ಈಗಾಗಲೇ ಮದುವೆಯ ಸೀಸನ್ ಶುರುವಾಗಿದೆ. ಮೇ ತಿಂಗಳ ಆರಂಭದಿಂದಲೇ ಮಳೆರಾಯನ (Rainfall) ಆರ್ಭಟ ಶುರುವಾಗಿರುವುದರಿಂದ ಮದುವೆ (Marriage) ಮಾಡುವುದು, ಮದುವೆಗೆ ಹೋಗುವುದು ಕೂಡ ತಲೆನೋವಿನ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮದುವೆಗೆ ಸಂಬಂಧಿಸಿದ ತಮಾಷೆಯ ವಿಡಿಯೋಗಳು (Funny Videos) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸುದ್ದಿಯಾಗುತ್ತಿವೆ. ಕೆಲವೊಮ್ಮೆ ಮದುವೆಯ ಧಾವಂತದಲ್ಲಿ ವರ ಜೋರು ಮಳೆಯಲ್ಲಿ ಕೊಡೆ ಹಿಡಿದು ಹೋಗುವುದು, ಕೆಲವೊಮ್ಮೆ ಜೆಸಿಬಿಯಿಂದ ಮದುವೆ ಹಾಲ್ಗೆ ಎಂಟ್ರಿ ಕೊಡುವುದು ಮುಂತಾದ ಪ್ರಯೋಗಗಳು ನಡೆಯುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಸಾಕಷ್ಟು ಸುದ್ದಿಯಲ್ಲಿದೆ. ಈ ವೀಡಿಯೋದಲ್ಲಿ ಮದುವೆ ಮಂಟಪದಲ್ಲಿ ನೀರು ತುಂಬಿ, ತುಂತುರು ಮಳೆ ಸುರಿಯುತ್ತಿದೆ. ಇದ್ಯಾವುದನ್ನೂ ಲೆಕ್ಕಿಸದೆ ವಧು-ವರರು ಮದುವೆ ಆಗಲು ಹಸೆಮಣೆ ಮೇಲೆ ಕುಳಿತಿದ್ದಾರೆ. ಜೋರು ಮಳೆಯಲ್ಲೂ ಇಬ್ಬರೂ ನಿರಾತಂಕವಾಗಿ ಮದುವೆಯಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ದಿನ, ಅದಕ್ಕಾಗಿಯೇ ಈ ದಿನವನ್ನು ವಿಶೇಷವಾಗಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ದಂಪತಿಗಳ ಮದುವೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಳೆಯಲ್ಲೇ ಮಂಟಪ ಹಾಕಿ ಮದುವೆ ಮಾಡುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಕಾಣುತ್ತಿರುವ ದೃಶ್ಯ ನೋಡಿ ನಗು ತಡೆಯಲು ಆಗುವುದಿಲ್ಲ. ಈ ವಿಡಿಯೋದಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದು, ಮಂಟಪದ ಸುತ್ತಲಿನ ಜಾಗವೇ ಕೆರೆಯಾಗಿ ಮಾರ್ಪಟ್ಟಿದೆ. ಜನರು ಪೊರಕೆ ಹಿಡಿದು ಮಳೆ ನೀರನ್ನು ಗುಡಿಸುತ್ತಾ, ಬಕೆಟ್ನಲ್ಲಿ ನೀರು ತುಂಬಿಕೊಂಡು ಹೊರಗೆ ಚೆಲ್ಲುತ್ತಿರುವುದನ್ನು ಕಾಣಬಹುದು. ಇದ್ಯಾಕಪ್ಪಾ ಈ ರೀತಿ ಮಾಡುತ್ತಿದ್ದಾರೆ ಎಂದು ಅಚ್ಚರಿ ಪಡುವಷ್ಟರಲ್ಲಿ ಮಂಟಪದಲ್ಲಿ ಕುಳಿತ ವಧು-ವರರು ಕಾಣುತ್ತಾರೆ. ಜೋರು ಮಳೆಯನ್ನೂ ಲೆಕ್ಕಿಸದೆ ಇಬ್ಬರೂ ಮದುವೆಯಲ್ಲಿ ನಿರತರಾಗಿದ್ದಾರೆ.
ಈ ತಮಾಷೆಯ ವೀಡಿಯೊವನ್ನು ‘ಘಂಟಾ’ದ ಅಧಿಕೃತ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ತಮಾಷೆಯ ವೀಡಿಯೊವನ್ನು ಹಂಚಿಕೊಳ್ಳುವಾಗ, ‘ಶಾದಿ ತೊ ಕರ್ ಕೆ ರಹೇಂಗೆ’ (ಏನೇ ಆಗಲಿ ಮದುವೆ ಆಗೇ ಆಗುತ್ತೇನೆ) ಎಂದು ಶೀರ್ಷಿಕೆ ನೀಡಲಾಗಿದೆ.
ವಧುವಿನ ಮದುವೆಯ ಆತುರ ನೋಡಿ ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ‘ವಧುವಿನ ಮೇಕಪ್ ಕಳಚಬಾರದು, ಮಳೆಯಲ್ಲಿ ಮೇಕಪ್ ತೊಳೆದು ಹೋದರೆ ಮದುವೆ ರದ್ದಾಗುತ್ತದೆ’ ಎಂದು ಇಂಟರ್‌ನೆಟ್ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಇಂಟರ್‌ನೆಟ್ ಬಳಕೆದಾರರು ‘ವಧು-ವರರು ಕಡಾಯಿಯಲ್ಲಿ ತಿಂಡಿ ತಿಂದಿರಬೇಕು, ಅದಕ್ಕೇ ಮಳೆ ಬರುತ್ತಿದೆ. ‘ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