Viral Video: ದೋಸೆ ಹಿಟ್ಟಿನಿಂದ ಬೆಕ್ಕಿನ ಚಿತ್ರ ಬಿಡಿಸಿದ ವಿಡಿಯೋ ವೈರಲ್​​

|

Updated on: Mar 05, 2023 | 4:22 PM

ಬೀದಿ ಬದಿಯ ದೋಸೆ ವ್ಯಾಪಾರಿ ತನ್ನ ಗ್ರಾಹಕರನ್ನು ಮೆಚ್ಚಿಸಲು ಬೆಕ್ಕಿನ ಆಕಾರದಲ್ಲಿ ದೋಸೆಯನ್ನು ತಯಾರಿಸಿ ನೀಡಿದ್ದಾರೆ. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ದೋಸೆ ಹಿಟ್ಟಿನಿಂದ ಬೆಕ್ಕಿನ ಚಿತ್ರ ಬಿಡಿಸಿದ ವಿಡಿಯೋ ವೈರಲ್​​
ಬೆಕ್ಕಿನ ಆಕಾರದ ದೋಸೆ
Image Credit source: Twitter
Follow us on

ಪ್ರತಿಭೆ ಯಾರ ಸ್ವತ್ತಲ್ಲ ಎಂಬ ಮಾತಿದೆ. ಅದಕ್ಕೊಂದು ಉತ್ತಮ ನಿದರ್ಶನ ಇಲ್ಲಿದೆ.  ಬೀದಿ ಬದಿಯ ದೋಸೆ ವ್ಯಾಪಾರಿ ತನ್ನ ಗ್ರಾಹಕರನ್ನು ಮೆಚ್ಚಿಸಲು ಬೆಕ್ಕಿನ ಆಕಾರದಲ್ಲಿ ದೋಸೆಯನ್ನು ತಯಾರಿಸಿ ನೀಡಿದ್ದಾರೆ. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣ(Social Media) ದಲ್ಲಿ ಭಾರೀ ವೈರಲ್​ ಆಗಿದೆ. ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ರೆಸ್ಟೋರೆಂಟ್‌ವೊಂದರ ಬಾತ್​​​ ರೂಮ್​​ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆ ಭಾರೀ ವೈರಲ್​​ ಆಗುತ್ತಿದೆ

ಜನರು ತಮ್ಮ ಪ್ರತಿಭೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಜನರ ಮನಗೆದ್ದಿರುವ ಸಾಕಷ್ಟು ಉದಾಹರಣೆಗಳಿವೆ. ಇದೀಗ ಬೀದಿಬದಿ ವ್ಯಾಪಾರಿಯೊಬ್ಬರು ಬೆಕ್ಕಿನ ಆಕಾರದಲ್ಲಿ ದೋಸೆ ತಯಾರಿಸಿ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಬೆರಗುಗೊಳಿಸಿದ್ದಾರೆ. ಹಿಟ್ಟಿನಿಂದ ಬೆಕ್ಕಿನ ಆಕಾರದಲ್ಲಿ ದೋಸೆ ತಯಾರಿಸುತ್ತಿರುವ ವಿಡಿಯೋವನ್ನು ಟ್ವಿಟರ್​ ಬಳಕೆದಾರರಾದ ಮನೋಜ್ ಕುಮಾರ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊ ಈಗಾಗಲೇ ಟ್ವಿಟರ್‌ನಲ್ಲಿ 2.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಜೊತೆಗೆ ಸಾಕಷ್ಟು ಲೈಕ್​ ಮತ್ತು ರೀ ಟ್ವೀಟ್​ಗಳನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:22 pm, Sun, 5 March 23