Viral Video : ಮಕ್ಕಳಿಗೆ ಪ್ರಾಣಿ ಪಕ್ಷಿಗಳ ಸಾಂಗತ್ಯ ಹೇಗೆ ಮುದ ನೀಡುತ್ತದೆಯೋ ಅವುಗಳಿಗೂ ಮಕ್ಕಳೆಂದರೆ ತುಂಬಾ ಇಷ್ಟ. ಬೇಕಿದ್ದರೆ ಗಮನಿಸಿ, ಮಕ್ಕಳೊಂದಿಗೆ ಸಾಕುಪ್ರಾಣಿಗಳು ಎಷ್ಟು ಹುಷಾರಿನಿಂದ ಸೂಕ್ಷ್ಮವಾಗಿ ವರ್ತಿಸುತ್ತವೆ ಎಂದು. ಈಗಾಗಲೇ ನೋಡಿರುವ ಬೆಕ್ಕು, ನಾಯಿ, ಹಸುಗಳ ವಿಡಿಯೋದಲ್ಲಿ ನೋಡಿರುತ್ತೀರಿ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಪುಟ್ಟಣ್ಣನೊಂದಿಗೆ ಒಂದು ಕುರಿಮರಿ ಇದೆ. ಮುಂದೇನಾಗುತ್ತದೆ ನೋಡಿ.
Kid helps reunite a lost lamb with its mother…??❤️ pic.twitter.com/xOVNGfZgAE
ಇದನ್ನೂ ಓದಿ— ?o̴g̴ (@Yoda4ever) May 14, 2023
ನೋಡು ನಿನ್ನ ಅಮ್ಮ ಅಲ್ಲಿದ್ದಾಳೆ. ನಿನ್ನನ್ನು ಹುಡುಕುತ್ತಿದ್ದಾಳೆ. ಬಾ ಅಲ್ಲಿಗೆ ಹೋಗೋಣ ಎಂದು ಮರಿಯೊಂದಿಗೆ ಅದರ ಅಮ್ಮನ ಬಳಿ ಕರೆದುಕೊಂಡು ಹೋಗುತ್ತಾನೆ ಈ ಪುಟ್ಟಣ್ಣ. ಈ ವಿಡಿಯೋ ನೆಟ್ಟಿಗರ ಹೃದಯವನ್ನು ಸಂಪೂರ್ಣ ಗೆದ್ದಿದೆ. ಪುಟ್ಟ ಕುರಿಗಾಯಿ ಕಾರ್ಯಪ್ರವೃತ್ತನಾಗಿದ್ದಾನೆ ಹುಷಾರ್! ಎಂದು ಹರ್ಷವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪಡೆದ ಮೊದಲ ಮುತ್ತು! ಅಬ್ಬಾ ಈ ಪುಟ್ಟಣ್ಣನಿಗೆ ಇಷ್ಟೊಂದು ಖುಷಿ ಆಯಿತೆ?
ತನ್ನ ತಾಯಿ ದೂರದಲ್ಲಿ ಬರುತ್ತಿರುವುದನ್ನು ನೋಡಿದ ಕುರಿಮರಿ ಖುಷಿಯಿಂದ ಕುಪ್ಪಳಿಸುತ್ತ ತಾಯಿಯೆಡೆ ಓಡುತ್ತದೆ. ಈ ಪುಟ್ಟಣ್ಣನಿಗೆ ತಾಯಿ ಮಗುವನ್ನು ಒಂದು ಮಾಡಿದ ಖುಷಿ ಮತ್ತು ಸಮಾಧಾನ. ಈ ದೃಶ್ಯವನ್ನು ನೋಡಿದ ಅನೇಕರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಕರುಣೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ; ಪಕ್ಷಿಗಳಿಗೆ ಆಹಾರ ಕೊಡುತ್ತಿರುವ ಪುಟ್ಟಣ್ಣನ ಈ ವಿಡಿಯೋ ನೋಡಿ
ಈತನ ಈ ವಿಡಿಯೋ ಅನ್ನು 2.4 ಮಿಲಿಯನ್ ಜನರು ನೋಡಿದ್ದಾರೆ. ತುಂಬಾ ಕರುಣೆಯಳ್ಳವ ಈ ಪುಟ್ಟ ಎಂದು ಅನೇಕರು ಹೇಳಿದ್ದಾರೆ. ನೋಡಿ ಇಲ್ಲಿ ಭಾಷೆಯ ಅಗತ್ಯವೇ ಇಲ್ಲ. ಹಾಗೆಯೇ ಧರ್ಮ, ಜಾತಿ, ಪ್ರಾಂತ್ಯದ್ದೂ. ಅಂತಃಕರಣ, ಪ್ರೀತಿಯೊಂದೇ ವಾಹಕ ಎಂದು ಹಲವರು ಹೇಳಿದ್ದಾರೆ. ಈ ಮಗುವಿಗೆ ಕೌಟುಂಬಿಕ ಪ್ರೀತಿ ಎಂದರೆ ಏನು ಎಂದು ಗೊತ್ತು ಎಂದಿದ್ಧಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ,