
ಪದವಿ ಪ್ರದಾನ ಸಮಾರಂಭಗಳು ವಿದ್ಯಾರ್ಥಿ ಜೀವನದಲ್ಲಿ ಹೆಮ್ಮೆಯ ಕ್ಷಣಗಳಾಗಿವೆ. ವರ್ಷಗಳ ಶ್ರಮ ಮತ್ತು ವಿನೋದದ ನಂತರ ಪ್ರಮಾಣಪತ್ರವನ್ನು ಸ್ವೀಕರಿಸುವುದು ನಿಜಕ್ಕೂ ವಿಶೇಷವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ‘ಸ್ಟಾರ್ ವಾರ್ಸ್’ ಅಭಿಮಾನಿಯೊಬ್ಬ ಪದವಿ ಪಡೆದ ನಂತರ ಸಾಹಸವನ್ನು ಹೊರತೆಗೆದು ಪ್ರಾಂಶುಪಾಲರೊಂದಿಗೆ ‘ದ್ವಂದ್ವಯುದ್ಧ’ದಲ್ಲಿ ತೊಡಗಿಸಿಕೊಂಡನು. ಪೂರ್ವಸಿದ್ಧತೆಯಿಲ್ಲದ ಸವಾಲು ಎಲ್ಲರನ್ನೂ ಆಶ್ಚರ್ಯಗೊಳಿಸಿತಾದರೂ ನೆರೆದಿದ್ದ ಪ್ರೇಕ್ಷಕರೆಲ್ಲರು ಹರ್ಷೋದ್ಗಾರ ವ್ಯಕ್ತಪಡಿಸಿದರು.
ಪ್ರಾಂಶುಪಾಲರ ಜೊತೆ ಹದಿಹರೆಯದ ಯುವಕನ ದ್ವಂದ್ವಯುದ್ಧವನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. Now This ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಕ್ಲಿಪ್ ವಿದ್ಯಾರ್ಥಿಯು ಪದವಿ ಗೌನ್ ಧರಿಸಿ ತನ್ನ ಪ್ರಾಂಶುಪಾಲರೊಂದಿಗೆ ಲೈಟ್ಸೇಬರ್ನೊಂದಿಗೆ ಹೋರಾಡುತ್ತಿರುವುದನ್ನು ತೋರಿಸುತ್ತದೆ. ವಿದ್ಯಾರ್ಥಿಯೊಂದಿಗೆ ಪ್ರಾಂಶುಪಾಲರು ಕೂಡ ಅದೇ ರೀತಿ ಪ್ರತಿಕ್ರಿಯಿಸಿ ಮನರಂಜನೆಯನ್ನು ಪಡೆದುಕೊಂಡಿದ್ದಾರೆ. ಕೊನೆಯಲ್ಲಿ ಪ್ರೇಕ್ಷಕರ ಹರ್ಷೋದ್ಗಾರ ವ್ಯಕ್ತವಾದಾಗ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿ ಪರಸ್ಪರ ಆಲಿಂಗನ ಮಾಡಿಕೊಂಡಿದ್ದಾರೆ.
ಟಾಕರ್ ವರದಿಯ ಪ್ರಕಾರ, ಈ ದೃಶ್ಯವನ್ನು ಕೆನಡಾದ ಪೋರ್ಟ್ ಮೂಡಿಯಲ್ಲಿರುವ ಹೆರಿಟೇಜ್ ವುಡ್ಸ್ ಸೆಕೆಂಡರಿ ಶಾಲೆಯಲ್ಲಿ ಸೆರೆಹಿಡಿಯಲಾಗಿದೆ. ಸಮಾರಂಭದಲ್ಲಿ ಪಂಟೋಜಾ ಲೈಟ್ಸೇಬರ್ ಅನ್ನು ತೆಗೆದುಕೊಂಡು ಎಲ್ಲರನ್ನು ಅಚ್ಚರಿಗೊಳಿಸಲು ಬಯಸಿದರು. ಅದರಂತೆ ಲೈಟ್ಸೇಬರ್ ಅನ್ನು ತರಬಹುದೇ ಎಂದು ವಿದ್ಯಾರ್ಥಿ ಪಂಟೋಜಾ ಪ್ರಾಂಶುಪಾಲರನ್ನು ಕೇಳಿದ್ದನು. ಇದಕ್ಕೆ ಪ್ರಾಂಶುಪಾಲ ಕ್ಲರ್ಕ್ಸನ್ ಅವರು “ಬಹುಶಃ” ಎಂದು ಹೇಳಿದರು.
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Sun, 28 August 22