Viral Video : ರಾತ್ರಿ ನಿಮ್ಮ ಕನಸಲ್ಲಿ ಬರುವ ಹಾಗಿದೆಯಾ ಈ ‘ಸೀ ಕುಕುಂಬರ್?’
Trending : ಈ ವಿಡಿಯೋ ನೋಡಿದ ಒಬ್ಬರು, ‘ಸಿನೆಮಾ ನೋಡಲು ಹೋದಾಗ ನನ್ನ ಮತ್ತು ನನ್ನ ಹೆಂಡತಿಯ ಪಾಪ್ಕಾರ್ನ್ ಟಬ್ನಲ್ಲಿ ನಮ್ಮ ಮಕ್ಕಳು ಹೀಗೆಯೇ ಕೈಹಾಕಿ ತಿನ್ನುತ್ತವೆ’ ಎಂದಿದ್ದು ಯಾಕೆ?
Trending : ಸುಮ್ಮನೇ ಯೋಚಿಸಿ. ನಿಮಗೆ ಎರಡು ಕೈಗಳ ಬದಲಾಗಿ ಹತ್ತು ಕೈಗಳಿದ್ದು, ಒಂದೇ ಬಾಯಿ ಇದ್ದಲ್ಲಿ ನೀವು ಹೇಗೆ ಊಟ ಮಾಡುತ್ತಿದ್ದಿರಿ? ಹೀಗೆ ಈ ಸಮುದ್ರದ ಆಳದಲ್ಲಿರುವ ಸೀ ಕುಕುಂಬರ್ ಎಂಬ ಜೀವಿಯಂತೆ. ಯಾವುದೋ ಹೂವೊಂದು ಅರಳುತ್ತಿದೆಯೇನೋ ಎಂಬಂಥ ಭಾವ ನಿಮ್ಮ ಮನಸ್ಸಿನಲ್ಲಿ ಮೊದಲಿಗೆ ಮೂಡುತ್ತದೆ. ನೋಡನೋಡುತ್ತಿದ್ದಂತೆಯೇ ಪಕಳೆಗಳು ಬಿಚ್ಚಿಕೊಂಡು ಹೊರಾವರಣದಲ್ಲಿ ಚಾಚಿಕೊಳ್ಳುತ್ತವೆ. ಆದರೆ ಅದು ಹೂವೂ ಅಲ್ಲ, ಚಾಚಿಕೊಂಡವು ಪಕಳೆಗಳೂ ಅಲ್ಲ. ಈ ಜೀವಿಯ ಪಾದಗಳು ಅವು. ಪಾದಗಳಿಂದಲೇ ತನ್ನ ಬಾಯಿಗೆ ಆಹಾರವನ್ನು ಇದು ಇಟ್ಟುಕೊಳ್ಳುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಗೂಢವಾದ ಸಾಗರದಲ್ಲಿ ಇನ್ನೂ ಏನೆಲ್ಲ ಚಿತ್ರವಿಚಿತ್ರಗಳು ಅಡಗಿವೆಯೋ. ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೂ ಪೂರ್ತಿಯಾಗಿ ಅದರ ಆಳವನ್ನು ಈತನಕ ಕಂಡುಹಿಡಿಯಲಾಗುತ್ತಿಲ್ಲ. ಅಷ್ಟೊಂದು ಆಳ, ಅಷ್ಟೊಂದು ವಿಶಾಲ, ಅಷ್ಟೊಂದು ನಿಗೂಢ ಮತ್ತು ವಿಚಿತ್ರ ಈ ಕಡಲು. ಅಂದಮೇಲೆ ಇಂಥ ವಿಲಕ್ಷಣ ಜೀವಿಗಳು ನಿರಂತರವಾಗಿ ಪತ್ತೆಯಾಗುತ್ತಲೇ ಇರುತ್ತವೆ. ತಂತ್ರಜ್ಞಾನದ ಈ ಯುಗದಲ್ಲಿ ಕ್ಷಣಗಳಲ್ಲಿ ಇಂಥವೆಲ್ಲ ಇಡೀ ಜಗತ್ತನ್ನು ತಲುಪಬಲ್ಲಲು ಸಾಧ್ಯ. ಹಾಗೆಯೇ ಈಗ ಸೀ ಕುಕುಂಬರ್ ವಿಡಿಯೋ ಹರಿದಾಡುತ್ತಿದೆ. ಸಾಕಷ್ಟು ಜನ ಅಬ್ಬಾ ಭಯಾನಕ! ಎಂದಿದ್ದಾರೆ.
