
ಇಂಗ್ಲೆಂಡ್ನ ರೋಹ್ಯಾಂಪ್ಟನ್ ವಿಶ್ವವಿದ್ಯಾನಿಲಯದ ಪದವಿ ಸಮಾರಂಭ(Graduation Ceremony) ದಲ್ಲಿ 24 ವರ್ಷದ ಚೀನಾ ಮೂಲದ ವಿದ್ಯಾರ್ಥಿನಿಯೊಬ್ಬಳು ತಾನು ಪದವಿ ಪಡೆದ ಖುಷಿಗೆ ವೇದಿಕೆಯಲ್ಲಿಯೇ ಸೈಡ್ ಫ್ಲಿಪ್ ಸ್ಟಂಟ್(Side Flip Stunt) ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ವಿದ್ಯಾರ್ಥಿಯ ಕುಂಗ್ ಫೂ ಶೈಲಿಯ ಸೈಡ್ ಫ್ಲಿಪ್ ಸ್ಟಂಟ್ ವಿಡಿಯೋ.
ಪದವಿ ಪಡೆಯುವುದು ಪ್ರತಿಯೊಂದು ವಿದ್ಯಾರ್ಥಿಗಳ ಜೀವನದಲ್ಲಿ ಖುಷಿಯ ಹಾಗೂ ವಿಶೇಷ ದಿನ. ಪ್ರತಿಯೊಬ್ಬರೂ ತಮ್ಮ ಪದವಿ ಸಮಾರಂಭವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ಇರುತ್ತದೆ. ಆದರೆ ಇಲ್ಲೊಬ್ಬಳು ಚೀನಾದ ವಿದ್ಯಾರ್ಥಿನಿ ತನ್ನ ಪದವಿ ಪಡೆಯುವ ಕ್ಷಣವನ್ನು ವಿಶೇಷವಾಗಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಫ್ಲೈಟ್ ಹತ್ತಿದ ಅಜ್ಜಿಯ ವಿಡಿಯೋ ವೈರಲ್
ಬೀಜಿಂಗ್ನ 24 ವರ್ಷದ ಚೆನ್ ಯಿನಿಂಗ್ ಹೆಸರಿನ ವಿದ್ಯಾರ್ಥಿನಿ, ಜನವರಿಯಲ್ಲಿ ಇಂಗ್ಲೆಂಡ್ನ ರೋಹ್ಯಾಂಪ್ಟನ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಸಂಭ್ರಮದಲ್ಲಿ ಕುಂಗ್ ಫೂ ಶೈಲಿಯ ಸೈಡ್ ಫ್ಲಿಪ್ ಅನ್ನು ಪ್ರದರ್ಶಿಸಿದ ವೀಡಿಯೊವು ಆನ್ಲೈನ್ನಲ್ಲಿ ಲಕ್ಷಾಂತರ ವೀಕ್ಷಣೆ ಗಳಿಸಿದೆ. ಡ್ಯಾನ್ಸ್ ಪ್ರಾಕ್ಟೀಸ್ ಮತ್ತು ಪರ್ಫಾರ್ಮೆನ್ಸ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದ ಚೆನ್ ಉತ್ಸಾಹದಿಂದ ಫ್ಲಿಪ್ ಪ್ರದರ್ಶಿಸಿದಳು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:33 pm, Fri, 10 March 23