Viral Video: ವ್ಯಕ್ತಿಯನ್ನು ಅಟ್ಟಾಡಿಸಿದ ಹಸುಗಳು, ಎದ್ದುಬಿದ್ದು ಓಡಿದಾತ ಬಿದ್ದಿದ್ದು ಎಲ್ಲಿಗೆ ಗೊತ್ತಾ?
ಕೀಟಲೆ ಮಾಡಿದ ವ್ಯಕ್ತಿಯನ್ನು ಎರಡು ಹಸುಗಳು ಅಟ್ಟಿಸಿಕೊಂಡು ಬಂದಿವೆ. ಈ ವೇಳೆ ಅವುಗಳ ಕೊಂಬಿನೇಟಿನಿಂದ ತಪ್ಪಿಸಿಕೊಳ್ಳಲು ವ್ಯಕ್ತಿ ಎದ್ದುಬಿದ್ದು ಓಡಿ ಬಂದು ಹಳ್ಳಕ್ಕೆ ಬಿದ್ದಿದ್ದಾನೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

ಕೀಟಲೆ ಮಾಡಲು ಹೋಗಿ ಮೂಕ ಪ್ರಾಣಿಗಳ ಆಕ್ರೋಶಕ್ಕೆ ತುತ್ತಾಗುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತವೆ ಮತ್ತು ಇಂತಹ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇಂತಹ ವಿಡಿಯೋ ಕೆಲವೊಮ್ಮೆ ನೆಟ್ಟಿಗರನ್ನು ನಗುವಿನ ಲೋಕಕ್ಕೆ ಕೊಂಡೊಯ್ಯುತ್ತವೆ. ಅದರಂತೆ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿರುವ ತಮಾಷೆಯ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಮೇಯುತ್ತಿದ್ದಾಗ ಕೀಟಲೆ ಮಾಡಿದ ವ್ಯಕ್ತಿಯನ್ನು ಎರಡು ಹಸುಗಳು ಅಟ್ಟಿಸಿಕೊಂಡು ಬಂದ್ದಿದ್ದು, ಆ ವ್ಯಕ್ತಿ ಎದ್ದುಬಿದ್ದು ಓಡಿ ಬಂದು ಹಳ್ಳಕ್ಕೆ ಬೀಳುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
ಹತ್ತಕ್ಕೂ ಹೆಚ್ಚು ಹಸುಗಳು ವಿಶಾಲವಾದ ಗದ್ದೆಯಲ್ಲಿ ಮೇಯುತ್ತಿರುತ್ತವೆ. ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಅವುಗಳಿಗೆ ಕೀಟಲೆ ಮಾಡಿದ್ದಾರೆ. ಈ ವೇಳೆ ಕೋಪಗೊಂಡ ಕಪ್ಪು ಬಣ್ಣದಿಂದ ಹಾಗೂ ಉದ್ದಾದ ಚೂಪಿನ ಕೊಂಬುಳ್ಳ ಹಸು ಮತ್ತು ಕೊಂಬು ಇಲ್ಲ ಮತ್ತೊಂದು ಹಸು ಅಟ್ಟಿಸಿಕೊಂಡು ಬಂದಿವೆ. ಈ ವೇಳೆ ಅಲ್ಲಿಂದ ಎದ್ದುಬಿದ್ದು ಓಡಲು ಆರಂಭಿಸಿದ ಕೀಟಲೆ ಮಾಡಿದ ವ್ಯಕ್ತಿ ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿದ ಕಾಂಕ್ರೀಟ್ ಮೇಲೆ ಓಡುತ್ತಾನೆ. ಈ ವೇಳೆ ಆತ ಆಯ ತಪ್ಪಿ ಹಳ್ಳಕ್ಕೆ ಬಿದ್ದು ಮೇಲಕ್ಕೆ ಎದ್ದು ಬರುತ್ತಾನೆ. ಈತನೊಂದಿಗೆ ಸಣ್ಣ ನಾಯಿ ಮರಿ ಕೂಡ ವೇಗವಾಗಿ ಓಡುವುದನ್ನು ಕೂಡ ವೈರಲ್ ವಿಡಿಯೋದಲ್ಲಿ ಕಾಣಬಹುದು.
ಈ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಣ್ಣ ಕ್ಲಿಪ್ ಅನ್ನು ವೈರಲ್‌ಹಾಗ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈವರೆಗೆ 41 ಸಾವಿರಕ್ಕೂ ಹೆಚ್ಚು ವೀಕ್ಷಣಗಳನ್ನು ಕಂಡಿದ್ದು, ಸಾವಿರಾರು ಲೈಕ್ಗಳು ಬಂದಿವೆ. ಈ ವಿಡಿಯೋವನ್ನು ನೋಡಿದ ಒಂದಷ್ಟು ಮಂದಿ ಕಾಮೆಂಟ್ಗಳನ್ನು ಕೂಡ ಮಾಡಿದ್ದಾರೆ.
View this post on Instagram
ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ಸಣ್ಣ ನಾಯಿಮರಿ ಕೂಡ ತನ್ನ ಪ್ರಾಣಕ್ಕಾಗಿ ಓಡುತ್ತಿತ್ತು” ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಅವರು ಯಾಕೆ ಆತ್ಮವಿಶ್ವಾಸದಿಂದ ಓಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ” ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, “ಆ ನೀರು ಹಸುಗಳಿಗಿಂತಲೂ ಮಾರಕ” ಎಂದು ಹೇಳಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Fri, 5 August 22