ಹಲವು ಬಾರಿ ಕೆಲಸ ಮಾಡುವ ಸ್ಥಳದಲ್ಲಿ ಗೌರವ ಸಿಗದಿದ್ದರೂ, ನೋವಿದ್ದರೂ, ಕೆಲಸದಲ್ಲಿ ಅತೃಪ್ತಿ ಇದ್ದರೂ, ನಿಮ್ಮ ಬಾಸ್ ಜತೆ ನಿಮ್ಮ ಬಾಂಧವ್ಯ ಅಷ್ಟು ಸರಿ ಇಲ್ಲದಿದ್ದರೂ ಮುಂದಿನ ಭವಿಷ್ಯ ಅಥವಾ ಹಣದ ಕಾರಣದಿಂದಾಗಿ ಅಲ್ಲೇ ಉಳಿದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಯುವಕ ತನಗಿಷ್ಟವಿಲ್ಲದ ಕೆಲಸವನ್ನು ಬಿಟ್ಟ ಬಳಿಕ ಡೋಲು ಬಡಿಯುತ್ತಾ ಬಾಸ್ ಎದುರು ನೃತ್ಯ ಮಾಡಿ ತನಗೆ ತನೇ ಬೀಳ್ಕೊಡುಗೆ ಮಾಡಿಕೊಂಡು ಹೊರಟ ಘಟನೆ ಪುಣೆಯಲ್ಲಿ ನಡೆದಿದೆ.
ಅನಿಕೇತ್ ಎಂಬಾತ ಮೂರು ವರ್ಷಗಳಿಂದ ಈ ಕಂಪನಿಯಲ್ಲಿ ಸೇಲ್ಸ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ. ವೇತನದಲ್ಲಿ ಹೆಚ್ಚಳವಿಲ್ಲದೆ ನಿರಾಸೆಗೊಂಡಿದ್ದ. ಕೊನೆಗೆ ಕೆಲಸ ಬಿಟ್ಟಿದ್ದ, ಕೆಲಸದ ಕೊನೆಯ ದಿನ ಸ್ನೇಹತರೊಂದಿಗೆ ಡೋಲು ಬಾರಿಸುತ್ತಾ, ಬಾಸ್ ಎದುರು ನೃತ್ಯ ಮಾಡಿದ್ದಾರೆ., ಕೊನೆಗೆ ಬಾಸ್ ಅವರನ್ನು ಹೊರಹೋಗುವಂತೆ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ಮೂರು ವರ್ಷಗಳಲ್ಲಿ ಬಾಸ್ ನಮ್ಮನ್ನು ಗೌರವಪೂರ್ವಕವಾಗಿ ನಡೆಸಿಕೊಂಡಿಲ್ಲ ಎಂದು ಅನಿಕೇತ್ ಹೇಳಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅನಿಕೇತ್ನ ಸ್ನೇಹಿತರೊಬ್ಬರು ಹಂಚಿಕೊಂಡಿದ್ದು, ಬಹಳಷ್ಟು ಮಂದಿ ತಮ್ಮ ಕಂಪನಿಯಲ್ಲಿ ಅನಿಕೇತ್ ಅನುಭವಿಸಿದಂತಹ ಹಲವು ಸಮಸ್ಯೆಗಳನ್ನು ಅನುಭವಿಸಿರುತ್ತಾರೆ.
ಮತ್ತಷ್ಟು ಓದಿ: ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ!
ಆದರೆ ಆ ಸಮಸ್ಯೆಗಳನ್ನು ದೂರ ಮಾಡಿ, ಖುಷಿಯಾಗಿರುವುದು ಹೇಗೆ ಎಂಬುದನ್ನು ಅನಿಕೇತ್ ತೋರಿಸಿಕೊಟ್ಟಿದ್ದಾರೆ ಎಂದು ಅವರು ಬರೆದಿದ್ದಾರೆ. ಇದಕ್ಕೆ ಇನ್ಸ್ಟಾಗ್ರಾಂ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದು, ಅವರ ನೃತ್ಯ ನನಗೆ ತೃಪ್ತಿ ತಂದಿದೆ. ಜೀವನದಲ್ಲಿ ನಕಾರಾತ್ಮಕತೆಗಿಂತ ಧನಾತ್ಮಕತೆಗೆ ಹೆಚ್ಚು ಪ್ರೋತ್ಸಾಹಿಸಬೇಕು ಎಂದಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Fri, 26 April 24