ಧ್ವನಿಮಾಯಾ ಕಲಾವಿದೆ ಇಂದುಶ್ರೀಯ ತಾತ ಹೆಂಡತಿಗೆ ಸೀರೆ ತರಲು ಮಧ್ಯಪ್ರದೇಶಕ್ಕೆ ಹೋದಾಗ…

Indushree Raveendra : ನರ್ಮದಾ ನದಿಯ ದಂಡೆಯ ಮೇಲೆ ಕುಳಿತು ಗಂಗೇಚ ಯಮುನೇಚ ಹೇಳಿದ ನಂತರ ಮಹೇಶ್ವರಿ ಸೀರೆಯ ಅಂಗಡಿಗೆ ಕಾಲಿಡುತ್ತಾರೆ ಈ ತಾತಾ. ಶೇ. 50 ಚೌಕಾಸಿ ಮಾಡಿ ಸೀರೆ ಖರೀದಿಸುವ ಆ ಗತ್ತು ನೋಡಿ!

ಧ್ವನಿಮಾಯಾ ಕಲಾವಿದೆ ಇಂದುಶ್ರೀಯ ತಾತ ಹೆಂಡತಿಗೆ ಸೀರೆ ತರಲು ಮಧ್ಯಪ್ರದೇಶಕ್ಕೆ ಹೋದಾಗ...
ಬೆಂಗಳೂರಿನ ಧ್ವನಿಮಾಯಾ ಕಲಾವಿದೆ ಇಂದುಶ್ರೀ ರವೀಂದ್ರ

Updated on: Feb 10, 2023 | 6:30 PM

Viral Video : ಮಾತನಾಡುವ ಗೊಂಬೆಗಳೊಂದಿಗೆ ಜಗತ್ತಿನ ಮೂಲೆಮೂಲೆಗಳಿಗೆ ಸಂಚರಿಸಿ ತನ್ನ ಕಲಾಪ್ರತಿಭೆಯನ್ನು ಮೆರೆದ ಧ್ವನಿ ಮಾಯಾ ಕಲಾವಿದೆ ಇಂದುಶ್ರೀ ರವೀಂದ್ರ ಯಾರಿಗೆ ತಾನೆ ಗೊತ್ತಿಲ್ಲ? ಮಕ್ಕಳಿಂದ ಮುದುಕರವರೆಗೂ ಇವರ ಪ್ರತಿಭೆ ಚಿಪರಿಚಿತ. ವರ್ತಮಾನದ ಸಂಗತಿಗಳನ್ನಿಟ್ಟುಕೊಂಡು ಗೊಂಬೆಗಳೊಂದಿಗೆ ಸಂಭಾಷಣೆ ನಡೆಸುವ ಇವರ ಸೃಜನಾತ್ಮಕತೆ ಅನೇಕರಿಗೆ ಅಚ್ಚರಿ. ಇತ್ತೀಚೆಗೆ ಮೊಮ್ಮಗಳು ಇಂದುಶ್ರೀಯೊಂದಿಗೆ ‘ತಾತ’ ತನ್ನ ಹೆಂಡತಿಗಾಗಿ ಮಹೇಶ್ವರಿ ರೇಷ್ಮೇ ಸೀರೆ ಖರೀದಿಸಲು ಮಧ್ಯಪ್ರದೇಶಕ್ಕೆ ಹೋಗಿದ್ದರು. ಆ ಝಲಕುಗಳನ್ನು ನೋಡೋಣ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮಧ್ಯಪ್ರದೇಶದ ಟ್ರಾಫಿಕ್ ಆಫ್​ ಕ್ಯಾನ್ಸರ್​ಗೆ ಹೋದ ಈ ತಾತ ಅಲ್ಲಿಂದ ನರ್ಮದಾ ನಂದಿಯ ದರ್ಶನಕ್ಕೆ ಹೋಗುತ್ತಾರೆ. ಪ್ರಯಾಣದಿಂದ ಬಳಲಿದ ಇವರಿಗೆ ಶಾಂತವಾಗಿ ಹರಿಯುವ ನರ್ಮದೆಯನ್ನು ನೋಡಿ ಭಕ್ತಿಪರವಶತೆ ಉಂಟಾಗುತ್ತದೆ. ಮೊಮ್ಮಗಳನ್ನು ದಂಡೆಯ ಮೇಲೆ ಕುಳಿತುಕೊಳ್ಳಲು ಹೇಳಿ ಗಂಗೇಚ ಯುಮುನೇಚ… ಎಂದು ಸ್ತುತಿಸಲು ಶುರು ಮಾಡಿಬಿಡುತ್ತಾರೆ.

