AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತೀ 447 ಹಿಮಕರಡಿಗಳಲ್ಲಿ ಒಂದು ಮಾತ್ರ ಹೀಗೆ ಪವಿತ್ರ ಬೆಂಕಿಯನ್ನು ಉಗುಳುತ್ತದೆ!?

Polar Bear : ಈ ಫೋಟೋಗ್ರಾಫರ್ ತಾಳ್ಮೆ ಅದ್ಭುತ. ಅದೆಷ್ಟು ಗಂಟೆಗಳ ಕಾಲ ಅವರು ಕಾಯ್ದಿರಬಹುದು ಈ ಕ್ಷಣಕ್ಕಾಗಿ, ಇಂಥ ಮಾಂತ್ರಿಕ ಕ್ಷಣಗಳನ್ನು ನಮಗೆ ತಲುಪಿಸಿದ ಅವರಿಗೆ ಧನ್ಯವಾದ ಎನ್ನುತ್ತಿದ್ದಾರೆ ನೆಟ್ಟಿಗರು.

ಪ್ರತೀ 447 ಹಿಮಕರಡಿಗಳಲ್ಲಿ ಒಂದು ಮಾತ್ರ ಹೀಗೆ ಪವಿತ್ರ ಬೆಂಕಿಯನ್ನು ಉಗುಳುತ್ತದೆ!?
ಬೆಂಕಿಯುಗುಳುತ್ತಿರುವಂತೆ ಕಾಣುತ್ತಿರುವ ಹಿಮಕರಡಿ
TV9 Web
| Edited By: |

Updated on:Feb 10, 2023 | 2:08 PM

Share

Viral News : ಹಿಮಕರಡಿಯು (Polar Bear) ಹೀಗೆ ಬಾಯಿಯಿಂದ ಬೆಂಕಿಯುಗುಳುತ್ತಿರುವ ಈ ಫೋಟೋ ಇದೀಗ ಮತ್ತೆ ವೈರಲ್ ಆಗಿದೆ. ಈ ಫೋಟೋ ಅನ್ನು 2015ರಲ್ಲಿ ತೆಗೆಯಲಾಗಿದೆ. ಹಿಮಕರಡಿಯು ಹೀಗೆ ನಿಂತುಕೊಂಡಿರುವಾಗ ಸೂರ್ಯೋದಯದ ಸಮಯ. ಆ ಹಿಂಬೆಳಕನ್ನು ಹೀಗೆ ಮಾಂತ್ರಿಕವಾಗಿ ಸೆರೆಹಿಡಿದಿದ್ದಾರೆ ಫೋಟೋಗ್ರಾಫರ್​. ಆಗ ಅದು ಹಿಮಮಕರಡಿಯು ಬಾಯಿಯಿಂದ ಬೆಂಕಿ ಉಗಳುವಂತೆ ತೋರಿದೆ. ಈ ಫೋಟೋ ಅನ್ನು ಜೋಶ್ ಆ್ಯನನ್​ ಎಂಬುವವರು ಸೆರೆಹಿಡಿದಿದ್ದಾರೆ. ಇದೀಗ ಈ ಫೋಟೋ ಅನ್ನು ಮ್ಯಾಸಿಮೋ ಎಂಬ ಟ್ವಿಟರ್​ ಖಾತೆದಾರರು ಹಂಚಿಕೊಂಡಿದ್ದಾರೆ.

ಹಿಮದಿಂದ ಆವೃತವಾದ ಪ್ರದೇಶದಲ್ಲಿ ಹಿಮಕರಡಿ ನಿಂತಿದೆ. ತಿಳಿಕಿತ್ತಳೆ ಬಣ್ಣದ ಬೆಂಕಿಯನ್ನು ಇದು ಉಗಳುತ್ತಿದೆಯೆಂಬಂತೆ ಭಾಸವಾಗುತ್ತದೆ. ಈ ಫೋಟೋಗ್ರಾಫರ್ ಅವರ ತಾಳ್ಮೆ ಅದ್ಭುತ. ಅವರು ಅದೆಷ್ಟು ಗಂಟೆಗಳ ಕಾಲ ಕಾಯ್ದಿರಬಹುದು ಇಂಥ ಅಪರೂಪದ ಚಿತ್ರವನ್ನು ಸೆರೆಹಿಡಿಯಲು ಎಂದು ಒಬ್ಬರು ಹೇಳಿದ್ದಾರೆ. ಮಾಂತ್ರಿಕ ಕ್ಷಣಗಳನ್ನು ಹೀಗೆ ನಮಗೆ ತಲುಪಿಸಿದ ಫೋಟೋಗ್ರಾಫರ್​ಗೆ ಧನ್ಯವಾದ ಎಂದು ಅನೇಕರು ಹೇಳಿದ್ದಾರೆ. ಓಹ್​ ಹಿಮಕರಡಿ ರೂಪದ ಡ್ರ್ಯಾಗನ್​ ಇದು? ಎಂದು ಅನೇಕರು ಕೇಳಿದ್ದಾರೆ.

ಇದನ್ನೂ ಓದಿ : 10 ಸೆಕೆಂಡಿನಲ್ಲಿ ಹಿಮಕರಡಿಯನ್ನು ಹುಡುಕಿರಿ

ಇದು ಬ್ಯಾಕ್‌ಲೈಟ್​ನ ಕೈಚಳಕ ಅಲ್ಲ. ನಾನು ಹಿಮಕರಡಿಗಳೊಂದಿಗೆ ವಾಸಿಸುತ್ತಿದ್ದೇನೆ. ಪ್ರತಿ 447 ರಲ್ಲಿ ಒಂದು ಹಿಮಕರಡಿ ಪವಿತ್ರ ಬೆಂಕಿಯನ್ನು ಉಸಿರಾಡುತ್ತದೆ. ಅವುಗಳಿಗೆ ಅವುಗಳದೇ ಆದ ಶಕ್ತಿ ಇದೆ. ಅದನ್ನು ಫೋಟೋಗ್ರಾಫರ್​ ತಂತ್ರವೆಂದು ಹೇಳಿ ಹಿಮಕರಡಿಗಳ ಸಾಮರ್ಥ್ಯವನ್ನು ಕುಂದಿಸಬೇಡಿ. ನಾನಂತೂ ಪವಿತ್ರ ಕರಡಿಯ ದರ್ಶನವಾಗಿದೆ ಎಂದೇ ಹೇಳುತ್ತೇನೆ. ಅರ್ಥವಾಯಿತೇ? ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : ಹಾಡಹಗಲೇ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್

ಸಾಮಾನ್ಯವಾಗಿ ಹಿಮರಕಡಿಗಳು ರಷ್ಯಾ, ನಾರ್ವೆ, ಕೆನಡಾ, ಅಲಾಸ್ಕಾ, ಗ್ರೀನ್​ಲ್ಯಾಂಡ್​ನ ಕಾಡುಗಳ ಹಿಮಪ್ರದೇಶಗಳಲ್ಲಿ ವಾಸವಾಗಿರುತ್ತವೆ. ಈತನಕ ಈ ಫೋಟೋ ಅನ್ನು 1.1 ಮಿಲಿಯನ್​ ಜನರು ನೋಡಿದ್ದಾರೆ. 28,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. 3,000 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.

ಇಲ್ಲಿರುವುದು ಬ್ಯಾಕ್​ಲೈಟ್​ನ ತಂತ್ರವಷ್ಟೇ. ಬೇರೆ ಏನೂ ಇಲ್ಲ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:57 pm, Fri, 10 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