ಬಾಗಿಲು ತೆರೆದ ಕೇದಾರನಾಥ ದೇಗುಲ: ಮೊದಲ ದಿನವೇ 10 ಸಾವಿರ ಭಕ್ತರಿಂದ ದರ್ಶನ
ಮೊದಲ ದಿನವೇ ಸುಮಾರು 10 ಸಾವಿರ ಭಕ್ತರು ದೇವರ ದರ್ಶನ ಪಡೆದರು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ದೆಹಲಿ: ಉತ್ತರಾಖಂಡದಲ್ಲಿರುವ ಐತಿಹಾಸಿಕ ಕೇದಾರನಾಥ ದೇಗುಲದ ಬಾಗಿಲನ್ನು ಶುಕ್ರವಾರ (ಮೇ 6) ಮುಂಜಾನೆ 6.25ಕ್ಕೆ ತೆರೆಯಲಾಯಿತು. ಮೊದಲ ದಿನವೇ ಸುಮಾರು 10 ಸಾವಿರ ಭಕ್ತರು ದೇವರ ದರ್ಶನ ಪಡೆದರು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಳೆದ ಆರು ತಿಂಗಳಿನಿಂದ ದೇಗುಲದ ಬಾಗಿಲು ಮುಚ್ಚಿತ್ತು. ಮೇ 3ರಂದು ಗಂಗೋತ್ರಿ ಧಾಮ, ಯಮುನೋತ್ರಿ ಧಾಮಗಳನ್ನು ಮೇ 3ರಂದು ಅಕ್ಷಯ ತೃತೀಯದ ಪ್ರಯುಕ್ತ ತೆರೆಯಲಾಗಿತ್ತು.
ದೇಗುಲವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಕೆಲವೇ ಗಂಟೆಗಳ ಮೊದಲು ಮುಖ್ಯಮಂತ್ರಿ ಧಾಮಿ ಒಂದು ವಿಡಿಯೊ ತುಣುಕನ್ನು ಟ್ವೀಟ್ ಮಾಡಿದ್ದಾರೆ. ಭಕ್ತರನ್ನು ಸ್ವಾಗತಿಸಿರುವ ಅವರು, ದೇಗುಲ ಸಂದರ್ಶಿಸಲು ಬರುವ ಭಕ್ತರಿಗೆ ಸುರಕ್ಷಿತ ಪ್ರಯಾಣವನ್ನು ನಮ್ಮ ಸರ್ಕಾರ ಖಾತ್ರಿಪಡಿಸುತ್ತದೆ ಎಂದು ಹೇಳಿದ್ದಾರೆ.
भगवान शिव की कृपा से मुझे कल श्री केदारनाथ धाम के कपाट खुलने के शुभ अवसर पर जाने का सौभाग्य प्राप्त हो रहा है।
“प्रणाम आपको बारम्बार, जय हो बाबा श्री केदार”@narendramodi@JPNadda pic.twitter.com/VUNCTSHZXb
— Pushkar Singh Dhami (@pushkardhami) May 5, 2022
ಕೊವಿಡ್-19 ಶಿಷ್ಟಾಚಾರದ ಹಿನ್ನೆಲೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಪ್ರತಿದಿನ ಸಂದರ್ಶಿಸಬಹುದಾದ ಭಕ್ತರ ಸಂಖ್ಯೆಯನ್ನು 12 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಬದರಿನಾಥಕ್ಕೆ ಒಂದು ದಿನಕ್ಕೆ 15 ಸಾವಿರ ಮಂದಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಚಾರ್ ಧಾಮ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಪ್ರವಾಸಿಗರು ಕೊವಿಡ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ.
#WATCH | The doors of Kedarnath Dham opened for devotees. Kedarnath’s Rawal Bhimashankar Linga opened the doors of Baba Kedar. On the occasion of the opening of the doors thousands of devotees were present in the Dham. pic.twitter.com/NWS4jtGstb
— ANI UP/Uttarakhand (@ANINewsUP) May 6, 2022
ಇದನ್ನೂ ಓದಿ: ಇನ್ನೂ ಮಂಜುಗಾಲ ಪೂರ್ತಿ ಆವರಿಸಿಲ್ಲ, ಅದಾಗಲೇ ಕೇದಾರನಾಥ ದೇಗುಲ ವಾತಾವರಣ ಹೀಗಿದೆ ನೋಡಿ
ಇದನ್ನೂ ಓದಿ: ಧರಮ್ ಸಂಸದ್ ಕುರಿತು ಉತ್ತರಾಖಂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್