇದು ಬಹಳ ಸುಲಭವಾಗಿದೆ. ಮುಂದಿನ ಸಲ ಸ್ವಲ್ಪ ಕಷ್ಟದ ಸವಾಲು ಕೊಡಿ ಎಂದು ಅನೇಕರು ಬೆಕ್ಕು ಇರುವ ಜಾಗವನ್ನು ಮಾರ್ಕ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ಬೆಕ್ಕು ಚಿತ್ರದ ಬಲಮೂಲೆಯಲ್ಲಿದೆ!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:13 pm, Mon, 23 January 23