AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತ್ ಶಾ ಮನೆಗೆ ಬಂದಾಗ ಸಿಹಿ ಮೊಸರು ತಿನ್ನಿಸಿ ಅಂತ ಸೌರವ್ ಗಂಗೂಲಿಗೆ ಮಮತಾ ಬ್ಯಾನರ್ಜಿ ಸಲಹೆ ನೀಡಿದರು

ಅಮಿತ್ ಶಾ ಅವರು ಗಂಗೂಲಿ ಮನೆಗೆ ಭೇಟಿ ನೀಡಲಿರುವ ಸಾಧ್ಯತೆಯ ಬಗ್ಗೆ ಮತ್ತಷ್ಟು ಪ್ರತಿಕ್ರಿಯಿಸಿರುವ ಮಮತಾ ಅವರು, ಮನೆಗೆ ಅತಿಥಿಗಳು ಬಂದಾಗ ಅವರನ್ನು ಸತ್ಕರಿಸಿ ಉಪಚರಿಸುವುದು ಪಶ್ಚಿಮ ಬಂಗಾಳದ ಸಂಪ್ರದಾಯವಾಗಿದೆ ಎಂದಿದ್ದಾರೆ.

ಅಮಿತ್ ಶಾ ಮನೆಗೆ ಬಂದಾಗ ಸಿಹಿ ಮೊಸರು ತಿನ್ನಿಸಿ ಅಂತ ಸೌರವ್ ಗಂಗೂಲಿಗೆ ಮಮತಾ ಬ್ಯಾನರ್ಜಿ ಸಲಹೆ ನೀಡಿದರು
ಮಮತಾ ಬ್ಯಾನರ್ಜಿ, ಸೌರವ್ ಗಂಗೂಲಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 06, 2022 | 12:22 AM

ಪಶ್ಚಿಮ ಬಂಗಾಳದಲ್ಲಿ ಮಮತಾ ದೀದಿಯನ್ನು ರಾಜಕೀಯವಾಗಿ ದುರ್ಬಲಗೊಳಿಸಲು ಬಿಜೆಪಿ (BJP) ಶತಾಯ ಗತಾಯ ಪ್ರಯತ್ನಿಸುತ್ತಿದೆ. ಮಮತಾ ಬ್ಯಾನರ್ಜಿಗೆ (Mamata Banerjee) ಸವಾಲಾಗುವ, ಪೈಪೋಟಿ ನೀಡುವ ಒಬ್ಬ ಸಮರ್ಥ ವ್ಯಕ್ತಿಗಾಗಿ ಬಹಳ ದಿನಗಳಿಂದ ತಲಾಷ್ ನಡೆದಿದೆ. ಅದರೆ ಬಿಜೆಪಿಯ ದುರಾದೃಷ್ಟವೆಂದರೆ, ಅಂಥವರು ಯಾರೂ ಸಿಗುತ್ತಿಲ್ಲ. ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆಗೆ ಮೊದಲು ತೃಣಮೂಲ ಪಕ್ಷದ ಸದಸ್ಯರಿಗೆ ಗಾಳ ಹಾಕಿ ಕೆಲವರನ್ನು ಹಿಡಿದು ದೀದಿಗೆ ಪರ್ಯಾಯ ನಾಯಕರಾಗಿ ಪ್ರೊಜೆಕ್ಟ್ ಮಾಡುವ ಪ್ರಯತ್ನವೂ ವಿಫಲವಾಯಿತು. ಅದರೆ ಬಿಜೆಪಿ ಪ್ರಯತ್ನ ನಿಲ್ಲಿಸಿಲ್ಲ. ಮಾಜಿ ಕ್ರಿಕೆಟರ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿಯಲ್ಲಿ (Sourav Ganguly) ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ವರಿಷ್ಠ ನಾಯಕರಲ್ಲಿ ಒಬ್ಬರಾಗಿರುವ ಅಮಿತ್ ಶಾ ಅವರಿಗೆ ದೀದಿಗೆ ಸವಾಲೊಡ್ಡುವ ನಾಯಕ ಕಾಣಿಸುತ್ತಿದ್ದಾನೆ.

