ತನ್ನನ್ನು ಮದುವೆಯಾಗಲಿರುವನು ವಂಚಕ ಅಂತ ಗೊತ್ತಾಗಿ ಅಸ್ಸಾಮಿನ ಒಬ್ಬ ಮಹಿಳಾ ಪೊಲೀಸ ಇನ್ಸ್ ಪೆಕ್ಟರ್ ತಾವೇ ಅವನನ್ನು ಬಂಧಿಸಿದರು!

ತಾನು ಪ್ರೀತಿಸುತ್ತಿದ್ದ ಜನ್ಮೋನಿ ರಭಾಗೆ ಒ ಎನ್ ಜಿ ಸಿ ಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿ ತನ್ನನ್ನು ಪರಿಚಯಿಸಿಕೊಂಡಿದ್ದ. ರಭಾ ವೃತ್ತಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಣಿ ಅಂತ ಗೊತ್ತಿದ್ದರೂ ಪ್ರೇಮ ನಿವೇದನೆ ಮಾಡಿಕೊಂಡು ಅವರ ಮನಸ್ಸು ಗೆದ್ದಿದ್ದ.

ತನ್ನನ್ನು ಮದುವೆಯಾಗಲಿರುವನು ವಂಚಕ ಅಂತ ಗೊತ್ತಾಗಿ ಅಸ್ಸಾಮಿನ ಒಬ್ಬ ಮಹಿಳಾ ಪೊಲೀಸ ಇನ್ಸ್ ಪೆಕ್ಟರ್ ತಾವೇ ಅವನನ್ನು ಬಂಧಿಸಿದರು!
ರಾಣಾ ಪೊಗಾಗ್ ಮತ್ತು ಜುನ್ಮೋನಿ ರಭಾ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 06, 2022 | 1:43 AM

ನವದೆಹಲಿ: ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆ (ಒ ಎನ್ ಜಿ ಸಿ) (ONGC) ಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಲವಾರು ಜನರಿಗೆ ಮಂಕುಬೂದಿ ಎರಚಿರುವ ವಂಚಕನೊಬ್ಬನನ್ನು ಅಸ್ಸಾಂ ಪೊಲೀಸ್ (Assam police) ಗುರುವಾರ ಬಂಧಿಸಿದೆ. ರಾಣಾ ಪೊಗಾಗ್ (Rana Pogag) ಹೆಸರಿನ ವ್ಯಕ್ತಿಯನ್ನು ಬಂಧನಕ್ಕೆ ಕಾರಣವಾಗಿದ್ದು ಏನು ಗೊತ್ತಾ? ನಾಗಾಂವ್ ಪೊಲೀಸ ಠಾಣೆಯಲ್ಲಿ ಮಹಿಳಾ ಸಬ್-ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಗಾಗ್ ನ ಪ್ರೇಯಸಿ ಜುನ್ಮೋನಿ ರಭಾ (Junmoni Rabha) ಅವನ ವಿರುದ್ಧ ಎಫ್ ಐ ಆರ್ ದಾಖಲಿಸಿದ ಬಳಿಕ ಬಂಧಿಸಲಾಯಿತು.

ಪೊಗಾಗ್, ಅಸ್ಸಾಂ ಒ ಎನ್ ಜಿ ಸಿ ಯಲ್ಲಿ ಕೆಲಸ ಮಾಡುತ್ತಿರುವುದಾಗಿ ಅಂತ ಹೇಳಿ ಜನರಿಗೆ ಮೋಸ ಮಾಡುತ್ತಿದ್ದ ಎನ್ನಲಾಗಿದೆ. ಸಂಸ್ಥೆ ಮೇಲಧಿಕಾರಿಗಳೆಲ್ಲ ತನಗೆ ಚೆನ್ನಾಗಿ ಗೊತ್ತು ಎಂದು ಅವರನ್ನು ನಂಬಿಸಿ ಕೆಲಸ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪೀಕುತ್ತಿದ್ದ. ಪೋಲಿಸರು ಹೇಳುವ ಪ್ರಕಾರ ಪೊಗಾಗ್ ಹಲವಾರು ಜನರಿಗೆ ಕೋಟ್ಯಾಂತರ ರೂ. ಗಳ ಪಂಗನಾಮ ಹಾಕಿದ್ದಾನೆ.

