ಮಕ್ಕಳಿಗೆ ವಿದ್ಯೆಯ ಜೊತೆಗೆ ಮಾನವೀಯ ಮೌಲ್ಯಗಳ ಕಲಿಕೆ; ಈ ವಿಡಿಯೋ ಒಮ್ಮೆ ನೋಡಿ

|

Updated on: Jan 20, 2024 | 3:21 PM

ಶಿಕ್ಷಣ ಎಂದಾಕ್ಷಣ ಬರೀ ಹೆಚ್ಚು ಅಂಕ ಪಡೆಯುವುದು ಮಾತ್ರವಲ್ಲ, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ನೀಡುವುದು ಕೂಡ ಶಿಕ್ಷಣ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಈ ಪುಟ್ಟ ಮಕ್ಕಳ ಈ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಮಕ್ಕಳಿಗೆ ವಿದ್ಯೆಯ ಜೊತೆಗೆ ಮಾನವೀಯ ಮೌಲ್ಯಗಳ ಕಲಿಕೆ; ಈ ವಿಡಿಯೋ ಒಮ್ಮೆ ನೋಡಿ
Viral Video
Image Credit source: Twitter
Follow us on

ಶಿಕ್ಷಣ ಎಂದಾಕ್ಷಣ ಪೋಷಕರು ಮಕ್ಕಳಿಗೆ ಹೆಚ್ಚು ಅಂಕ ಪಡೆಯಲು ಒತ್ತಾಯಿಸುತ್ತಾರೆ ಹೊರತು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವುದನ್ನು ಮರೆಯುತ್ತಾರೆ. ಹೆಚ್ಚು ಅಂಕಗಳನ್ನು ಪಡೆದರೆ ಮಾತ್ರ ಸಾಲದು, ಅದರ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಕೂಡ ಅಷ್ಟೇ ಅಗತ್ಯವಾಗಿರುತ್ತದೆ.  ಮಾನವೀಯತೆ ಇಲ್ಲದ ವಿದ್ಯೆ , ಮೆದುಳಿಲ್ಲದ ತಲೆಗೆ ಸಮಾನ ಎಂಬ ಮಾತಿಗೆ. ಕೆಲತಿಂಗಳುಗಳ ಹಿಂದೆಯಷ್ಟೇ ಕಿಕ್ಕಿರಿದು ತುಂಬಿದ್ದ ಸರಕಾರಿ ಬಸ್ ನಲ್ಲಿ ಸೀಟ್ ಸಿಗದೇ ವೃದ್ಧೆಯೊಬ್ಬರು ತನ್ನ ಮೊಮ್ಮಗುವನ್ನು ಎತ್ತಿಕೊಂಡು ಬಸ್ ನ ಫುಟ್ ಬೋರ್ಡಿನಲ್ಲೇ ಕುಳಿತು ಪ್ರಯಾಣಿಸುವ ಅಮಾನವೀಯ ಘಟನೆ ಕೊಪ್ಪಳದಲ್ಲಿ ವರದಿಯಾಗಿತ್ತು. ಕಣ್ಣಿದ್ದೂ ಕುರುಡರಂತೆ ಆಡುವ ಜನಗಳ ಮಧ್ಯೆ ಇದೀಗಾ  ಈ ಪುಟ್ಟ ಮಕ್ಕಳ ಈ ವಿಡಿಯೋವೊಂದು ಸಾಕಷ್ಟು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಶಿಕ್ಷಣ ಎಂದಾಕ್ಷಣ ಬರೀ ಹೆಚ್ಚು ಅಂಕ ಪಡೆಯುವುದು ಮಾತ್ರವಲ್ಲ, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ನೀಡುವುದು ಕೂಡ ಉತ್ತಮ ಶಿಕ್ಷಣ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಇಲ್ಲಿ ತರಗತಿಯಲ್ಲಿ ಬಸ್​​ ರೀತಿಯಲ್ಲಿ ವಾತಾವರಣ ಸೃಷ್ಟಿಸಿದ್ದು, ಅಲ್ಲಿ ಮಕ್ಕಳೆಲ್ಲಾ ಸೀಟಿನಲ್ಲಿ ಕುಳಿತಿರುವುದು ಕಾಣಬಹುದು. ಹಿರಿಯರು, ಗರ್ಭಿಣಿಯರು ಹಾಗೂ ಅಂಗವಿಕರು ಬಂದಾಗ ಅವರಿಗೆ ಹೇಗೆ ಎದ್ದು ಸೀಟು ಬಿಟ್ಟುಕೊಡಬೇಕು ಎಂಬುದನ್ನು ಇಲ್ಲಿ ಮಕ್ಕಳಿಗೆ ವಿವರಿಸಲಾಗಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:


ಇದನ್ನೂ ಓದಿ: ಆಫ್ರಿಕಾದಲ್ಲಿ ಶ್ರೀರಾಮ ಘೋಷ; ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕರಾದ ಕಿಲಿ ಪೌಲ್

ಈ ವಿಡಿಯೋವನ್ನು @Vinod_r108 ಎಂಬ ‘X'(ಟ್ವಿಟರ್​​) ಖಾತೆಯಲ್ಲಿ ಜನವರಿ 19 ರಂದು ಹಂಚಿಕೊಳ್ಳಲಾಗಿದ್ದು, ಇದೀಗಾಗಲೇ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು “ಉತ್ತಮ ಸಂದೇಶವನ್ನು ನೀಡುವ ವಿಡಿಯೋ” ಎಂದು ಬರೆದುಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗುತ್ತಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Sat, 20 January 24