ವಿಷಯವೇನೆಂದರೆ, ಅಮಿತ್ ಶಾ ಅವರು ತಮ್ಮ 2 ದಿನಗಳ ಪಶ್ಚಿಮ ಬಂಗಾಳ ಪ್ರವಾಸದ ಸಂದರ್ಭದಲ್ಲಿ ಗಂಗೂಲಿ ಮನೆಗೆ ಬೇಟಿ ನೀಡುವ ವದಂತಿ ಇದೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಮಮತಾ ಅವರು, ಶಾ ಮನೆಗೆ ಬಂದಾಗ ಅವರಿಗೆ ಸಿಹಿ ಮೊಸರು (ಮಿಶ್ತಿ ದೋಯ್) ತಿನ್ನಿಸಿ ಅಂತ ಗಂಗೂಲಿಗೆ ಹೇಳುತ್ತೇನೆ ಎಂದಿದ್ದಾರೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕೇಂದ್ರ ಗೃಹ ಸಚಿವರು ಶುಕ್ರವಾರ ಗಂಗೂಲಿ ಮನೆಗೆ ನೀಡುವ ನಿರೀಕ್ಷೆ ಇದೆ. ಸಾಯಂಕಾಲ 6 ಗಂಟೆಗೆ ಅವರು ಕೊಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದು ಇದರಲ್ಲಿ ಗಂಗೂಲಿ ಅವರು ಪತ್ನಿ ದೋನಾ ಗಂಗೂಲಿ ಅವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ನಂತರ ದೋನಾ, ಶಾ ಅವರನ್ನು ತಮ್ಮ ಮನೆಗೆ ಕರೆದೊಯ್ಯಲಿದ್ದಾರೆ. ಆದರೆ, ಶಾ ಅವರ ಶೆಡ್ಯೂಲ್ನಲ್ಲಿ ಗಂಗೂಲಿಗಳ ಮನಗೆ ಭೇಟಿ ನೀಡುವ ಉಲ್ಲೇಖವಿಲ್ಲ.

ಅಮಿತ್ ಶಾ ಅವರು ಗಂಗೂಲಿ ಮನೆಗೆ ಭೇಟಿ ನೀಡಲಿರುವ ಸಾಧ್ಯತೆಯ ಬಗ್ಗೆ ಮತ್ತಷ್ಟು ಪ್ರತಿಕ್ರಿಯಿಸಿರುವ ಮಮತಾ ಅವರು, ಮನೆಗೆ ಅತಿಥಿಗಳು ಬಂದಾಗ ಅವರನ್ನು ಸತ್ಕರಿಸಿ ಉಪಚರಿಸುವುದು ಪಶ್ಚಿಮ ಬಂಗಾಳದ ಸಂಪ್ರದಾಯವಾಗಿದೆ ಎಂದಿದ್ದಾರೆ.

‘ಗೃಹ ಸಚಿವರು ಸೌರವ್ ಮನೆಗೆ ಭೇಟಿ ನೀಡಿದರೆ ಅದರಲ್ಲಿ ತಪ್ಪೇನಿದೆ? ಅವರಿಗೆ ಸಿಹಿ ಮೊಸರು ತಿನ್ನಿಸುವಂತೆ ಸೌರವ್​ಗೆ ಹೇಳ್ತೀನಿ,’ ಎಂದು ಗುರುವಾರ ಮಾಧ್ಯಮದವರೊಂದಿಗೆ ಮಾತಾಡಿದ ಮಮತಾ ಬ್ಯಾನರ್ಜೀ ಹೇಳಿದರು.

2021 ರ ಪಶ್ಚಿಮ ಬಂಗಾಳದ ವಿಧಾನ ಸಭೆ ಚುನಾವಣೆಗೆ ಮೊದಲು ಬಿಜೆಪಿ ಸೇರಬಹುದಾದ ಹಲವು ಪ್ರಮುಖರಲ್ಲಿ ಸೌರವ್ ಗಂಗೂಲಿ ಅವರ ಹೆಸರು ಕೂಡ ಇತ್ತು. ಆದರೆ ಅದು ಹಾಗಾಗಲಿಲ್ಲ.

ಅದರೆ, ಶುಕ್ರವಾರ ಶಾ ಅವರು ಗಂಗೂಲಿ ಮನೆಗೆ ಬೇಟಿ ನೀಡುವ ಬಗ್ಗೆ ಹರಡಿರುವ ವದಂತಿಯ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟರ್ ಮುಂದಿನ ರಾಜಕೀಯ ನಡೆ ಕುತೂಹಲವನ್ನಂತೂ ಮೂಡಿಸಿದೆ.

ಇದನ್ನೂ ಓದಿ:   ಅಮಿತ್ ಶಾ ದೆಹಲಿ ಹೋದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತಾಡುತ್ತೇವೆ ಎಂದಿದ್ದಾರೆ -ಸಿಎಂ ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್