ಗ್ಯಾಸ್ ಸಿಲಿಂಡರ್ ಮನೆ ಬಾಗಿಲಿಗೆ ತಲುಪಿಸುವ ಯುವಕ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿ
ಬಿಹಾರದ ಅರಾರಿಯಾ ಜಿಲ್ಲೆಯ ಪಟೇಗಾನಾ ಗ್ರಾಮದ ಸಾದಿಕ್ ಎಂಬಾತ ಸ್ಥಳೀಯ ಏಜೆನ್ಸಿಯೊಂದರಲ್ಲಿ ಗ್ಯಾಸ್ ಡೆಲಿವರಿ ಬಾಯ್ ಆಗಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇದೀಗಾ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ.
ಬಿಹಾರ: ಅರಾರಿಯಾ ಜಿಲ್ಲೆಯ ಪಟೇಗಾನಾ ಗ್ರಾಮದ ಸಾದಿಕ್ ಎಂಬಾತ ಸ್ಥಳೀಯ ಏಜೆನ್ಸಿಯೊಂದರಲ್ಲಿ ಗ್ಯಾಸ್ ಡೆಲಿವರಿ ಬಾಯ್ ಆಗಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇತನಿಗೆ ಕ್ರಿಕೆಟ್‌ನಲ್ಲಿ ತುಂಬಾ ಆಸಕ್ತಿ ಇದ್ದಿದ್ದರಿಂದ ಡ್ರೀಮ್-11 ಆ್ಯಪ್‌ನಲ್ಲಿ ಆಗಾಗ್ಗೆ ಗೇಮ್‌ಗಳನ್ನು ಆಡುವ ಅಭ್ಯಾಸ ಹೊಂದಿದ್ದ. ಜನವರಿ 14 ರಂದು ಭಾರತ-ಅಫ್ಘಾನಿಸ್ತಾನ ಟಿ20 ಪಂದ್ಯದ ವೇಳೆ ಈತ ಡ್ರೀಮ್-11 ರಲ್ಲಿ ಫ್ಯಾಂಟಸಿ ಕ್ರಿಕೆಟ್ ಆಟವನ್ನು ಆಡಿದ್ದರು. ಡ್ರೀಮ್ 11ನಲ್ಲಿ ಜನರಿಗೆ ಕ್ರಿಕೆಟ್ ಪಂದ್ಯದ ಮೊದಲು ತಂಡವನ್ನು ರಚಿಸುವ ಆಯ್ಕೆಯನ್ನು ನೀಡುತ್ತದೆ. ಇದರಲ್ಲಿ, ನಿಮ್ಮ ಆಯ್ಕೆಯು ಸರಿಯಾಗಿದ್ದರೆ ನೀವು ಗೆಲ್ಲುವ ಅವಕಾಶವನ್ನು ಹೊಂದಿರುತ್ತೀರಿ. ಇದರಂತೆ ಈತ ಕೇವಲ 49 ರೂಪಾಯಿ ಹೂಡಿಕೆ ಮಾಡಿ ತಂಡ ರಚಿಸಿದ್ದಾನೆ. ಜೊತೆಗೆ ಈತ ಆಯ್ಕೆ ಮಾಡಿದ ಆಟಗಾರರು ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.
ಕೇವಲ 49 ರೂಪಾಯಿ ಹೂಡಿಕೆ ಮಾಡಿ 1.5 ಕೋಟಿ ರೂಪಾಯಿ ಗೆದ್ದಿದ್ದಾನೆ. ಇದರಿಂದ ಸಾದಿಕ್ ಮನೆಯವರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಗ್ಯಾಸ್ ಏಜೆನ್ಸಿಯ ನಿರ್ದೇಶಕ ಜಿತೇಂದ್ರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಿಗೆ ವಿದ್ಯೆಯ ಜೊತೆಗೆ ಮಾನವೀಯ ಮೌಲ್ಯಗಳ ಕಲಿಕೆ; ಈ ವಿಡಿಯೋ ಒಮ್ಮೆ ನೋಡಿ
ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿರುವ ಈ ಆಟವನ್ನು ಕೆಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಇದು ಚಟವಾಗಿ ಪರಿಣಮಿಸಬಹುದು ಎಂದು ನಂಬಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Sat, 20 January 24