ನರ್ಮದಾ ನದಿಗೆ ಹೋಗಿ ಮನಸ್ಸು ಶಾಂತವಾಗಿಸಿಕೊಂಡ ಮೇಲೆ ಮಹೇಶ್ವರಕ್ಕೆ ಬರುತ್ತಾರೆ. ತನ್ನ ಹೆಂಡತಿಗಾಗಿ ಸೀರೆ ಖರೀದಿಸಲು ತಾತ ಅಂಗಡಿಯನ್ನು ಹೊಕ್ಕೇಬಿಟ್ಟಿದ್ದಾರೆ. ಮೊಮ್ಮಗಳು ಇಂದುಶ್ರೀಗೆ ನೀನೇ ಸೀರೆ ಸೆಲೆಕ್ಟ್ ಮಾಡು ಎಂದು ಹೇಳುತ್ತಾರೆ. ನಿಮ್ಮ ಹೆಂಡತಿಗೆ ನೀವೇ ಸೆಲೆಕ್ಟ್ ಮಾಡಿ ಎನ್ನುತ್ತಾರೆ ಆಕೆ. ನೀನೂ ಒಂದು ಚೂಡಿದಾರ್ ಸೆಟ್​ ತಗೊ ಎಂದು ಮೊಮ್ಮಗಳಿಗೆ ಹೇಳಿ, ಹೆಂಡತಿಗೊಂದು ಸೀರೆ ಖರೀದಿಸುತ್ತಾರೆ. ಮೂವತ್ತು ಬೇಡ ಐವತ್ತು ಪರ್ಸೆಂಟ್​ ರಿಯಾಯ್ತಿ ಕೊಡಿ ಎಂದು ಅಂಗಡಿಯವನಿಗೆ ಕೇಳುತ್ತಾರೆ ತಾತಾ. ಅಷ್ಟಕ್ಕೇ ಬಿಡುತ್ತಾರಾ? ಸೀರೆ ತಯಾರಾಗುವ ಜಾಗಕ್ಕೇ ಪ್ರಯಾಣ ಬೆಳೆಸಿಬಿಡುತ್ತಾರೆ!

ಮುನ್ನೂರು ವರ್ಷಗಳಷ್ಟು ಹಳೆಯದಾದ ಮಹೇಶ್ವರಿ ವೀವ್ಸ್​ಗೆ ಭೇಟಿ ನೀಡುತ್ತಾರೆ. ಅಲ್ಲಿ ಈ ತಲೆಮಾರಿನ ವ್ಯಾಪಾರಿ ರಾಹತ್ ಅವರನ್ನು ಮಾತನಾಡಿಸುತ್ತಾರೆ. ಕುಲಕಸುಬನ್ನು ಮುಂದುವರೆಸಲು ಸಾಫ್ಟ್​ವೇರ್​ ಎಂಜಿನಿಯರ್ ವೃತ್ತಿ ತೊರೆದ ಈತನೊಂದಿಗೆ ಸ್ವಲ್ಪ ಹೊತ್ತು ಕಳೆದು ಕೊನೆಗೆ ಮಹೇಶ್ವರಿ ಸಿಲ್ಕ್​ ಶಾಲನ್ನು ಉಡುಗೊರೆಯಾಗಿ ಪಡೆಯುತ್ತಾರೆ. ಮುಂದಿನ ಸಲ ಹೆಂಡತಿಯೊಂದಿಗೆ ಖಂಡಿತ ನಿಮ್ಮ ಅಂಗಡಿಗೆ ಸೀರೆ ಖರೀದಿಗೆ ಬರುತ್ತೇನೆಂದು ಮಾತು ಕೊಟ್ಟು ಮೊಮ್ಮಗಳೊಂದಿಗೆ ಅಲ್ಲಿಂದ ಹೊರಡುತ್ತಾರೆ.

ಭಾರೀ ಘಾಟಿ ಅಜ್ಜನಲ್ಲವೆ. ನಿಮಗೂ ಬೇಕಾ ಮಹೇಶ್ವರಿ ಸೀರೆ? ಐವತ್ತು ಪರ್ಸೆಂಟ್​ ಕಡಿಮೆ ಮಾಡಿ ಕೊಡಿಸ್ತಾರೆ ನೋಡಿ ಮತ್ತೆ. ಸೀರೆ ಬೇಕು ಅಂದಾಗೆಲ್ಲ ಈ ಅಜ್ಜನನ್ನೇ ಕರೆದುಕೊಂಡು ಹೋಗಿ. ಅಜ್ಜ ಬೇಕು ಎಂದರೆ ನೀವು ಇಂದುಶ್ರೀ ಅವರ ಇನ್​ಸ್ಟಾಗ್ರಾಂ ಪುಟಕ್ಕೆ ಭೇಟಿಕೊಡಬೇಕು.

ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು? ತಿಳಿಸಿ.

ಮತ್ತಷ್ಟು ವೈರಲ್​​​ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 5:30 pm, Fri, 10 February 23