Viral Video: ಕಾರಿನಿಂದ ಹೊರಕ್ಕೆ ಬಿದ್ದ ಮಗು; ಕಾರಿನಲ್ಲಿದ್ದ ಪುಣ್ಯಾತ್ಮರು ಮಾಡಿದ್ದೇನು ನೀವೇ ನೋಡಿ

ವಾಹನಗಳಲ್ಲಿ ಓಡಾಡುವವರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿ ಏಕೆಂದರೆ, ಸಿಗ್ನಲ್ ತೆರವಾಗುತ್ತಿದ್ದಂತೆ ಕಾರಿನ ಕಿಟಕಿಯಿಂದ ಮಗುವೊಂದು ಹೊರಗೆ ಬಿದ್ದಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ಕಾರಿನಿಂದ ಹೊರಕ್ಕೆ ಬಿದ್ದ ಮಗು; ಕಾರಿನಲ್ಲಿದ್ದ ಪುಣ್ಯಾತ್ಮರು ಮಾಡಿದ್ದೇನು ನೀವೇ ನೋಡಿ
ಕಾರಿನಿಂದ ಬಿದ್ದ ಮಗು
Edited By:

Updated on: Aug 04, 2022 | 5:56 PM

ವಾಹನದಲ್ಲಿ ಸಂಚಾರಿಸುವಾಗ ಪ್ರತಿಯೊಬ್ಬರು ಎಚ್ಚರವಾಗಿಯೇ ಇರಬೇಕು. ಅದರಲ್ಲೂ ಸಣ್ಣ ಮಕ್ಕಳನ್ನು ಕರೆದುಕೊಂಡು ಹೋಗುವವರು. ಏಕೆಂದರೆ ನಿಮಗೆ ಅರಿವಿಲ್ಲದಂತೆ ಮಕ್ಕಳು ಅಪಾಯಕ್ಕೆ ಸಿಲುಕಬಹುದು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿಗ್ನಲ್ ಬಳಿ ನಿಂತಿದ್ದ ಕಾರಿನಿಂದ ಸಣ್ಣ ಮಗುವೊಂದು ಹೊರಗೆ ಬಿದ್ದಿದೆ. ಕಾರಿನಲ್ಲಿದ್ದ ಪುಣ್ಯಾತ್ಮರಿಗೆ ಇದು ಗೊತ್ತೇ ಆಗಿಲ್ಲ ಮಾರಾಯ್ರೆ, ಸಿಗ್ನಲ್ ತೆರೆಯಿತು ಎಂದು ಕಾರು ಸ್ಟಾರ್ಟ್ ಮಾಡಿ ಸೀದಾ ಹೋಗಿದ್ದಾರೆ.

ಈ ವಿಡಿಯೋವನ್ನು ಚೀನಾ ಕ್ಸಿನ್ಹುವಾ ನ್ಯೂಸ್ ಎಂಬ ಸುದ್ದಿ ಸಂಸ್ಥೆಯ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಚೀನಾದ ನಿಂಗ್ಬೋದಲ್ಲಿ ಕಾರಿನ ಕಿಟಕಿಯಿಂದ ಕೆಳಗೆ ಬಿದ್ದ ಮಗುವನ್ನು ಇತರೆ ವಾಹನಗಳ ಚಾಲಕರು ರಕ್ಷಿಸಿದ್ದಾರೆ” ಎಂದು ಶೀರ್ಷಿಕೆ ಬರೆಯಲಾಗಿದೆ. ಎರಡು ದಿನಗಳ ಹಿಂದೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಸಿಗ್ನಲ್ ಬಳಿ ಹತ್ತಾರು ಕಾರುಗಳು ಬಂದು ನಿಲ್ಲುತ್ತವೆ. ಈ ಪೈಕಿ ಒಂದು ಕಾರಿನಿಂದ ಮಗುವೊಂದು ಕಿಟಕಿಯಿಂದ ಹೊರಗೆ ತಲೆಹಾಕುತ್ತದೆ. ಸಿಗ್ನಲ್ ತೆರೆವಾಗುತ್ತಿದ್ದಂತೆ ಕಾರು ಮುಂದಕ್ಕೆ ಸಾಗಿದ್ದು, ಅರ್ಧ ಹೊರಕ್ಕೆ ಇದ್ದ ಮಗು ರಸ್ತೆಗೆ ಬಿದ್ದಿದೆ. ಈ ವಿಚಾರ ಕಾರಿನಲ್ಲಿದ್ದವರಿಗೆ ತಿಳಿಯದೆ ಹೊರಟುಹೋಗಿದ್ದಾರೆ. ಆದರೆ ಕಾರಿನ ಹಿಂಬದಿಯಲ್ಲಿದ್ದ ಕೆಲವು ಕಾರಿನ ಚಾಲಕರು ಕಾರುಗಳನ್ನು ನಿಲ್ಲಿಸಿ ಮಗವನ್ನು ರಕ್ಷಣೆ ಮಾಡಿದ್ದಾರೆ.

Published On - 5:56 pm, Thu, 4 August 22