AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ಮರಿಯನ್ನು ಹೈನಾದಿಂದ ರಕ್ಷಿಸಿದ ಜಿರಾಫೆಯ ವಿಡಿಯೋ ವೈರಲ್

Giraffe : ಇನ್ನೇನು ಹೈನಾ ಬಾಯಿಗೆ ಜಿರಾಫೆ ಮರಿ ಈಡಾಗುವುದೋ ಎಂದು ಭಯವಾಗಿತ್ತು. ಸದ್ಯ ತಾಯಿ ಅದನ್ನು ಬದುಕಿಸಿತು. ಈ ಅಮ್ಮ ಮಗು ಸುಖವಾಗಿ ಬಾಳಲಿ ಎನ್ನುತ್ತಿದ್ದಾರೆ ನೆಟ್ಟಿಗರು.

Viral Video: ತನ್ನ ಮರಿಯನ್ನು ಹೈನಾದಿಂದ ರಕ್ಷಿಸಿದ ಜಿರಾಫೆಯ ವಿಡಿಯೋ ವೈರಲ್
ಹೈನಾದಾಳಿಯಿಂದ ತನ್ನ ಮರಿಯನ್ನು ರಕ್ಷಿಸುತ್ತಿರುವ ಜಿರಾಫೆ
ಶ್ರೀದೇವಿ ಕಳಸದ
|

Updated on: Jun 23, 2023 | 10:20 AM

Share

Animals: ತಾಯಿಯಾದವಳು (Mother) ತನ್ನ ಮಗುವಿನ ರಕ್ಷಣೆಗಾಗಿ, ಏಳ್ಗೆಗಾಗಿ ತನ್ನ ಪ್ರಾಣದ ಹಂಗು ತೊರೆದು ಹೋರಾಡಬಲ್ಲಳು ಎನ್ನುವುದನ್ನು ನೀವೆಲ್ಲ ಕೇಳುತ್ತಲೇ ಬಂದಿದ್ದೀರಿ. ಅನೇಕ ನಿದರ್ಶನಗಳು ನಿಮ್ಮ ಎದುರಿಗೇ ಇವೆ ಅಲ್ಲದೆ ಅಂಥ ತಾಯಂದಿರ ಮಕ್ಕಳು ನೀವಾಗಿರಬಹುದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಜಿರಾಫೆ (Giraffe) ತನ್ನ ಮರಿಯೊಂದಿಗೆ ವಿಹರಿಸುತ್ತಿದೆ. ಅಲ್ಲಿಗೆ ಬಂದ ಹೈನಾ (Hyena) ಮರಿಯ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದೆ. ತಾಯಿಜಿರಾಫೆ ಆ ಹೈನಾದಿಂದ ತನ್ನ ಮರಿಯನ್ನು ಕಾಪಾಡಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು, ತಾಯಿಗೆ ತನ್ನ ಮಗುವನ್ನು ಒಳಗೂ ಹೊರಗೂ ಹೇಗೆ ರಕ್ಷಿಸಬೇಕು ಎನ್ನುವುದು ನಿಸರ್ಗದತ್ತವಾಗಿ ಬಂದಿದೆ ಎನ್ನುತ್ತಿದ್ದಾರೆ. ಜಿರಾಫೆಗಳು ಬೆದರಿದಾಗ ಇವು ಹೈನಾದ ಪಾಲಾಗುತ್ತವೆ ಎಂದು ಮೊದಲಿಗೆ ಅಂದುಕೊಂಡೆ. ಆದರೆ ತಾಯಿಜಿರಾಫೆ ಅದನ್ನು ಓಡಿಸಿತು ಎಂದಿದ್ದಾರೆ ಒಬ್ಬರು. ತಾಯಿ ಎಂದಿಗೂ ಮೈಯೆಲ್ಲ ಕಣ್ಣಾಗಿ ಇರುತ್ತಾಳೆ ಎನ್ನುವುದು ಇದಕ್ಕೇ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral Video: ಮೊಬೈಲ್​ಭೂತ; ನಿದ್ದೆಯಲ್ಲೂ ಅಳುತ್ತ ​ಸ್ಕ್ರೀನ್ ಮೇಲೆ ಬೆರಳಾಡಿಸುತ್ತಿರುವ ಚೀನಾದ ಮಗು

ಈತನಕ ಈ ವಿಡಿಯೋ ಅನ್ನು 4,30,000ಕ್ಕೂ ಹೆಚ್ಚು ಜನರು ನೋಡಿದ್ಧಾರೆ. ಸಾವಿರಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಅಮ್ಮನ ಕಾಲುಗಳ ನಡುವೆ ಎಷ್ಟು ಚೆಂದ ನಿಂತಿದೆಯಲ್ಲ ಆ ಮರಿಜಿರಾಫೆ. ನಾನದನ್ನು ಬಹಳ ಪ್ರೀತಿಸುತ್ತಿದ್ದೇಬೆ ಎಂದಿದ್ದಾರೆ ಒಬ್ಬರು. ದುಷ್ಟ ಹೈನಾ ಇದು ಸರಿಯಲ್ಲ ಎಂದು ಎಚ್ಚರಿಸಿದ್ಧಾರೆ ಇನ್ನೊಬ್ಬರು. ಆ ಮಗು ನಾನೇ, ಆ ಜಿರಾಫೆ ನನ್ನಮ್ಮ ಎಂದು ಮತ್ತೊಬ್ಬರು ಹೇಳಿದ್ದಾರೆ. ಜಿರಾಫೆಯಮ್ಮನ ಸಾಹಸ ಪ್ರಶಂಸನಾರ್ಹ ಎಂದು ಮಗದೊಬ್ಬರು ಹೇಳಿದ್ದಾರೆ.

ತಾಯಿ ಆಗುವುದೆಂದರೆ ಎಂದರೆ ಸುಮ್ಮನೇ ಅಲ್ಲವಲ್ಲ? ವೀಕೆಂಡ್​ ಮೂಡ್​ನಲ್ಲಿರುವ ನಿಮಗೀಗ ನಿಮ್ಮ ನಿಮ್ಮ ತಾಯಂದಿರು ನೆನಪಾಗುತ್ತಿದ್ದಾರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