ಇತ್ತೀಚಿನ ದಿನಗಳಲ್ಲಿ ತಮಾಷೆಯ, ಅಚ್ಚರಿಯ ವಿಡಿಯೋಗಳಿಗೆ ಸೋಷಿಯಲ್ ಮೀಡಿಯಾಗಳು ಹಾಟ್ಸ್ಪಾಟ್ ಆಗಿವೆ. ಪ್ರತಿದಿನ ಸಾವಿರಾರು ವೀಡಿಯೋಗಳು ಅಂತರ್ಜಾಲದಲ್ಲಿ ಪೋಸ್ಟ್ ಆಗುತ್ತಿರುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದು ನೋಡಲು ಕೊಂಚ ಹಾಸ್ಯವಾಗಿದ್ದರೂ ಸರ್ಕಾರವನ್ನು ಎಚ್ಚರಿಸಲಾಗಿದೆ. ಶಾಲಾ ವಿದ್ಯಾರ್ಥಿಗಳೇ ಪತ್ರಕರ್ತರಾಗಿ ಸರ್ಕಾರಿ ಶಾಲೆಯ ದುಸ್ಥಿತಿಗಳ ಬಗ್ಗೆ ವರದಿ ಮಾಡುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
ನಗು ತರಿಸುವ ವಿಡಿಯೋದಲ್ಲಿ ಅರನೇ ತರಗತಿ ವಿದ್ಯಾರ್ಥಿ ಸರ್ಫರಾಜ್ ಎಂಬಾತ ಪತ್ರಕರ್ತನಂತೆ ವರದಿ ಮಾಡುತ್ತಾ ಶಾಲೆಯಲ್ಲಿನ ಗಂಭೀರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆದಿದ್ದಾನೆ. ಸಣ್ಣ ಕೋಲು ಹಿಡಿದು ಅದಕ್ಕೆ ಬಾಟಲ್ ಹಾಕಿ ಮೈಕ್ನಂತೆ ಮಾಡಿಕೊಂಡ ಸರ್ಫರಾಜ್, ಶಾಲೆಯಲ್ಲಿ ಬೋಧನೆಗಳು ಸರಿಯಾಗಿ ನಡೆಯುತ್ತಿಲ್ಲ, ಹೀಗಾಗಿ ಸರ್ಕಾರಕ್ಕೆ ತಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಈ ವಿಡಿಯೋ ಮಾಡಿದ್ದಾಗಿ ವಿವರಿಸಿದ್ದಾನೆ. ಶಿಕ್ಷಕರು ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಬರುತ್ತಿಲ್ಲ, ಮಧ್ಯಾಹ್ನ 12: 45 ಆದರೂ ಶಿಕ್ಷಕರು ಪಾಠ ಮಾಡುತ್ತಿಲ್ಲ, ನೀರು ಕುಡಿಯಲು ದೂರಕ್ಕೆ ಹೋಗಬೇಕಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಸರ್ಫರಾಜ್, ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾನೆ.
ಮಾಧ್ಯಮ ಪತ್ರಕರ್ತರು ವರದಿ ಮಾಡುವಂತೆ ಸರ್ಫರಾಜ್, ಕೆಲವು ವಿದ್ಯಾರ್ಥಿಗಳನ್ನು ಕೂಡ ಸಂದರ್ಶನ ಮಾಡಿದ್ದಾನೆ. ಶಾಲೆಯಲ್ಲಿ ಶೌಚಾಲಯ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಗಮನಸೆಳೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋವನ್ನು Maaz Akhter ಎಂಬ ಟ್ವಿಟರ್ ಖಾತೆಯಲ್ಲಿ ಗುರುವಾರದಂದು ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದುಕೊಂಡಿದೆ.
बच्चे की सच्ची पत्रकारिता को दिल से सलाम
वीडियो झारखंड की है और बच्चे का नाम सरफराज है@MaazAkhter800#JharkhandNews #Viral pic.twitter.com/dsKVdtiRSe— Maaz Akhter (@MaazAkhter800) August 4, 2022
ಇದಲ್ಲದೇ ವಿಡಿಯೋ ನೋಡಿದ ನೆಟಿಜನ್‌ಗಳು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. “ಈ ಹುಡುಗ ನಿಜವಾದ ಪತ್ರಿಕೋದ್ಯಮಕ್ಕೆ ನನ್ನ ಪ್ರಾಮಾಣಿಕ ನಮನ” ಎಂದು ಹೇಳಿದ್ದಾರೆ. ಇನ್ನೊಬ್ಬ ನೆಟ್ಟಿಗರ ಪ್ರತಿಕ್ರಿಯಿಸಿ, “ನಿಜವಾದ ಪತ್ರಕರ್ತನಾಗುವ ಎಲ್ಲಾ ಗುಣಲಕ್ಷಣಗಳು ಆತನಲ್ಲಿ ಕಾಣುತ್ತವೆ” ಎಂದು ಬರೆದುಕೊಂಡಿದ್ದಾರೆ.
Published On - 3:50 pm, Fri, 5 August 22