ಒಬ್ಬರ ಕಷ್ಟವನ್ನು ಅರ್ಥಮಾಡಿಕೊಂಡು ಸಹಾಯ ಮಾಡುವುದರಲ್ಲಿ ಸಿಗುವ ಸಂತೋಷ ಬೇರೆ ಎಲ್ಲೂ ಸಿಗಲಾರದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ಆಹಾರ ವಿತರಣಾ ಪ್ರತಿಸ್ಪರ್ಧಿಗಳದ್ದಾಗಿದೆ. ನಮಗೂ ನಿಮಗೂ ತಿಳಿದಿರುವಂತೆ ಆಹಾರ ವಿತರಕರು ನಾವು ಯಾವುದೇ ಸಂದರ್ಭದಲ್ಲಿ ಆಹಾರ ಆರ್ಡರ್ ಮಾಡಿದರೆ ಡೆಡ್ಲೈನ್ಗೆ ಸರಿಯಾಗಿ ಆಹಾರ ಡೆಲಿವೆರಿ ಮಾಡುತ್ತಾರೆ. ಆದರೂ ಕೆಲವೊಮ್ಮೆ ಕೆಲವು ವಿತರಕರು ಸೈಕಲ್ನಂತಹ ವಾಹನಗಳನ್ನು ಬಳಸುವುದರಿಂದ ಆಹಾರ ಡೆಲಿವರಿ ಸಮಯದಲ್ಲಿ ಏರುಪೇರು ಆಗುತ್ತವೆ. ಹೀಗಾಗಬಾರದು ಎಂಬ ಕಾರಣಕ್ಕೆ ಸೈಕಲ್ನಲ್ಲಿ ಹೋಗುತ್ತಿದ್ದ ಝೋಮ್ಯಾಟೋ (Zomato) ಆಹಾರ ವಿತರಕನನ್ನು ಬೈಕ್ನಲ್ಲಿ ಹೋಗುತ್ತಿರುವ ಸ್ವಿಗ್ಗಿ (Swiggy) ಆಹಾರ ವಿತರಕ ಕೈ ಹಿಡಿದುಕೊಂಡು ರಸ್ತೆಯಲ್ಲಿ ಸಾಗಿದ್ದಾರೆ.
ಕಾರು ಚಾಲಕರೊಬ್ಬರು ಮೊಬೈಲ್ ಮೂಲಕ ಅದ್ಭುತ ಸ್ನೇಹದ ದೃಶ್ಯಾವಳಿಯನ್ನು ಸೆರೆಹಿಡಿದ್ದಾರೆ. ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಬೈಕ್ನಲ್ಲಿ ಹೋಗುತ್ತಿರುವ ಸ್ವಿಗ್ಗಿ ಆಹಾರ ವಿತರಕನೊಬ್ಬ ಸೈಕಲ್ನಲ್ಲಿ ಹೋಗುತ್ತಿರುವ ಝೋಮ್ಯಾಟೋ ಆಹಾರ ವಿತರಕನ ಕೈಯನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಪ್ರತಿಸ್ಪರ್ಧಿ ಕಂಪನಿಯಾಗಿದ್ದರೂ ಕಷ್ಟಕ್ಕೆ ನೆರವಾಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಸನ್ನಾ ಅರೋರಾ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಜುಲೈ 9 ರಂದು ಹಂಚಿಕೊಂಡಿದ್ದು, “ದೆಹಲಿಯಲ್ಲಿ ಈ ಅತ್ಯಂತ ಬಿಸಿ ಮತ್ತು ಅಸಹನೀಯ ದಿನಗಳಲ್ಲಿ ಕಂಡ ನಿಜವಾದ ಸ್ನೇಹ” ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ವೈರಲ್ ಪಡೆದು ಈವರೆಗೆ 4.66 ಲಕ್ಷ ಲೈಕ್ಗಳು ಬಂದಿದ್ದು, ಸ್ನೇಹವನ್ನು ಹೊಗಳುವ ಸಾಕಷ್ಟು ಕಾಂಮೆಂಟ್ಗಳು ಬಂದಿವೆ.
Published On - 10:29 am, Mon, 18 July 22