Odisha Cyclone: ಒಡಿಶಾದಲ್ಲಿ ಚಂಡಮಾರುತದ ಭೀತಿ; 18 ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸರ್ಕಾರ ಆದೇಶ
Weather Today: ಚಂಡಮಾರುತದ ಪ್ರಭಾವದಿಂದ ಶುಕ್ರವಾರದ ವೇಳೆಗೆ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಅದರ ಸುತ್ತಮುತ್ತ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಎಂದು IMD ಒಡಿಶಾ ಸರ್ಕಾರಕ್ಕೆ ತಿಳಿಸಿದೆ.
ಭುವನೇಶ್ವರ: ಒಡಿಶಾದಲ್ಲಿ ಮತ್ತೊಂದು ಚಂಡಮಾರುತ (Cycone) ಏಳುವ ಸಾಧ್ಯತೆಗಳಿದ್ದು, ಈಗಾಗಲೇ ಅಲ್ಲಿನ ರಾಜ್ಯ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಗಳಿಗೆ ಆದೇಶ ನೀಡಿದೆ. ಬಂಗಾಳಕೊಲ್ಲಿಯಿಂದ ಬರುವ ಸಂಭವನೀಯ ಚಂಡಮಾರುತಕ್ಕೆ ಸಿದ್ಧರಾಗಿರಲು ಒಡಿಶಾ ಸರ್ಕಾರ (Odisha Government) 18 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ದಕ್ಷಿಣ ಭಾರತದಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು, ಮೇ 9ರವರೆಗೆ ಮಳೆ (Rainfall) ಮುಂದುವರೆಯುವ ನಿರೀಕ್ಷೆಯಿದೆ. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲು ಒಡಿಶಾ ಸರ್ಕಾರ ಆದೇಶಿಸಿದೆ.
ಒಡಿಶಾದ ಗಂಜಾಂ, ಗಜಪತಿ, ಪುರಿ, ಖುರ್ದಾ, ಜಗತ್‌ಸಿಂಗ್‌ಪುರ, ಕೇಂದ್ರಪಾರ, ಜಾಜ್‌ಪುರ್, ಭದ್ರಕ್, ಬಾಲಸೋರ್, ನಯಾಗಢ, ಕಟಕ್, ಮಯೂರ್‌ಭಂಜ್, ಕಿಯೋಂಜಾರ್, ಧೆಂಕನಲ್, ಮಲ್ಕನಗಿರಿ, ಕೊರಾಪುಟ್ ಮತ್ತು ಮಲ್ಕನಗಿರಿ, ಕೊರಾಪುಟ್ ಜಿಲ್ಲಾಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಒಡಿಶಾ ಸರ್ಕಾರ ಆದೇಶಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ನಿಯಮಿತವಾಗಿ ಪಾಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸರ್ಕಾರದ ಅಧಿಕಾರಿಗಳು ಹವಾಮಾನ ಇಲಾಖೆ ಶಿಫಾರಸು ಮಾಡಿದ ಕ್ರಮಗಳ ಅನುಸರಣೆಯ ವರದಿಯನ್ನು ಮೇ 6ರೊಳಗೆ ತಮ್ಮ ಜಿಲ್ಲೆಗಳಲ್ಲಿ ಮಾಡಲಾದ ವ್ಯವಸ್ಥೆಗಳ ವಿವರವಾದ ಮಾಹಿತಿಯೊಂದಿಗೆ ಕಳುಹಿಸಲು ಆದೇಶಿಸಿದ್ದಾರೆ.
THUNDERSTORM WITH LIGHTENING AND GUSTY SURFACE WIND SPEED REACHING 30- #40KMPH LIKELY OCCUR OVER SOME PARTS OF DISTRICTS OF BHADRAK, JAJPUR, KANDHAMAL, CUTTACK , NAYAGARH, KHORDA (INCLUDING BHUBANESWAR), GANJAM, GAJAPATI, NAWARANGPUR, KALAHANDI, DEOGARH DURING NEXT 3HRS pic.twitter.com/nGM98Ww5qX
— Meteorological Centre, Bhubaneswar (@mcbbsr) May 5, 2022
ಚಂಡಮಾರುತದ ಪ್ರಭಾವದಿಂದ ಶುಕ್ರವಾರದ ವೇಳೆಗೆ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಅದರ ಸುತ್ತಮುತ್ತ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ ಎಂದು IMD ಒಡಿಶಾ ಸರ್ಕಾರಕ್ಕೆ ತಿಳಿಸಿದೆ. ಮುಂದಿನ 48 ಗಂಟೆಗಳಲ್ಲಿ ಈ ವ್ಯವಸ್ಥೆಯು ಖಿನ್ನತೆಯಾಗಿ ತೀವ್ರಗೊಂಡು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. (Source)
ಸುರಕ್ಷಿತ ಶಾಲಾ ಕಟ್ಟಡಗಳು, ದುರ್ಬಲ ಪ್ರದೇಶಗಳಲ್ಲಿನ ಸಾರ್ವಜನಿಕ ಕಟ್ಟಡಗಳನ್ನು ಅಗತ್ಯಕ್ಕೆ ಅನುಗುಣವಾಗಿ ತಾತ್ಕಾಲಿಕ ಆಶ್ರಯ ಎಂದು ಗುರುತಿಸಬೇಕು. ಚಂಡಮಾರುತ ಮತ್ತು ಪ್ರವಾಹ ಶೆಲ್ಟರ್‌ಗಳನ್ನು ತಕ್ಷಣ ಸ್ಥಳೀಯ ತಹಸೀಲ್ದಾರರು ಪರಿಶೀಲಿಸಬೇಕು ಎಂದು ಆದೇಶಿಸಲಾಗಿದೆ. ಜನರಿಗೆ ನೀಡಲಾದ ಆಶ್ರಯಗಳಲ್ಲಿ ಲಭ್ಯವಿರುವ ನೀರು ಸರಬರಾಜು, ಶೌಚಾಲಯಗಳು, ಜನರೇಟರ್‌ಗಳು, ಯಾಂತ್ರಿಕ ಕಟ್ಟರ್‌ಗಳು ಮತ್ತು ಇತರ ಉಪಕರಣಗಳನ್ನು ಪರಿಶೀಲಿಸಬೇಕು. ಚಂಡಮಾರುತದ ಗರಿಷ್ಠ ಅವಧಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುವುದರಿಂದ, ಎಲ್ಲಾ ಕಚೇರಿಗಳು ಆ ಅವಧಿಗೆ ತಮ್ಮ ಬ್ಯಾಕಪ್ ವಿದ್ಯುತ್ ವ್ಯವಸ್ಥೆಯನ್ನು ಮಾಡಬೇಕು. ವಿವಿಧ ಕಚೇರಿಗಳು ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುವ ಜನರೇಟರ್‌ಗಳನ್ನು ತಕ್ಷಣವೇ ಪರಿಶೀಲಿಸಿ ಸಾಕಷ್ಟು ಇಂಧನ ಸಂಗ್ರಹಿಸಬೇಕು ಎಂದು ಸೂಚಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆಯು ಒಡಿಶಾದಲ್ಲಿ ಮೇ 8ರ ಸುಮಾರಿಗೆ ಗಂಟೆಗೆ 75 ಕಿಲೋಮೀಟರ್ ವೇಗದಲ್ಲಿ ಚಂಡಮಾರುತ ಬೀಸುವ ಮುನ್ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಎಚ್ಚರಿಕೆಗಳನ್ನು ವಹಿಸಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Thu, 5 May 22