ತಾನು ಪ್ರೀತಿಸುತ್ತಿದ್ದ ಜನ್ಮೋನಿ ರಭಾಗೆ ಒ ಎನ್ ಜಿ ಸಿ ಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿ ತನ್ನನ್ನು ಪರಿಚಯಿಸಿಕೊಂಡಿದ್ದ. ರಭಾ ವೃತ್ತಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಣಿ ಅಂತ ಗೊತ್ತಿದ್ದರೂ ಪ್ರೇಮ ನಿವೇದನೆ ಮಾಡಿಕೊಂಡು ಅವರ ಮನಸ್ಸು ಗೆದ್ದಿದ್ದ.

ಕಳೆದ ಅಕ್ಟೋಬರ್ ನಲ್ಲಿ ಪೊಗಾಗ್ ಮತ್ತು ರಭಾ ನಿಶ್ಚಿತಾರ್ಥ ನೆರವೇರಿತ್ತು ಮತ್ತು ಈ ವರ್ಷ ನವೆಂಬರ್ ಮದುವೆಯಾಗುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ, ಪೊಗಾಗ್ ಒಬ್ಬ ವಂಚಕ ಅನ್ನೋದು ಗೊತ್ತಾದ ಕೂಡಲೇ ರಭಾ ಅವನ ವಿರುದ್ಧ ದೂರು ದಾಖಲಿಸಿದರು.

‘ರಾಣಾ ಪೊಗಾಗ್ ಎಂಥ ವ್ಯಕ್ತಿ ಅನ್ನೋದನ್ನು ಗೊತ್ತು ಮಾಡಿದ ಮೂರು ಜನರಿಗೆ ನಾನು ಆಭಾರಿಯಾಗಿದ್ದೇನೆ. ಜನರಿಗೆ ಕೆಲಸ ಕೊಡಿಸುವ ನೆಪದಲ್ಲಿ ಅವನು ಅಪಾರ ಪ್ರಮಾಣದಲ್ಲಿ ಹಣ ಲಪಟಾಯಿಸುತ್ತಿರುವ ವಿಷಯವನ್ನು ನನಗೆ ಅವರು ವಿವರಿಸಿದರು. ಅವರ ಮೂಲಕವೇ ಅವನೆಂಥ ದಗಾಕೋರ ಅನ್ನೋದು ನನಗೆ ಗೊತ್ತಾಯಿತು. ಅವರು ನನ್ನ ಕಣ್ಣು ತೆರೆಸದೇ ಹೋಗಿದ್ದರೆ, ನಾನು ಸಹ ಮೋಸ ಹೋಗಿರುತ್ತಿದ್ದೆ,’ ಎಂದು ರಭಾ ಗುರುವಾರ ಮಾಧ್ಯಮದವರಿಗೆ ಹೇಳಿದರು.

ಈ ವರ್ಷ ಜನೆವರಿಯಲ್ಲಿ ಬಿಹ್ಪೂರಿಯ ಶಾಸಕ ಡಾ ಅಮಿಯಾ ಕುಮಾರ ಭುಯಾನ್ ಅವರನ್ನೊಳಗೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವರ ಬೆಂಬಲಿಗರ ಪರ ವಹಿಸದೆ ಕಾನೂನು ಕ್ರಮ ಜರುಗಿಸಿದ ಬಳಿಕ ರಭಾ ಅವರ ಹೆಸರು ಮಾಧ್ಯಮಗಳಲ್ಲಿ ಕೇಳಿಬರಲಾರಂಭಿಸಿತ್ತು. ಅಂಥ ಪೊಲೀಸ ಅಧಿಕಾರಿಣಿಯನ್ನೇ ರಾಣಾ ಪೊಗಾಗ್ ಬುಟ್ಟಿಗೆ ಹಾಕಿಕೊಂಡು ಅವರನ್ನೂ ವಂಚಿಸುವ ಹಂತದಲ್ಲಿದ್ದ!

ಇದನ್ನೂ ಓದಿ:  ಅಮಿತ್ ಶಾ ಮನೆಗೆ ಬಂದಾಗ ಸಿಹಿ ಮೊಸರು ತಿನ್ನಿಸಿ ಅಂತ ಸೌರವ್ ಗಂಗೂಲಿಗೆ ಮಮತಾ ಬ್ಯಾನರ್ಜಿ ಸಲಹೆ ನೀಡಿದರು

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್