Pebble Art : ನಿರಾಕಾರದಿಂದ ಆಕಾರ ಸೃಷ್ಟಿಸುವುದೇ ಕಲಾವಿದನ ಕೆಲಸ. ಇಂಥ ವಸ್ತುಗಳೇ ಬೇಕಂತಿಲ್ಲ. ಕಲ್ಲು, ಮಣ್ಣು, ಕಟ್ಟಿಗೆ, ಬಟ್ಟೆಬರೆ ಹೀಗೆ ಯಾವುದಕ್ಕೂ ಆತ ತನ್ನ ಸೃಜನಾತ್ಮಕ ಚಿಕಿತ್ಸೆ ಕೊಡಬಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಬೆಣಚುಕಲ್ಲುಗಳೊಳಗೆ ಮೂಡಿಸಿದ ಈ ಬೆಕ್ಕಿನ ಪೋರ್ಟ್ರೇಟ್ ಅನ್ನು ಈತನಕ 6 ಮಿಲಿಯನ್ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಜಸ್ಟಿನ್ ಬಟೇಮನ್ (Justin Bateman) ಎಂಬ ಕಲಾವಿದರ ಇನ್ಸ್ಟಾ ಪ್ರೊಫೈಲಿಗೆ ಹೋದರೆ Pebbles are my Pixels ಎಂಬ ಒಕ್ಕಣೆ ಅವರ ಪ್ರೊಫೈಲಿನಲ್ಲಿ ಗಮನ ಸೆಳೆಯುತ್ತದೆ. ಬರೀ ಬೆಣಚುಕಲ್ಲುಗಳಿಂದ ಮಾತ್ರ ಸೃಷ್ಟಿಸಿದ ನೂರಾರು ಪ್ರಸಿದ್ಧ ವ್ಯಕ್ತಿಗಳ ಪೋರ್ಟ್ರೇಟ್ಗಳು ನಿಮ್ಮನ್ನು ಸ್ವಾಗತಿಸುತ್ತವೆ.
”ಬೆಕ್ಕುಗಳೊಂದಿಗೆ ಕಳೆದ ಸಮಯ ಎಂದಿಗೂ ವ್ಯರ್ಥವಾಗಲಾರದು ಎಂದು ಸಿಗ್ಮಂಡ್ ಫ್ರಾಯ್ಡ್ ಹೇಳಿದ್ದಾನೆ. ಈಜಿಪ್ಟ್ನಲ್ಲಿ ಇವುಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಥೈಲ್ಯಾಂಡ್ನ ಚಿಯಾಂಗ್ ಮಾಯ್ನ ಪ್ರತೀ ಮನೆಗಳಲ್ಲಿಯೂ ಬೆಕ್ಕುಗಳನ್ನು ಕಾಣಬಹುದಾಗಿದೆ. ಸ್ಥಳೀಯ ಸರೋವರಗಳಲ್ಲಿ ಬೆಕ್ಕುಗಳೊಂದಿಗೆ ಇಲ್ಲಿಯ ಜನರು ವಾಯುವಿಹಾರಕ್ಕೆ ಬರುತ್ತಾರೆ. ಸಾಮಾಜಿಕ ಏಕೀಕರಣವನ್ನು ಅನುಭವಿಸುತ್ತಾರೆ. ನಾನಿಲ್ಲಿ ಅಕಸ್ಮಾತ್ ಆಗಿ ಭೇಟಿ ನೀಡಿದೆ. ಇಲ್ಲಿರುವ ಬೀದಿಬೆಕ್ಕುಗಳು, ಅವುಗಳ ಹೆಜ್ಜೆ ಗುರುತುಗಳು ನಿತ್ಯಹೋರಾಟದ ಕಥೆಯನ್ನು, ಸಾಹಸವನ್ನು ಹೇಳುತ್ತವೆ.”
ಇದನ್ನೂ ಓದಿ : Viral: ಮೃತ ಅಜ್ಜಿಯೇ ಇವರ ಕಾಫಿ ಟೇಬಲ್!? ಇಲ್ಲಿದೆ ಫ್ಯಾಕ್ಟ್ ಚೆಕ್
”ಕಾರ್ಪಾರ್ಕಿಂಗ್ ಸ್ಥಳದಲ್ಲಿ ಸಿಕ್ಕ ಈ ಬೀದಿಬೆಕ್ಕಿನ ಮೈಮೇಲಾದ ಗಾಯಗಳೇ ಅದರ ಸಾಹಸೀ ವರ್ಚಸ್ಸನ್ನು ಬಿಂಬಿಸುತ್ತಿತದ್ದವು. ಆರಂಭದಲ್ಲಿ ಇದು ಹಿಂಜರಿಕೆ ತೋರಿತು. ನಂತರ ವಿಶ್ವಾಸವನ್ನು ಗಳಿಸಿದೆ. ಹೀಗಿಲ್ಲಿ ಬೆಣಚುಕಲ್ಲುಗಳಲ್ಲಿ ಇದನ್ನು ಹಿಡಿದಿಟ್ಟೆ. ನಿಜಕ್ಕೂ ಬೆಕ್ಕುಗಳು ಅಸಾಧಾರಣ ವ್ಯಕ್ತಿತ್ವ ಉಳ್ಳಂಥವು. ಸ್ವತಂತ್ರ ಮತ್ತು ಅತೀಂದ್ರೀಯ ಶಕ್ತಿಯನ್ನು ಹೊಂದಿದಂಥವು. ಅವುಗಳು ಆರೋಗ್ಯದಿಂದ ಕೂಡಿರಬೇಕು. ಸ್ಥಳೀಯ ಸಂಸ್ಥೆಗಳಿಗೆ ನೀವು ಕೈಲಾದ ಕಾಣಿಕೆಯನ್ನು ನೀಡಿ” ಎಂದಿದ್ದಾರೆ ಜಸ್ಟಿನ್ ಬಟೇಮನ್.
ಮೇಲಿನ ಚಿತ್ರದಲ್ಲಿರುವವರು ಶ್ರೀ ರಮಣ ಮಹರ್ಷಿಗಳು. ಜಸ್ಟಿನ್ ಅವರ ಇನ್ಸ್ಟಾ ಗೋಡೆಯ ಮೇಲೆ ಮರ್ಲಿನ್ ಮನ್ರೋ, ಶೇಕ್ಸ್ಪಿಯರ್, ನೆಪ್ಚೂನ್ ಮತ್ತು ಅನೇಕ ಪ್ರಭಾವಿ ವ್ಯಕ್ತಿಗಳ ಪೋರ್ಟ್ರೇಟ್ ಕಾಣಬಹುದಾಗಿದೆ. ಈ ಕಲಾವಿದರು ಆಯ್ಕೆ ಮಾಡಿಕೊಂಡ ವ್ಯಕ್ತಿಗಳ ಎಲ್ಲಾ ಪೋರ್ಟ್ರೇಟ್ ಗಮನಿಸಿ. ಅತ್ಯಂತ ವಿಶೇಷವಾಗಿದೆ.
ಕಲೆ ಎಂದರೆ ಚಿತ್ತೈಸು. ಹೀಗೆ ಚಿತ್ತೈಸಿದರೆ ಏನೂ ಸೃಷ್ಟಿಯಾಗಬಲ್ಲುದು! ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:42 pm, Fri, 23 June 23