ಬೆಂಗಳೂರಿನ ನಾಗಸಂದ್ರ ಪ್ರದೇಶದಲ್ಲಿ ಸ್ವೀಡಿಷ್ ಗೃಹೋಪಯೋಗಿ ಬ್ರಾಂಡ್ ಐಕೆಇಎ (IKEA) ತನ್ನ ಮೊದಲ ಮಳಿಗೆಯನ್ನು ತೆರೆದಾಗಿನಿಂದ ಭಾರಿ ಬೇಡಿಕೆ ವ್ಯಕ್ತವಾಗಿ ಜನಸಾಗರವೇ ಹರಿದುಬಂದಿತ್ತು. ಇದೀಗ ಇಂತಹದ್ದೇ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ. ಮಧ್ಯರಾತ್ರಿಯ ಮಾರಾಟದ ಲಾಭ ಪಡೆಯಲು ತಿರುವನಂತಪುರದಲ್ಲಿರುವ ಲುಲು ಮಾಲ್(Lulu Mall)ಗೆ ಜನಸಾಗರವೇ ಹರಿದುಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಜಂಗುಳಿ ಮತ್ತು ನೂಕಾಟ ತಳ್ಳಾಟದ ವಿಡಿಯೋ ವೈರಲ್ (Video Viral) ಆಗುತ್ತಿದೆ. ವೈರಲ್ ವಿಡಿಯೋ (Viral Video) ನೋಡಿದ ನೆಟ್ಟಿಗರು ಹಾಸ್ಯಮಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral: 72ನೇ ವಯಸ್ಸಿನಲ್ಲಿ ಅಮೆರಿಕವನ್ನು ದಾಟಿ ವಿಶ್ವ ಗಿನ್ನಿಸ್ ದಾಖಲೆ ಮುರಿದ ವೃದ್ಧೆ
ವೈರಲ್ ವಿಡಿಯೋದಲ್ಲಿ ಕಾಣುವಂತೆ, ಲುಲು ಮಾಲ್‌ನ ಎಸ್ಕಲೇಟರ್ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಭಾರಿ ಜನಸಂದಣಿ ಇರುವುದನ್ನು ಕಾಣಬಹುದು. ಖರೀದಿಯ ನಡುವೆ ಜನಜಂಗುಳಿ ಹೆಚ್ಚಾಗಿ ಖರೀದಿಗಾಗಿ ಗ್ರಾಹಕರು ಮುಗಿಬಿದಿದ್ದಾರೆ. ಪರಿಣಾಮವಾಗಿ ನೂಕಾಟ, ತಳ್ಳಾಟ ಕೂಡ ನಡೆದಿದೆ. ಪರಿಸ್ಥಿತಿ ಹತೋಟಿಗೆ ತರಲು ಮಾಲ್‌ನ ಸೆಕ್ಯೂರಿಟಿ ಗಾರ್ಡ್ಗಳು ಹರಸಾಹಸ ಪಟ್ಟಿದ್ದಾರೆ. ಈ ವೀಡಿಯೋದಲ್ಲಿ ಇಷ್ಟೊಂದು ಜನಜಂಗುಳಿಯನ್ನು ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದು, ನೀವು ಕೂಡ ವೈರಲ್ ವಿಡಿಯೋವನ್ನು ವೀಕ್ಷಿಸಿ.
Kerala: Stampede at Lulu Mall, Trivandrum, Midnight sale.
pic.twitter.com/vYLTBBt5jx— Facts (@BefittingFacts) July 9, 2022
ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, ಈ ವಿಡಿಯೋ ನನಗೆ ಚೆನ್ನೈನ ಸರವಣ ಸ್ಟೋರ್ಸ್ ಅನ್ನು ನೆನಪಿಸಿತು” ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ, ಇದು ಕೇರಳದ ಕಪ್ಪು ಶುಕ್ರವಾರ ದಿನ ಎಂದು ಹೇಳಿಕೊಂಡಿದ್ದಾರೆ. ಒಂದಷ್ಟು ನೆಟ್ಟಿಗರು ಗ್ರಾಹಕರ ಸಂಖ್ಯೆ ನೋಡಿ ಮಾಲ್‌ನಲ್ಲಿ ಏನು ಮಾರಾಟವಾಗುತ್ತಿದೆ ಎಂದು ತಿಳಿಯಲು ಕುತೂಹಲಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Brain Teaser Puzzle: ಈ ಹುಡುಗಿ ಮಹಡಿಗಳ ಮೇಲಕ್ಕೆ ಹೋಗಲು ಯಾವ ಏಣಿಗಳು ಬೇಕಾಗುತ್ತದೆ ಎಂದು ಹೇಳಬಲ್ಲಿರಾ?
Thread on some videos from #Lulumall, cochin !!
Looked like the entire Kochi was in the mall. Reminded me of Saravana stores, chennaipic.twitter.com/AscmYHFljM
— Vineeth K (@DealsDhamaka) July 8, 2022
ಟ್ವಿಟರ್ ಬಳಕೆದಾರರೊಬ್ಬರು, ”ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಗಳ ಭಾಗವಾಗಿ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರು. ಜನರು ತೆಂಗಿನ ಎಣ್ಣೆಯನ್ನು 10 ಪೈಸೆ ಕಡಿಮೆಗೆ ಖರೀದಿಸಲು ಮುನ್ನುಗ್ಗುತ್ತಿದ್ದಾರೆ” ಎಂದು ಹೇಳಿಕೊಂಡಿದ್ದಾರೆ. ”ಮಧ್ಯರಾತ್ರಿ ಸೇಲ್ ಆಫರ್ ಹಿಂದೆ ಓಡುತ್ತಿರುವ ಪ್ರಬುದ್ಧ ಸಮಾಜ. ತಿರುವನಂತಪುರಂ ಲುಲು ಮಾಲ್‌ನಲ್ಲಿ ಮಧ್ಯರಾತ್ರಿ ಜನಜಂಗುಳಿ!!” ಎಂದು ಮಗದೊಬ್ಬರು ಹೇಳಿಕೊಂಡಿದ್ದಾರೆ.
Enlightened society running behind midnight sale offer. Midnight crowd at Thiruvananthapuram Lulu Mall!!
This shows the level of media influence in Kerala. #No1Kerala #Corona pic.twitter.com/Bkz0l8m3Fo— Binu Padmam (@BinuPadmam) July 8, 2022
”ಲುಲು ಮಾಲ್‌ನಲ್ಲಿರುವ ಜನಸಂದಣಿಯು ಕೇರಳದಲ್ಲಿ ರಾತ್ರಿಜೀವನದ ತಪ್ಪಿದ ಅವಕಾಶವನ್ನು ತೋರಿಸುತ್ತದೆ. ಆದಾಯದ ಹೊಸ ಮಾರ್ಗಗಳನ್ನು ಹುಡುಕುವ ಬಗ್ಗೆ ಸುಳಿವು ಇಲ್ಲದ ರಾಜ್ಯಕ್ಕೆ ಇದು ಕಣ್ಣು ತೆರೆಯುವಂತಿರಬೇಕು” ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Optical Illusion: ಅಂಕುಡೊಂಕಾದ ರೇಖೆಗಳ ನಡುವೆ ಅಡಗಿರುವ ಮುದ್ದಾದ ಪ್ರಾಣಿಯನ್ನು ಪತ್ತೆಹಚ್ಚಿ, ಬುದ್ಧಿವಂತಿಕೆಗೊಂದು ಸವಾಲು
Published On - 3:59 pm, Sat, 9 July 22