Sea cucumber eating, using its feet looking like tentacles surrounding its mouth. pic.twitter.com/3jMyVGGyBt
— Susanta Nanda IFS (@susantananda3) August 2, 2022
ಐಎಫ್ ಅಧಿಕಾರಿ ಸುಸಾಂತಾ ನಂದಾ ಈ ವಿಡಿಯೋ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈತನಕ ಈ ವಿಡಿಯೋ 16,400 ವೀಕ್ಷಣೆಗಳಿಗೆ ಒಳಪಟ್ಟಿದೆ. 74 ಜನರು ಇದನ್ನು ಹಂಚಿಕೊಂಡಿದ್ದಾರೆ. ಒಬ್ಬರು, ‘ಸ್ಫೂರ್ತಿಗಾಗಿ ಬಾಹ್ಯಾಕಾಶಕ್ಕೇ ಹಾರಬೇಕಿಲ್ಲ. ಸಮುದ್ರಗಳ ಆಳ, ಕಂದಕಗಳಲ್ಲೂ ಸಾಕಷ್ಟು ವಿಚಿತ್ರ ಸಂಗತಿಗಳಿವೆ’ ಎಂದಿದ್ದಾರೆ. ಇನ್ನೊಬ್ಬರು ‘ನಾನೂ ಹೀಗೆಯೇ ತಿನ್ನುತ್ತೇನೆ’ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ‘ಸಿನೆಮಾ ನೋಡಲು ಹೋದಾಗ ನನ್ನ ಮತ್ತು ನನ್ನ ಹೆಂಡತಿಯ ಪಾಪ್ಕಾರ್ನ್ ಟಬ್ನಲ್ಲಿ ನಮ್ಮ ಮಕ್ಕಳು ಹೀಗೆಯೇ ಕೈಹಾಕಿ ತಿನ್ನುತ್ತವೆ’ ಎಂದಿದ್ಧಾರೆ. ಇನ್ನ್ಯಾರೋ ‘ಎಂಥ ಭಯಂಕರ ಸಂಗತಿ’ ಎಂದಿದ್ದಾರೆ.
ರಾಷ್ಟ್ರೀಯ ವನ್ಯಜೀವಿ ಒಕ್ಕೂಟದ ಪ್ರಕಾರ, ಸೀ ಕುಕುಂಬರ್ ಜೀವಿಗಳು ಎಕಿನೋಡರ್ಮ್ ಎಂಬ ಜಲಚರ ಪ್ರಾಣಿಗಳ ಗುಂಪಿಗೆ ಸೇರಿವೆ. ಸ್ಟಾರ್ ಫಿಷ್ ಮತ್ತು ಅರ್ಚಿನ್ಗಳೂ ಇದೇ ಗುಂಪಿಗೆ ಸೇರಿದವಾಗಿವೆ. ಸಾಗರದ ಆಳದಲ್ಲಿ ವಾಸಿಸುವ ಇವುಗಳು ಪಾಚಿ, ಜಲಕಶೇರುಕಗಳು ಮತ್ತು ತ್ಯಾಜ್ಯಕಣಗಳನ್ನು ತಿನ್ನುತ್ತವೆ.
Published On - 4:27 pm, Thu, 4 August 22